ನೋಕಿಯಾದಿಂದ ಮೊದಲ ಟ್ಯಾಬ್ಲೆಟ್! ನೋಕಿಯಾ ಟಿ20 ಟ್ಯಾಬ್ ವಿಶೇಷತೆಗಳೇನು?
ನೋಕಿಯಾ ಕಂಪನಿಯು ಟ್ಯಾಬ್ಲೆಟ್ ಬಿಡುಗಡೆ ಮಾಡಲಿದೆಯಾ? ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಹೌದು. 2014ರ ಬಳಿಕ ನೋಕಿಯಾ ಕಂಪನಿಯು ಇದೇ ಮೊದಲ ಬಾರಿಗೆ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಹಲವು ಮಾಹಿತಿಗಳು ಸೋರಿಕೆಯಾಗಿವೆ.
ಜಬರ್ದಸ್ತ್ ಮೊಬೈಲ್ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಲೀಡರ್ ಆಗಿದ್ದ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಅದೇ ಖದರ್ ಅನ್ನು ಇದುವರೆಗೂ ತೋರಿಸಲು ಸಾಧ್ಯವಾಗಿಲ್ಲ. ಹಾಗಿದ್ದೂ, ಕಂಪನಿಯ ಅನೇಕ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನ ಗ್ರಾಹಕ ವಲಯವನ್ನು ಸಂತುಷ್ಟಗೊಳಿಸುವ ಕೆಲಸವನ್ನು ಮಾಡುತ್ತ ಬಂದಿದೆ.
ಈಗಿನ ಹೊಸ ಸುದ್ದಿ ಏನೆಂದರೆ, ಸ್ಮಾರ್ಟ್‌ಫೋನ್‌ಗಳನ್ನೇಷ್ಟೇ ಉತ್ಪಾದಿಸುತ್ತಿದ್ದ ನೋಕಿಯಾ ಇದೇ ಮೊದಲ ಬಾರಿಗೆ ಟ್ಯಾಬ್ಲೆಟ್ ಉತ್ಪಾದನೆಗೆ ಮುಂದಾಗಿದೆ. ನೋಕಿಯಾ ಕಂಪನಿಯು ನೋಕಿಯಾ ಟಿ20(Nokia T20) ಟ್ಯಾಬ್ಲೆಟ್ ಬಿಡುಗಡೆ ಮಾಡಲಿದೆ. ಈ ಟ್ಯಾಬ್ಲೆಟ್ ಲಾಂಚ್ ಆಗುವ ಮುನ್ನವೇ ಅದರ ವಿಶೇಷತೆಗಳು ಮತ್ತು ಬೆಲೆಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಮಾಹಿತಿಗಳು ಸೋರಿಕೆಯಾಗಿವೆ.
ಜುಲೈ 30ಕ್ಕೆ ಬರ್ತಿದೆ ಮೈಕ್ರೋಮ್ಯಾಕ್ಸ್ ಐಎನ್ 2ಬಿ ಸ್ಮಾರ್ಟ್‌ಫೋನ್
2014ರ ಬಳಿಕ ನೋಕಿಯಾ ಬಿಡುಗಡೆ ಮಾಡುತ್ತಿರುವ ಮೊದಲ ಟ್ಯಾಬ್ಲೆಟ್ ಇದಾಗಿದೆ. ಅಲ್ಲದೇ ಎಚ್‌ಎಂಡಿ ಗ್ಲೋಬಲ್ ಅಧೀನಕ್ಕೆ ಬಂದ ಮೇಲೆ ಬಿಡುಗಡೆಯಾಗುತ್ತಿರುವ ಮೊದಲ ಟ್ಯಾಬ್ ಎಂದೂ ಹೇಳಲಾಗುತ್ತಿದೆ. ಭಾರೀ ನಿರೀಕ್ಷೆಗಳನ್ನು ಮೂಡಿಸಿರುವ ನೋಕಿಯಾ ಟಿ20 ಟ್ಯಾಬ್ಲೆಟ್ ಈಗಾಗಲೇ ಇಂಗ್ಲೆಂಡ್ ರಿಟೇಲರ್ಸ್ ವೆಬ್‌ಸೈಟ್‌ಲ್ಲಿ ಲಿಸ್ಟ್ ಮಾಡಲಾಗಿದೆ. ಹಾಗಾಗಿ, ಶೀಘ್ರವೇ ಈ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನೋಕಿಯಾ ಕಂಪನಿಯ ಈ ಹೊಸ ನೋಕಿಯಾ ಟಿ20 ಟ್ಯಾಬ್ಲೆಟ್ ಎರಡು ವೆರಿಯೆಂಟ್‌ಗಳಲ್ಲಿ ಸಿಗಲಿದೆ. ಮೊದಲನೆಯದ್ದು ವೈಫೈ ಮತ್ತು ಎರಡನೆಯದ್ದು ವೈಫೈ ಪ್ಲಸ್ 4ಜಿ. ಈ ಎರಡೂ ವೆರಿಯೆಂಟ್‌ಗಳು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿವೆ.
ಮತ್ತೊಂದು ವಿಶೇಷ ಎಂದರೆ, ರಷ್ಯಾದ ಸರ್ಟಿಫಿಕೇಷನ್ ವೆಬ್‌ಸೈಟ್‌ಗಳಲ್ಲಿ ನೋಕಿಯಾ ಕಂಪನಿಯ ಟಿಎಂ-1392 ಮತ್ತು ಟಿಎ-1397 ಎಂಬೆರಡು ಟ್ಯಾಬ್ಲೆಟ್ ಮಾಡೆಲ್‌ಗಳು ಕಾಣಿಸಿಕೊಂಡಿವೆ. ಈ ಮಾಡೆಲ್‌ಗಳೇ ಮುಂದೆ ಶೀಘ್ರವೇ ನೋಕಿಯಾ ಟಿ20 ಟ್ಯಾಬ್ಲೆಟ್ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣ, ಏನೆಲ್ಲ ವಿಶೇಷತೆಗಳಿವೆ?
ಇಂಗ್ಲೆಂಡ್‌ನ ರೀಟೇಲರ್ಸ್ ವೆಬ್‌ಸೈಟ್‌ನಲ್ಲಿ ದಾಖಲಿಸಿರುವ ಪ್ರಕಾರ, ನೋಕಿಯಾ ಟಿ20 ವೈಫೈ ಮಾಡೆಲ್ ಬೆಲೆ ಅಂದಾಜು 19,100 ರೂಪಾಯಿ ಇದ್ದರೆ, ವೈಫೈ ಪ್ಲಸ್ 4ಜಿ ಬೆಂಬಲವನ್ನು ಹೊಂದಿರುವ ವೆರಿಯೆಂಟ್ ಬೆಲೆ ಅಂದಾಜು 20,900 ರೂ. ಇರಲಿದೆ. ನೋಕಿಯಾ ಟಿ20 ಟ್ಯಾಬ್ಲೆಟ್ ಲಾಂಚ್, ವಿಶೇಷತೆಗಳು ಮತ್ತು ಬೆಲೆಯ ಬಗ್ಗೆ ಮಾಹಿತಿಯನ್ನು ನೋಕಿಯಾಮಾಬ್ ಮೊದಲು ಹಂಚಿಕೊಂಡಿದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ನೋಕಿಯಾ ಟಿ20 ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ಹಾಗಿದ್ದೂ, ಈ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ.
ಶೀಘ್ರವೇ ಬಿಡುಗಡೆಯಗಲಿರುವ ನೋಕಿಯಾ ಟಿ20 ಹಲವು ವಿಶಿಷ್ಟ ಫೀಚರ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ನೋಕಿಯಾ ಟಿ20 ಟ್ಯಾಬ್ಲೆಟ್ 10.36 ಇಂಚ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಹಾಗೂ ನೀಲಿ ಬಣ್ಣದ ಆಯ್ಕೆಯಲ್ಲಿ ಈ ಟ್ಯಾಬ್ಲೆಟ್ ಮಾರಾಟಕ್ಕೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನೋಕಿಯಾ ಟಿ20 ಟ್ಯಾಬ್ಲೆಟ್‌ಗೆ ಸಂಬಂಧಿಸಿದಂತೆ ಎಚ್‌ಎಂಡಿ ಗ್ಲೋಬಲ್ ಮತ್ತು ನೋಕಿಯಾ ಆಗಲೀ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ, ಈಗ ಹೊರ ಬಿದ್ದಿರುವ ಮಾಹಿತಿಯೆಲ್ಲವೂ ಸೋರಿಕೆಯೇ ಮಾಹಿತಿಯೇ ಆಗಿದೆ ಎಂಬುದನ್ನು ಗಮನಿಸಬಹುದು.
ನೋಕಿಯಾ 110 4ಜಿ ಫೀಚರ್ ಫೋನ್ ಲಾಂಚ್, ಮಾರಾಟ ಶುರು
ನೋಕಿಯಾ ಕಂಪನಿಯು ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಂತೂ ನೋಕಿಯಾ ಫೋನುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಆದರೆ, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅದೇ ಜಾದೂ ಅನ್ನು ಕಂಪನಿ ಮಾಡಲು ಸಾಧ್ಯವಾಗಿಲ್ಲ. ಇದರ ಮಧ್ಯೆಯೇ ಕಂಪನಿ ಈಗ ಟ್ಯಾಬ್ಲೆಟ್ ಬಿಡುಗಡೆ ಮಾಡುತ್ತಿರುವ ಸುದ್ದಿ ಸಹಜವಾಗಿಯೇ ನೋಕಿಯಾ ಅಭಿಮಾನಿಗಳಿಗೆ ಖುಷಿ ನೀಡಿರುವ ಸಾಧ್ಯತೆ ಇದ್ದೇ ಇರುತ್ತದೆ.