ಬೆಂಗಳೂರು(ಅ.19): ಹಬ್ಬದ ಪ್ರಯುಕ್ತ ಒಪ್ಪೋ ಹೊಚ್ಚ ಹೊಸ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಿದೆ. ಹಲವು ವಿಶೇಷತೆ, ಬ್ಯಾಟರಿ ಪವರ್, ಮ್ಯಾಟ್ ಗೋಲ್ಡ್ ಸೇರಿದಂತೆ ಹತ್ತು ಹಲವು ಫೀಚರ್ಸ್‌ನೊಂದಿಗೆ ನೂತನ ಒಪ್ಪೊ ದಿವಾಲಿ(ದೀಪಾವಳಿ) ಎಡಿಶನ್ ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. 

ಆತ್ಮನಿರ್ಭರ್ ಭಾರತ: In ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್!

Oppo ಕಂಪನಿಯ ಹೊಚ್ಚ ಹೊಸ ಮೊಬೈಲ್ ಒಪ್ಪೋ F17 ಪ್ರೊ ದೀಪಾವಳಿ ಎಡಿಶನ್ ಭಾರತದಲ್ಲಿ ಬಿಡುಗಡೆಯಾಗಿದೆ.  Oppo F17 ಪ್ರೊ ಮ್ಯಾಟ್ ಗೋಲ್ಡ್ ಮಾದರಿಯ ಈ ಫೋನ್ 10,000 MaH ಪವರ್ ಬ್ಯಾಂಕ್ (18W) ಮತ್ತು ದೀಪಾವಳಿ ಎಕ್ಸ್‌ಕ್ಲೂಸಿವ್ ಬ್ಯಾಕ್ ಕೇಸ್ ಕವರ್ ಒಳಗೊಂಡಿದೆ. Oppo F17 ಪ್ರೊ ದೀಪಾವಳಿ ಎಡಿಶನ್ ಮೊಬೈಲ್  ಈ ಹಿಂದಿನ ಎಡಿಶನ್ ಮೊಬೈಲ್‌ಗಿಂತ ಕೊಚ್ಚ ದುಬಾರಿಯಾಗಿದೆ.

iPhone ಮೊಬೈಲ್ ರಿಪೇರಿಗೆ ಎಷ್ಟು ಖರ್ಚಾಗುತ್ತೆ? ಬೆಲೆ ಬಹಿರಂಗ ಪಡಿಸಿದ Apple!

Oppo F17 Pro ದೀಪಾವಳಿ ಎಡಿಶನ್ ಮೊಬೈಲ್ ಬೆಲೆ 23,990 ರೂಪಾಯಿ. ಇದು 8GB RAM ಹಾಗೂ 128 GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 

 

Oppo F17 Pro ದೀಪಾವಳಿ ಎಡಿಶನ್ ಮೊಬೈಲ್ ಮೇಲೆ ಕೆಲ ಆಫರ್ ನೀಡಲಾಗಿದೆ. ಎಕ್ಸ್‌ಚೇಂಜ್ ಆಫರ್ 16,400 ರಿಯಾಯಿತಿ ನೀಡಲಾಗಿದೆ. ಯಾವುದೇ ವೆಚಚ್ಚವಿಲ್ಲದೆ EMI ಆಯ್ಕೆ ನೀಡಲಾಗಿದೆ.  HDFC ಬ್ಯಾಂಕ್ ಕಾರ್ಡ್‌ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ, ಅಮೆಜಾನ್ ಪೇ. ICIC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಶೇಕಡಾ 5 ಪ್ರತಿಶತ ಕ್ಯಾಶ್‌ಬ್ಯಾಕ್. ಪ್ರಧಾನೇತರ ಸದಸ್ಯರಿಗೆ ಶೇಕಡಾ 3 ಪ್ರತಿಶತ ಕ್ಯಾಶ್‌ಬ್ಯಾಕ್, 12 ತಿಂಗಳವರೆಗೆ 70 ಪ್ರತಿಶತದಷ್ಟು ಮರು ಹಾಗೂ  7 ಪ್ರತಿಶತ ವಿನಿಮಯ ಬೋನಸ್ ಕೊಡುಗೆ ನೀಡಲಾಗಿದೆ .