ಹೊಸ ಐಫೋನ್ ತಗೊಂಡ್ರಾ : ನಿಮ್ಮ ಐಫೋನ್ ನಕಲಿಯೋ ಅಸಲಿಯೋ ತಿಳಿಯೋದು ಹೇಗೆ?

ಐಫೋನ್ ಮೇಲಿನ ಕ್ರೇಜ್ ಹೆಚ್ಚಾಗುತ್ತಿದ್ದಂತೆ ನಕಲಿ ಐಫೋನ್ ಹಾವಳಿಯೂ ಈಗ ಸಾಮಾನ್ಯ ಎಂಬಂತಾಗಿದೆ.  ಹೀಗಿರುವಾಗ ಅಸಲಿ ಯಾವುದು ನಕಲಿ ಯಾವುದು ಗುರುತಿಸುವುದು ಹೇಗೆ ಎಂಬ ಡಿಟೇಲ್ ಇಲ್ಲಿದೆ ನೋಡಿ.

did you buy New iPhone How to know if your iPhone is fake or original akb

ಈಗ ಐಫೋನ್ ಬಗೆಗಿನ ಕ್ರೇಜ್ ಬಹಳ ಹೆಚ್ಚಾಗಿದೆ. ಸಂಬಳ ಎಷ್ಟೇ ಕಡಿಮೆ ಇರಲಿ, ಹೊಟ್ಟೆಗೆ ಅನ್ನ ಇಲ್ಲದಿರಲಿ, ಆದರೆ ಇಎಂಐನಲ್ಲಾದರೂ ಒಂದು ಐಫೋನ್ ತಗೋಬೇಕು ಎಂಬುದು ಬಹಳಷ್ಟು ಜನರ ಆಸೆ. ಐಫೋನ್‌ನಲ್ಲಿರುವ ಡಾಟಾ ಸೆಕ್ಯೂರಿಟಿ ಸುರಕ್ಷತೆ ಇದಕ್ಕೆ ಕಾರಣ. ಹೀಗಿರುವಾಗ ನೀವು ತಗೊಂಡ ಐಫೋನ್ ನಕಲಿಯೋ ಅಸಲಿಯೋ ತಿಳಿಯೋದು ಹೇಗೆ ಇಲ್ಲಿದೆ ಡಿಟೇಲ್‌.

ಐಫೋನ್ ಮೇಲಿನ ಕ್ರೇಜ್ ಹೆಚ್ಚಾಗುತ್ತಿದ್ದಂತೆ ನಕಲಿ ಐಫೋನ್ ಹಾವಳಿಯೂ ಈಗ ಸಾಮಾನ್ಯ ಎಂಬಂತಾಗಿದೆ.  ಈ ಬಗ್ಗೆ ಜಾಗೃತಿ ಇಲ್ಲದಿರುವುದು ಹಾಗೂ ನಕಲಿಯಲ್ಲಿರುವ ಹೈಯರ್ ಕ್ವಾಲಿಟಿಯಿಂದಾಗಿ ನಕಲಿ ಯಾವುದು ಅಸಲಿ ಯಾವುದು ಎಂಬುದನ್ನು ಗುರುತಿಸುವುದೇ ದೊಡ್ಡ ಸವಾಲಾಗಿದೆ. ಹೀಗಿರುವಾಗ ಅಸಲಿ ನಕಲಿ ಗುರುತಿಸುವುದು ಹೇಗೆ ಎಂಬ ಡಿಟೇಲ್ ಇಲ್ಲಿದೆ ನೋಡಿ.

 ಸೀರಿಯಲ್ ನಂಬರ್ 
ಪ್ರತಿಯೊಂದು ಐಫೋನ್‌ಗೂ ತನ್ನದೇ ಆದ ಸೀರಿಯಲ್ ನಂಬರ್ ಇರುತ್ತದೆ. ಇದು ಒಂದು ಫೋನ್‌ನಿಂದ ಮತ್ತೊಂದು ಫೋನ್‌ಗೆ ವಿಭಿನ್ನವಾಗಿರುತ್ತದೆ. ಆದರೆ ಫೇಕ್ ಐಫೋನ್‌ಗಳು ಸಾಮಾನ್ಯವಾಗಿ ಅಕ್ಷರಗಳನ್ನು ಹೊಂದಿರುತ್ತವೆ ಹಾಗೂ ಪರಿಶೀಲಿಸಿದಾಗ ದೋಷವನ್ನು (error) ತೋರಿಸುತ್ತವೆ. 

ಐಫೋನ್ ಬಾಕ್ಸ್
ಆಪಲ್ ಸಂಸ್ಥೆಯೂ ಐಫೋನ್ ಬಾಕ್ಸ್‌ನ ಡಿಸೈನ್ ವಿಷಯದಲ್ಲಿ ತುಂಬಾ ನಿರ್ದಿಷ್ಟವಾಗಿದೆ. ಐಫೋನ್‌ ಬಾಕ್ಸ್‌ನಲ್ಲಿರುವ ಮುಖ್ಯ ವಿಚಾರವೆಂದರೆ
ಆಪಲ್ ಅದರಲ್ಲಿ ತನ್ನ ಪ್ರಾಡಕ್ಟ್ ಬಗ್ಗೆ ಉಲ್ಲೇಖಿಸಿರುವ ರೀತಿ. 

ವಿಶ್ವದ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬೆಂಗಳೂರಿಗೆ ಬಂದರೆ ಬಂಧಿಸಿ ಜೀಪಲ್ಲಿಟ್ಟ ಪೊಲೀಸರು!

ಐಫೋನ್ ಲೆನ್ಸ್
ನಕಲಿ ಐಫೋನ್‌ಗಳ ಲೆನ್ಸ್‌ಗಳು ಹೆಚ್ಚಾಗಿ ಮಿರರ್ ಫಿನಿಶ್‌ನ್ನು ಹೊಂದಿದ್ದು, ಇವುಗಳು ಪ್ರಖರವಾದ ಬೆಳಕು ಕಡಿಮೆ ಗುಣಮಟ್ಟದ ಗಾಜಿನ ಅಡಿಯಲ್ಲಿ ಕಾಣಿಸುತ್ತವೆ. ಆದರೆ ನಿಜವಾದ ಐಫೋನ್‌ಗಳ ಲೆನ್ಸ್‌ಗಳು ತುಂಬಾ ಸಣ್ಣದಾಗಿರುತ್ತವೆ. 

ಐಫೋನ್‌ ಆಪ್‌ಸ್ಟೋರ್‌ ವಿಶೇಷತೆಗಳು

ಹೆಚ್ಚಿನ ನಕಲಿ ಐಫೋನ್‌ಗಳು ಸ್ಕಿನ್ಡ್‌ ಆವೃತಿಯ ಆಂಡ್ರಾಯ್ಡ್‌  ಮೂಲಕ ರನ್ ಆಗುತ್ತವೆ ಹಾಗೂ ಅವುಗಳಲ್ಲಿ ಆಪಲ್ ಆಪ್ ಸ್ಟೋರ್ ಇರುವುದಿಲ್ಲ, ಆದರೆ ಐಫೋನ್‌ಗಳು ತನ್ನದೇ ಆದ ಆಪ್ ಸ್ಟೋರ್ ಹೊಂದಿವೆ. 

ಐಫೋನ್ ಬಾಕ್ಸ್ ಗುಣಮಟ್ಟ

ನಕಲಿ ಐಫೋನ್‌ನ ಬಾಕ್ಸ್‌ಗಳು ನೋಡುವುದಕ್ಕೆ ಒರಿಜಿನಲ್‌ನಂತೆಯೇ ಕಾಣುತ್ತದೆ. ಆದರೆ ಸಾಮಾನ್ಯವಾಗಿ ನಕಲಿ ಐಫೋನ್‌ನ ಬಾಕ್ಸ್‌ಗಳು ತಪ್ಪಾಗಿ ಜೋಡಿಸಲಾದ ಅಕ್ಷರಗಳು, ಕಳಪೆ ಪ್ರಿಂಟಿಂಗ್ ಗುಣಮಟ್ಟ ಹೊಂದಿರುತ್ತವೆ. ಹಾಗೂ ಒಳಗೆ ಯಾವುದೇ ಆಪಲ್ ಸ್ಟಿಕ್ಕರ್‌ಗಳನ್ನು ಹೊಂದಿರುವುದಿಲ್ಲ. 

ಚೆನ್ನೈಗೆ ಸಾಗಿಸುತ್ತಿದ್ದ 12 ಕೋಟಿ ಮೌಲ್ಯದ ಐಫೋನ್ ಕಳ್ಳತನ,ಕೇಸ್ ದಾಖಲಿಸಲು 15 ದಿನ ತೆಗೆದ ಪೊಲೀಸ್!

ನಕಲಿ ಗುಣಮಟ್ಟ
ಈ ನಕಲಿ ಐಫೋನ್ ಮಾಡಲು ಬಳಸುವ ವಸ್ತುಗಳು ಅಸಲಿ ಐಫೋನ್‌ಗೆ ಹೋಲಿಸಿದರೆ ಕಳಪೆ ಗುಣಮಟ್ಟವನ್ನು ಹೊಂದಿರುತ್ತವೆ. ಆಪಲ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಸಲಿ ಐಫೋನ್‌ನ ತೂಕ ವಿನ್ಯಾಸದ ಬಗ್ಗೆ ಮಾಹಿತಿ ನೀಡಿರುತ್ತದೆ. ಇದನ್ನು ಪರಿಶೀಲಿಸುವ ಮೂಲಕವೂ ನಿಮ್ಮ ಐಫೋನ್ ಅಸಲಿಯೇ ನಕಲಿಯೇ ಎಂಬುದನ್ನು ನೀವು ಪರಿಶೀಲಿಸಬಹುದು. 

ಡಿಸ್‌ಪ್ಲೇ
ನಕಲಿ ಐಫೋನ್‌ಗಳು ಸಾಮಾನ್ಯವಾಗಿ OLED ಬದಲಿಗೆ ಸಾಮಾನ್ಯ ಎಲ್‌ಸಿಡಿ ಪ್ಯಾನ್‌ಗಳನ್ನು ಹೊಂದಿವೆ. ಅವುಗಳ ಕಳಪೆ ಮಟ್ಟದ ಬ್ರೈಟ್‌ನೆಸ್‌, ಬಣ್ಣ, ಹಾಗೂ ವೀಕ್ಷಿಸುವ ಆಂಗಲ್ ಕೂಡ ಭಿನ್ನವಾಗಿರುತ್ತದೆ. 

ಫಿಂಗರ್‌ಪ್ರಿಂಟ್
ಆಪಲ್ ಈಗ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಮಾಡಿದ ಎಲ್ಲಾ ಐಫೋನ್‌ಗಳಲ್ಲಿ ಬೆರಳಚ್ಚನ್ನು ತೆಗೆದು ಹಾಕಿದ್ದು, ಕೇವಲ ಫೇಸ್ಐಡಿಯಿಂದ (ಮುಖದ ಗುರುತು) ಮಾತ್ರ ಒಪನ್ ಆಗುತ್ತದೆ. ಹೀಗಾಗಿ ನಿಮ್ಮ ಐಫೋನ್‌ನಲ್ಲಿ ಮುಖ ಗುರುತು ಮಾಡುವ ಆಯ್ಕೆ ( ಫೇಸ್ಐಡಿ) ಕೆಲಸ ಮಾಡದೇ ಇದ್ದರೆ ಅಥವಾ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದರೆ ನಿಮ್ಮ ಐಫೋನ್ ಅಸಲಿ ಅಲ್ಲ.

Latest Videos
Follow Us:
Download App:
  • android
  • ios