Asianet Suvarna News Asianet Suvarna News

18ಕ್ಕಿಂತ ಕಡಿಮೆ ವಯಸ್ಕರಿಗೆ ಇನ್ಮುಂದೆ ದಿನಕ್ಕೆ 2 ಗಂಟೆ ಮಾತ್ರ ಸ್ಮಾರ್ಟ್‌ಫೋನ್‌ ಬಳಕೆಗೆ ಅವಕಾಶ!

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಚಟವನ್ನು ತಡೆಯಲು ಚೀನೀ ಅಧಿಕಾರಿಗಳ ಪ್ರಯತ್ನವಾಗಿದೆ. ಸಿಎಸಿ ಈ ಕರಡು ನಿಯಮಗಳನ್ನು ಜಾರಿಗೆ ತಂದಿದೆ. 

china floats two hour daily limit of smartphone screen time for kids ash
Author
First Published Aug 3, 2023, 3:15 PM IST

ಬೀಜಿಂಗ್ (ಆಗಸ್ಟ್ 3, 2023): ಯುವಕರು ಸ್ಮಾರ್ಟ್‌ಫೋನ್‌ ಬಳಕೆ ಇತ್ತೀಚೆಗೆ ಹೆಚ್ಚಾಗ್ತಾನೇ ಇದೆ. ಅದರಲ್ಲೂ ಹದಿಹರೆಯದವರರು ಫೋನ್‌ ಮುಂದೆಯೇ ಸದಾ ಕಾಲ ಕಳೆಯುತ್ತಿರುತ್ತಾರೆ. ಇದರಿಂದ ಅನೇಕ ದುಷ್ಪರಿಣಾಮ ಉಂಟಾಗಬಹುದು. ಈ ಹಿನ್ನೆಲೆ,  ಚೀನಾದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸ್ಮಾರ್ಟ್‌ಫೋನ್ ಬಳಕೆಯ ಸಮಯವನ್ನು ದಿನಕ್ಕೆ ಗರಿಷ್ಠ ಎರಡು ಗಂಟೆಗಳವರೆಗೆ ಸೀಮಿತಗೊಳಿಸುವ ನಿಯಮಗಳನ್ನು ಪ್ರಸ್ತಾಪಿಸಿದ್ದಾರೆ. ಚೀನಾದ ಶಕ್ತಿಶಾಲಿ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಸಿಎಸಿ) ಈ ಕರಡು ನಿಯಮಗಳನ್ನು ರೂಪಿಸಿದ್ದು, ದೇಶದ ಡಿಜಿಟಲ್ ಜೀವನದ ಮೇಲೆ ನಿಯಂತ್ರಣವನ್ನು ಬೀರುವ ಕ್ಸಿ ಜಿನ್‌ಪಿಂಗ್ ಸರ್ಕಾರದ ಬಯಕೆಯನ್ನು ನಿಜವನ್ನಾಗಿಸುತ್ತಿದೆ.

ಈ ನಿಯಮಗಳನ್ನು ಕಾನೂನಾಗಿ ಜಾರಿ ತಂದರೆ, ಅವು ಟೆನ್ಸೆಂಟ್‌ ಮತ್ತು ಬೈಟ್‌ಡ್ಯಾನ್ಸ್‌ನಂತಹ ಕಂಪನಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. CAC ಯ ಕರಡು ನಿಯಮಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಚಟವನ್ನು ತಡೆಯಲು ಚೀನೀ ಅಧಿಕಾರಿಗಳ ಪ್ರಯತ್ನವಾಗಿದೆ. 2021 ರಲ್ಲಿ, ಚೀನಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ವಾರಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಆನ್‌ಲೈನ್ ವಿಡಿಯೋ ಗೇಮ್‌ ಆಡುವುದನ್ನು ನಿರ್ಬಂಧಿಸುವ ನಿಯಂತ್ರಣವನ್ನು ಈಗಾಗಲೇ ಜಾರಿಗೆ ತಂದಿದೆ. 

ಇದನ್ನು ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಬಹಿರಂಗ: ಭಾರತಕ್ಕೂ ಇದಕ್ಕೂ ಸಂಬಂಧ!

ಚೀನೀ ಟೆಕ್ ದೈತ್ಯರ ಮೇಲೆ ಪರಿಣಾಮ?
ಚೀನಾ ತನ್ನ ಕರಡು ಕಾನೂನನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಮತ್ತು ಜಾರಿಗೊಳಿಸಲಾಗುತ್ತದೆ ಮತ್ತು ಈ ನಿಯಮ ಚೀನಾದ ತಂತ್ರಜ್ಞಾನ ದೈತ್ಯರ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ಕುರಿತು ಇನ್ನೂ ಅನುಮಾನಗಳಿವೆ. ಮೈನರ್ ಮೋಡ್‌ ಎಂದು ರಚಿಸುವುದು ಸ್ಮಾರ್ಟ್‌ಫೋನ್‌ ತಯಾರಕರ ಆಪರೇಟಿಂಗ್ ಸಿಸ್ಟಮ್ ಪೂರೈಕೆದಾರರ ಜವಾಬ್ದಾರಿಯಾಗಿದೆಯೇ ಎಂಬುದು ಅಸ್ಪಷ್ಟವಾಗಿದೆ. ಈ ಸಮಯ ಮಿತಿಗಳು ಮತ್ತು ಮೈನರ್ ಮೋಡ್ ಸಾಫ್ಟ್‌ವೇರ್ ಅನ್ನು CAC ಹೇಗೆ ಮೇಲ್ವಿಚಾರಣೆ ಮಾಡುತ್ತದೆ ಎಂಬುದು ಸಹ ಇನ್ನೂ ಬಹಿರಂಗಗೊಂಡಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ತಮ್ಮ ಒಟ್ಟಾರೆ ಆದಾಯದ ಒಂದು ಸಣ್ಣ ಭಾಗವನ್ನು ಕೊಡುಗೆ ನೀಡಿದ್ದಾರೆ ಎಂದು ವಿಶ್ವದ ಎರಡು ದೊಡ್ಡ ಆನ್‌ಲೈನ್ ಗೇಮಿಂಗ್ ಕಂಪನಿಗಳು ಈ ಹೊಸ ನಿಯಮದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪರೋಕ್ಷ ನಷ್ಟವಾಗುವ ಬಗ್ಗೆ ತಿಳಿಸಿದ್ದಾರೆ. 

ಸ್ಮಾರ್ಟ್‌ಫೋನ್‌ಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ "ಮೈನರ್ ಮೋಡ್" ಅನ್ನು ಹೊಂದಿರಬೇಕು. ಫೋನ್‌ ಆನ್ ಆಗಿರುವಾಗ ಹೋಮ್ ಸ್ಕ್ರೀನ್ ಐಕಾನ್ ಅಥವಾ ಸಾಧನದ ಸಿಸ್ಟಮ್ ಸೆಟ್ಟಿಂಗ್‌ಗಳಲ್ಲಿ ಪ್ರವೇಶಿಸಲು ಸುಲಭವಾಗಿರಬೇಕು ಎಂದು ಕರಡು ನಿಯಮಗಳು ಹೇಳುತ್ತವೆ. ಮೈನರ್ ಮೋಡ್ ಪೋಷಕರಿಗೆ ತಮ್ಮ ಮಕ್ಕಳು ಏನು ನೋಡುತ್ತಾರೆ ಎಂಬುದನ್ನು ನಿರ್ವಹಿಸಲು ಅನುಮತಿಸುತ್ತದೆ ಮತ್ತು ಬಳಕೆದಾರರ ವಯಸ್ಸಿನ ಆಧಾರದ ಮೇಲೆ ವಿಷಯವನ್ನು ತೋರಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಅವಕಾಶ ನೀಡುತ್ತದೆ. ಮೂರು ವರ್ಷದೊಳಗಿನ ಮಕ್ಕಳಿಗೆ ಹಾಡು ಮತ್ತು ಆಡಿಯೋ-ಕೇಂದ್ರಿತ ವಿಷಯವನ್ನು ತೋರಿಸಬೇಕು. 12 ರಿಂದ 16 ವರ್ಷ ವಯಸ್ಸಿನವರು ಶೈಕ್ಷಣಿಕ ಮತ್ತು ಸುದ್ದಿ ವಿಷಯಕ್ಕೆ ಒಡ್ಡಿಕೊಳ್ಳಬಹುದು ಎಂದು ಸಿಎಸಿಯ ಕರಡು ನಿಯಮ ಹೇಳುತ್ತದೆ. 
ಇದನ್ನೂ ಓದಿ: ವಾಟ್ಸಪ್‌ನಲ್ಲಿನ್ನು ಪಟಾಫಟ್‌ ವಿಡಿಯೋ ಸಂದೇಶ: ಶೀಘ್ರ ಹೊಸ ಸೇವೆ ಆರಂಭ

Follow Us:
Download App:
  • android
  • ios