ಭಾರತದಲ್ಲೀಗ ಹಬ್ಬದ ಸೀಸನ್. ಹಾಗಾಗಿ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇರುತ್ತವೆ. ಈ ಸಾಲಿಗೆ ಜಿಯೊನೀ ಕೂಡ ಸೇರುತ್ತದೆ. ಈ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯು ತನ್ನ ಅಗ್ಗದ ಬೆಲೆಯ ಬಜೆಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. 

5,499 ರೂಪಾಯಿ ದರದ ಎಫ್8 ನಿಯೋ ಸ್ಮಾರ್ಟ್‌ಫೋನ್ ಅನ್ನು ಜಿಯೊನೀ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲೇ ಹೇಳಿದಂತೆ ಇದೊಂದು  ಬಜೆಟ್ ಸ್ಮಾರ್ಟ್‌ಫೋನ್. ಅಂದರೆ, ಕಡಿಮೆ ಬೆಲೆಯಲ್ಲಿ ಸಾಧ್ಯವಾದಷ್ಟು ಪ್ರೀಮಿಯಮ್ ಫೀಚರ್‌ಗಳನ್ನು ನೀಡುವ ಪ್ರಯತ್ನವನ್ನು ಕಂಪನಿ ಮಾಡಿದ್ದು, ಈ ಸ್ಮಾರ್ಟ್ ಫೋನ್ ನಿಮಗೆ ನೀಲಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ದೊರೆಯಲಿದೆ.

Google Meetನಲ್ಲಿ ಬ್ರೇಕೌಟ್ ರೂಮ್ ಸೃಷ್ಟಿಸುವುದು ಹೇಗೆ?

ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ 8 ಮೆಗಾಫಿಕ್ಸೆಲ್ ಕ್ಯಾಮರಾ ಹಾಗೂ ಫ್ರಂಟ್ ಕ್ಯಾಮರಾ 5 ಮೆಗಾಪಿಕ್ಸೆಲ್ ಇರಲಿದೆ. 4.45 ಇಂಚಿನ ಎಲ್‌ಸಿಡಿ ಸ್ಕ್ರೀನ್ ಅನ್ನು ಇದು ಹೊಂದಿದೆ. ಮತ್ತು ಕಂಪನಿ ಈ ಫೋನ್‌ಗೆ 3000 ಎಂಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. 2ಜಿಬಿ ರ್ಯಾಮ್ ಮತ್ತು 32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಬಳಕೆದಾರರಿಗೆ ಸಿಗಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ನೀವು 256 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.  ಅಕ್ಟೋಬರ್ 18ರಂದೇ ಕಂಪನಿ ಪ್ರೀವ್ಯೂ ಸೇಲ್ ಆಯೋಜಿಸಿತ್ತು ಸೇಲ್ ಆರಂಭವಾದ ಒಂದು ಗಂಟೆಯಲ್ಲಿ  ಎಫ್8 ನಿಯೋ ಫೋನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಕಂಡಿದ್ದವು. 
ಈ ಫೋನ್‌ನಲ್ಲಿ ನಿಮಗೆ ಫೇಸ್ ಅನ್‌ಲಾಕ್, ಸ್ಲೋ ಮೋಷನ್, ಪನೋರಮಾ, ನೈಟ್ ಮೋಡ್, ಟೈಮ್ ಲ್ಯಾಪ್ಸ್,  ಬ್ರಸ್ಟ್ ಮೋಡ್, ಕ್ಯೂಆರ್ ಕೋಡ್, ಫೇಸ್ ಬ್ಯೂಟಿ ಮತ್ತು ಇತರ ಫೀಚರ್‌ಗಳು ಲಭ್ಯವಾಗಲಿವೆ. ಸೆಲ್ಫಿಯಾಗಲಿ, ಗ್ರೂಪ್ ಫೋಟೋಗಳಾಗಲಿ, ಯಾವುದೇ ಚಿತ್ರವನ್ನು ಸೆರೆ ಹಿಡಿಯಲು ನಿಯೋ ಫೋನಿನ ಬ್ಯೂಟಿ ಮೋಡ್ ನಿಮಗೆ ಹೆಚ್ಚು ಸಹಕಾರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಐ ಕಂಪರ್ಟ್ ಫೀಚರ್ ತುಂಬ ವಿಶಿಷ್ಟವಾಗಿದ್ದು, ಕಡಿಮೆ ಬೆಳಕಿನಲ್ಲೂ ಸ್ಕ್ರೀನ್ ನೋಡಲು ಮತ್ತು ರೀಡಿಂಗ್‌ಗೆ ಅನುವು ಮಾಡಿಕೊಡುತ್ತದೆ. 


ಈ ಜಿಯೊನೀ ಎಫ್8 ನಿಯೋ ಸ್ಮಾರ್ಟ್ ಫೋನ್‌ನ್ನು ಸಂಪೂರ್ಣವಾಗಿ ಭಾರತೀಯ ತಂಡವೇ ಅಭಿವೃದ್ಧಿಪಡಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಭಾರತೀಯ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್‌ಫೋನ್ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಭರ್ಜರಿ ಆಫರ್‌ನೊಂದಿಗೆ ಒಪ್ಪೊ ದೀಪಾವಳಿ ಎಡಿಶನ್ ಮೊಬೈಲ್ ಬಿಡುಗಡೆ!
 

ಖಂಡಿತವಾಗಿಯೂ ಈ ಸ್ಮಾರ್ಟ್‌ಫೋನ್ ಹಬ್ಬದ ಸಂತೋಷವನ್ನು ಇನ್ನಷ್ಟು ಹೆಚ್ಚಿಸಲಿದೆ. ಇತ್ತೀಚಿನ ದಿನಗಳಲ್ಲಿ ಕೈಗೆಟುಕುವ ಹಾಗೂ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಬಯಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದು, ಅಂಥವರಿಗೆ ಈ ಫೋನ್ ಸಂತೋಷವನ್ನು ನೀಡಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಭಾರತದಲ್ಲಿ ಜಿಯೊನೀ ನಿರ್ವಹಣೆ ಮಾಡುವ ಜಿಐಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ  ಪ್ರದೀಪ್ ಜೈನ್ ಹೇಳಿದ್ದಾರೆ. 

ಹೊಸ ಅಧ್ಯಯನದ ಪ್ರಕಾರ, ಭಾರತದಲ್ಲಿ 35 ಕೋಟಿ ಫೀಚರ್ ಫೋನ್‌ಗಳ ಬಳಕೆದಾರರಿದ್ದಾರೆ. ಆದರೆ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ  ಈ ಫೀಚರ್ ಫೋನ್ ಬಳಕೆದಾರರಲ್ಲಿ ಶೇಕಡಾ 6ರಷ್ಟು ಕುಸಿತವಾಗಿದೆ. ಅಂದರೆ, ಭಾರತದ ಬಹಳಷ್ಟು ಗ್ರಾಹಕರು ಸ್ಮಾರ್ಟ್‌ಫೋನ್‌ಗಳತ್ತ ವಾಲುತ್ತಿದ್ದಾರೆ. ಅದರಲ್ಲೂ ಈ ಫೀಚರ್ ಫೋನ್ ಬಳಕೆದಾರರಿಗೆ ಅಗ್ಗದ ಬಜೆಟ್ ಫೋನ್‌ಗಳು ಹೆಚ್ಚು ಆಪ್ತವಾಗಲಿವೆ. ಭರವಸೆಯನ್ನು ನೀಡುವಂತ ಎಂಟ್ರಿ ಲೇವಲ್ ಸ್ಮಾರ್ಟ್ ಫೋನ್ ಸೆಗ್ಮೆಂಟ್ ಭಾರತದಲ್ಲಿ ಇನ್ನೂ ಖಾಲಿ ಇದೆ. ಜಿಯೊನೋ ಈ ವಿಭಾಗದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದೆ ಎನ್ನಲಾಗುತ್ತಿದೆ.

Work from home ಮಾಡುತ್ತಿದ್ದೀರಾ? ಹ್ಯಾಕರ್ಸ್ ಬಗ್ಗೆ ಇರಲಿ ಎಚ್ಚರ