ಭಾರತದಲ್ಲಿ ಆರಂಭವಾಗುತ್ತಿದೆ ವ್ಯಾಟ್ಸ್ಆ್ಯಪ್ ಪೇಮೆಂಟ್ ಸೇವೆ!
ಬ್ರೆಜಿಲ್ ದೇಶದಲ್ಲಿ ವ್ಯಾಟ್ಸ್ಆ್ಯಪ್ ಪೇಮೇಂಟ್ ಸೇವೆ ಆರಂಭಿಸಿದ ವ್ಯಾಟ್ಸಾಪ್ ಇದೀಗ ಭಾರತದಲ್ಲಿ ಸೇವೆ ಆರಂಭಿಸಲು ಸಜ್ಜಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.
ನವದೆಹಲಿ(ಜೂ.19): ಹಣ ಕಳುಹಿಸಲು, ಸ್ವೀಕರಿಸಲು ಹಲವು ಆ್ಯಪ್‌ಗಳು ಲಭ್ಯವಿದೆ. ಗೂಗಲ್ ಆ್ಯಪ್, ಪೇಟಿಎಂ ಸೇರಿದಂತೆ ಕೆಲ ಸೇವೆಗಳು ಪ್ರಸಿದ್ಧಿಯಾಗಿದೆ. ಇದೀಗ ಈ ಆ್ಯಪ್‌ಗಳಿಗೆ ಪ್ರತಿಸ್ಪರ್ಧಿಯಾಗಿ ವ್ಯಾಟ್ಸ್ಆ್ಯಪ್ ಪೇಮೆಂಟ್ ಆರಂಭಗೊಂಡಿದೆ. ಬ್ರೆಜಿಲ್ ದೇಶದಲ್ಲಿ ಆರಂಭಿಸಿರುವ ಈ ಸೇವೆ ಇದೀಗ ಭಾರತದಲ್ಲಿ ಆರಂಭವಾಗುತ್ತಿದೆ. 2018ರಲ್ಲಿ ಈ ಸೇವೆ ಭಾರತದಲ್ಲಿ ಆರಂಭಿಸಲು ವ್ಯಾಟ್ಸಾಪ್ ನಿರ್ಧರಿಸಿತ್ತು. ಇದೀಗ ವ್ಯಾಟ್ಸಾಪ್ ಎಲ್ಲಾ ತಯಾರಿಗಳೊಂದಿಗೆ ಸಜ್ಜಾಗಿದೆ.
ವಾಟ್ಸ್ಆ್ಯಪ್‌ನಲ್ಲಿ ಹಣ ವರ್ಗಾವಣೆ ಸೇವೆ ಆರಂಭ; ಫೋಟೋ ಕಳುಹಿಸಿದಷ್ಟು ಸುಲಭ!..
ವ್ಯಾಟ್ಸ್ಆ್ಯಪ್ ಪೇಮೆಂಟ್ ಆರಂಭಿಸಲು ಆರ್‌ಬಿಐ ಕೆಲ ಷರತ್ತು ವಿಧಿಸುತ್ತು. ಗ್ರಾಹಕರ ಮಾಹಿತಿ, ಡಾಟಾ ಸೇರಿದಂತೆ ಎಲ್ಲಾ ಮಾಹಿತಿಗಳು ಇಲ್ಲೇ ಶೇಖರಣೆಯಾಗಬೇಕು. ಇಲ್ಲಿನ ಮಾಹಿತಿ ಇತರ ದೇಶದಲ್ಲಿ ಸ್ಟೋರ್ ಆಗುವಂತ ವಿಧಾನ ಇರಬಾರದು ಎಂದಿತ್ತು. ಇದೀಗ ಈ ಕುರಿತು ವ್ಯಾಟ್ಸ್ಆ್ಯಪ್ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಕಳೆದ 7 ತಿಂಗಳಿನಿಂದ ಇದಕ್ಕಾಗಿ ಕೆಲಸ ಮಾಡಲಾಗಿದೆ ಎಂದಿದೆ.
ಒಂದೇ ವಾಟ್ಸ್‌ಆ್ಯಪ್ ಅಕೌಂಟ್ ಏಕಕಾಲಕ್ಕೆ 4 ಡಿವೈಸ್‌ನಲ್ಲಿ ಬಳಸಿ!
ಆರ್‌ಬಿಐ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸಲಾಗಿದೆ. ಕೇಂದ್ರ ಸರ್ಕಾರದ ಸೈಬರ್ ಸೆಕ್ಯೂರಿಟಿ ವ್ಯಾಟ್ಸ್ಆ್ಯಪ್ ಪೇಮೆಂಟ್ ಕುರಿತು ಪರಿಶೀಲನೆ ನಡೆಸಿದೆ. ಇಷ್ಟೇ ಅಲ್ಲ ವ್ಯಾಟ್ಸ್ಆ್ಯಪ್ ಕೈಗೊಂಡಿರುವ ಕ್ರಮಗಳ ಕುರಿತು ಸೈಬರ್ ಸೆಕ್ಯೂರಿಟಿ ಗ್ರೀನ್ ಸಿಗ್ನಲ್ ನೀಡಿದೆ.
2018ರಲ್ಲಿ ವ್ಯಾಟ್ಸ್ಆ್ಯಪ್ ಪೇಮೆಂಟ್ ಭಾರತದಲ್ಲಿ ಆರಂಭಿಸಲು ತಯಾರಿ ನಡೆಸಿತ್ತು. ಆದರೆ ಡಾಡಾ ಲೋಕಲೈಸೇಶನ್‌ಗೆ ಬರೋಬ್ಬರಿ 2 ವರ್ಷಗಳು ಬೇಕಾಗಿದೆ. ವ್ಯಾಟ್ಸ್ಆ್ಯಪ್ ಭಾರತದಲ್ಲಿ ಟಾಟಾ ಲೋಕಲೈಸೇಶನ್ ಮಾಡಲು ಸುದೀರ್ಘ ಅವದಿ ತೆಗೆದುಕೊಳ್ಳಲು ಕಾರಣವಿದೆ. ಭಾರತದಲ್ಲಿ 400 ಮಲಿಯನ್ ವ್ಯಾಟ್ಸ್ಆ್ಯಪ್ ಬಳಕೆದಾರರನ್ನು ಹೊಂದಿದೆ. ಹೀಗಾಗಿ ವ್ಯಾಟ್ಸ್ಆ್ಯಪ್‌ಗೆ ಭಾರತ ಅತೀ ದೊಡ್ಡ ವ್ಯವಹಾರ ಕೇಂದ್ರವಾಗಿ ಮಾರ್ಪಡಲಿದೆ.
2020ರ ಫೆಬ್ರವರಿಯಲ್ಲಿ ನ್ಯಾಷಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ವ್ಯಾಟ್ಸಾಪ್ ಪೇಮೆಂಟ್ ಆರಂಭಿಸಲು ಅನುಮತಿ ನೀಡಿತ್ತು.