Asianet Suvarna News Asianet Suvarna News

ಡೈನಾಮಿಕ್ ಐಲ್ಯಾಂಡ್: ಆ್ಯಂಡ್ರಾಯ್ಡ್ ಫೋನ್‌ಗಳಿಗೂ ಐಫೋನ್ 14 ರೀತಿಯ ಫೀಚರ್?

*ಐಫೋನ್ 14 ಸರಣಿಯ ಫೋನ್‌ಗಳಲ್ಲಿ ಡೈನಾಮಿಕ್ ಐಲ್ಯಾಂಡ್  ಫೀಚರ್ ಜನಪ್ರಿಯವಾಗುತ್ತಿದೆ
*ಈ ಮೂಲಕ ಆಪಲ್ ತಂತ್ರಜ್ಞಾನ ಆವಿಷ್ಕಾರದಲ್ಲಿ ತಾನೇ ಕಿಂಗ್ ಎಂದು ಸಾಬೀತುಪಡಿಸಿದೆ
*ಡೈನಾಮಿಕ್ ಐಲ್ಯಾಂಡ್ ಫೀಚರ್ ಆಂಡ್ರಾಯ್ಡ್ ಫೋನುಗಳಲ್ಲೂ ಕಾಣಿಸಿಕೊಳ್ಳಬಹುದು
 

Android smartphone may have Dynamic Island features like iPhone 14 has
Author
First Published Sep 23, 2022, 3:56 PM IST

ತಂತ್ರಜ್ಞಾನ ವಿಷಯದಲ್ಲಿ ಆ್ಯಪಲ್ (Apple) ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗಿಂತ ಯಾವಾಗಲೂ ಮುಂದಿರುತ್ತದೆ. ಈ ವಿಷಯದಲ್ಲಿ ಅನುಮಾನವೇ ಇಲ್ಲ. ಹಾಗಾಗಿಯೇ ಅದು ಸ್ಮಾರ್ಟ್‌ಫೋನ್ ಜಗತ್ತಿನಲ್ಲೇ ನಂಬರ್ 1 ಕಂಪನಿಯಾಗಿರುವುದು. ತನ್ನ ಉತ್ಕೃಷ್ಟತೆಗೆ ಅದು ಹೆಸರುವಾಸಿಯಾಗಿದೆ. ಈಗ ಮತ್ತೆ ಐಫೋನ್ 14 ಬಿಡುಗಡೆಯ ಬಳಿಕ ಇದು ಮತ್ತೆ ಸಾಬೀತಾಗಿದೆ. ಕಂಪನಿಯು  ಹೊಸ ಡೈನಾಮಿಕ್ ಐಲ್ಯಾಂಡ್ (Dynamic Island) ಫೀಚರ್ ಪರಿಚಯಿಸಿದೆ.  ಈ ಇದು  ಇದು ಪರದೆಯ ಮೇಲ್ಭಾಗದಲ್ಲಿ ನಾಚ್/ಪಿಲ್-ಹೋಲ್ ಫಾರ್ಮ್ ಕಟೌಟ್ ರೀತಿಯಲ್ಲಿದೆ.  ಈ ಮೂಲಕ ಆ್ಯಪಲ್ ತಾನು ಇತರ ಕಂಪನಿಗಳಿಗಿಂತ ಹೇಗೆ ಭಿನ್ನ ತೋರಿಸಿಕೊಟ್ಟಿದೆ. ಕೆಲವು ವರ್ಷಗಳ ಹಿಂದೆ ಹೆಡ್‌ಫೋನ್ ಪೋರ್ಟ್ ಇಲ್ಲದೆ ಐಫೋನ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಸಂಸ್ಥೆಯು ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿತು. ಒಟ್ಟಾರೆಯಾಗಿ ಆಡಿಯೊ ಭಾಗದ ಡೈನಾಮಿಕ್ಸ್ ಏರ್‌ಪಾಡ್‌ಗಳ ಪರಿಣಾಮವಾಗಿ ಬದಲಾಗಲು ಪ್ರಾರಂಭಿಸಿದ್ದು ಸುಳ್ಳಲ್ಲ.

ಐಫೋನ್ 14 ಪ್ರೊ ಸರಣಿಯನ್ನು ಖರೀದಿ ಮಾಡಿದವರು ಮತ್ತು ಮಾಡದೇ ಇರುವವರಲ್ಲಿ ಐಫೋನ್‌ನಲ್ಲಿ ಪರಿಚಯಿಸಲಾಗಿರುವ ಡೈನಾಮಿಕ್ ಐಲ್ಯಾಂಡ್ ಹೆಚ್ಚು ಜನಪ್ರಿಯವಾಗುತ್ತಿದೆ. ಇದರೊಂದಿಗೆ ಆ್ಯಪಲ್ ಕಂಪನಿಯ ಇತಿಹಾಸ ಮತ್ತೆ ಪುನಾವರ್ತಿತವಾಗಿದೆ ಎಂದು ಹೇಳಬಹುದು. ರಿಯಲ್ ಮಿ ಐಲ್ಯಾಂಡ್‌ನಲ್ಲಿ ಜನರು ಏನನ್ನು ಬಳಸಲು ಬಯಸುತ್ತಾರೆ ಎಂದು ಕೇಳುವ ಮೂಲಕ ರಿಯಲ್ ಮಿ ಕಂಪನಿಯುು ತನ್ನ ಮುಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೀಚರ್ ಬಳಸುವ ಬಗ್ಗೆ ಹಿಂಟ್ ಕೊಟ್ಟಿದೆ ಎಂದು ಹೇಳಬಹುದು. 

ರಿಯಲ್‌ಮಿ ಮಾತ್ರವಲ್ಲದೇ Xiaomi ತನ್ನ MIUI ಪ್ಲಾಟ್‌ಫಾರ್ಮ್‌ನಲ್ಲಿ ಈ ಹೊಸ ಫೀಚರ್  ಮೇಲೆ ಕಾರ್ಯನಿರ್ವಹಿಸಬಹುದೆಂದು ಎಂದು ವರದಿಗಳು ಹೇಳುತ್ತಿವೆ. ಮತ್ತೆ ಈ ದಿಕ್ಕಿನಲ್ಲಿ ಸ್ಯಾಮ್ಸಂಗ್, ಒಪ್ಪೋ ಸೇರಿದಂತೆ ಇತರ ಕಂಪನಿಗಳು ಯೋಚಿಸಲು ತುಂಬಾ ದಿನಗಳೇನೂ ಬೇಕಾಗಿಲ್ಲ. ಒಟ್ಟಾರೆಯಾಗಿ ಎಲ್ಲ ಕಂಪನಿಗಳು ಈ ಡೈನಾಮಿಕ್ ಐಲ್ಯಾಂಡ್ ಫೀಚರ್‌ ಬಗ್ಗೆ ಫಿದಾ ಆಗಿವೆ. ಗ್ರಾಹಕರೂ ಈ ಆ್ಯಪಲ್‌ನ ಹೊಸತನವನ್ನು ಮೆಚ್ಚಿದ್ದು, ಆಂಡ್ರಾಯ್ಡ್‌ ಬಳಕೆದಾರರು ಅದೇ ಫೀಚರ್ ನಿರೀಕ್ಷಿಸುತ್ತಿದ್ದಾರೆ ಎನ್ನಬಹುದು.

ಅಮೆಜಾನ್ ಸೇಲ್ ಟೈಮ್‌ನಲ್ಲಿ OnePlus 10R ಪ್ರೈಮ್ ಬ್ಲೂ ಬಿಡುಗಡೆ

ಪಿಕ್ಸೆಲ್ ಸರಣಿಯ ಹೊಸ ಫೋನ್ ಲಾಂಚ್ ಮಾಡಲಿರುವ ಗೂಗಲ್ ಕೂಡ ಇದೇ ರೀತಿಯ ನಿಯಂತ್ರಣವನ್ನು ಹೊಂದಿದೆ ಎಂದು ಹೇಳಬಹುದು. ಡೈನಾಮಿಕ್ ಐಲ್ಯಾಂಡ್ ಫೀಚರ್  ಅಭಿವೃದ್ಧಿಯನ್ನು ಪ್ರಾರಂಭಿಸುವ ಮೊದಲು One UI ಪ್ಲಾಟ್ಫಾರ್ಮ್ ಅನ್ನು ರಚಿಸಲು ಬಳಸಲಾಗುವ AOSP ಅನ್ನು ಮಾರ್ಪಡಿಸಲು ಇತರರಿಗೆ Samsung ಅಗತ್ಯ ಇದ್ದೇ ಇರುತ್ತದೆ.

ಯಾವುದೇ ಸಂದರ್ಭದಲ್ಲಿ, ಪ್ರಸ್ತುತ ಬಳಕೆಯಲ್ಲಿರುವ ಡೈನಾಮಿಕ್ ಐಲ್ಯಾಂಡ್ ಗಾಗಿ  ಕೆಲವು Android ಫೋನ್ ವಿನ್ಯಾಸಗಳನ್ನು ನೋಡಲು ಆಸಕ್ತಿದಾಯಕವಾಗಿದೆ (ಡೆವಲಪರ್ಗಳು ತ್ವರಿತವಾಗಿ ಚಲಿಸುತ್ತಾರೆ). ಮುಂದಿನ ದಿನಗಳಲ್ಲಿ ಇವುಗಳಲ್ಲಿ ಹೆಚ್ಚಿನದನ್ನು ನಾಚ್ನೊಂದಿಗೆ ನೋಡುವುದನ್ನು ನಾವು ನಿರೀಕ್ಷಿಸಬಹುದಾಗಿದೆ.ಡಿಸ್ಪ್ಲೇಯಲ್ಲಿ ನಾಚ್ ಜಾಗವನ್ನು ಕೇವಲ ಕ್ಯಾಮೆರಾಗಳಿಗಾಗಿ ಮಾತ್ರವಲ್ಲದೇ ಇತರ ಉದ್ದೇಶಗಳಿಗೂ ಬಳಸಬಹುದು ಎಂಬ ಸಂಗತಿಯನ್ನು ಆ್ಯಪಲ್ ಉದ್ಯಮದ ಎತರ ಕಂಪನಿಗಳಿಗೆ ಮನವರಿಕೆ ಮಾಡಿಕೊಟ್ಟಿರುವ ಹಾಗಿದೆ.  ಈಗಾಗಲೇ ಐಫೋನ್ 14 ಸರಣಿಯ ಫೋನುಗಳಲ್ಲಿನ ಈ ಫೀಚರ್ ಹೆಚ್ಚು ಜನಪ್ರಿಯವಾಗುತ್ತಿದೆ. ಬಳಕೆದಾರರು ಆ್ಯಪಲ್ನ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Flipkart Sale: ಕಡಿಮೆ ರೇಟಿಗೆ ಸಿಗಲಿದೆ 5 ದುಬಾರಿ ಫೋನ್‌ಗಳು!

ಡಿಸ್‌ಪ್ಲೇ‌ಯಲ್ಲಿ ನಾಚ್ ಉಳಿಸಿಕೊಳ್ಳಬೇಕಾ ಬೇಡವಾ ಎಂಬ ಬಗ್ಗೆ ನಿರ್ಧರಿಸಲು ಆ್ಯಪಲ್ ಸಾಕಷ್ಟು ಸಮಯವನ್ನು ತೆಗೆದೆುಕೊಂಡಿದೆ. ಅಂತಿಮವಾಗಿ ಅದು ತನ್ನ ಕಾರ್ಯಯೋಜನೆಯನ್ನು ಜಾರಿಗೊಳಿಸಿದ ಮೇಲೆ ಎಲ್ಲರಿಗೂ ಅದು ಇಷ್ಟವಾಗಿದೆ. ಹೀಗಾಗಿ, ನಾಚ್‌ ಜಾಗವನ್ನು ಬೇರೆಯ ಉದ್ದೇಶಕ್ಕೆ ಬಳಸಿಕೊಳ್ಳುವ ಡೈನಾಮಿಕ್ ಐಲ್ಯಾಂಡ್ ಬಗ್ಗೆ ಈಗ ಎಲ್ಲರಿಂದಲೂ ಮೆಚ್ಚುಗೆ ಕೇಳಿಬರುತ್ತಿದೆ.

Follow Us:
Download App:
  • android
  • ios