ಇನ್ಮುಂದೆ ಮಕ್ಕಳ ಇನ್​ಸ್ಟಾ, ಎಫ್​ಬಿ... ಎಲ್ಲಾ ಖಾತೆಗಳಿಗೆ ಬ್ರೇಕ್​! ಏನಿದು ಹೊಸ ರೂಲ್ಸ್​? ಡಿಟೇಲ್ಸ್​ ಇಲ್ಲಿದೆ

ಇನ್ಮುಂದೆ ಮಕ್ಕಳ ಇನ್​ಸ್ಟಾ, ಎಫ್​ಬಿ... ಎಲ್ಲಾ ಖಾತೆಗಳಿಗೆ ಬ್ರೇಕ್​, ತಪ್ಪಿದ್ರೆ ಸಮಸ್ಯೆ ತಪ್ಪಿದ್ದಲ್ಲ. ಏನಿದು ಹೊಸ ರೂಲ್ಸ್​? ಡಿಟೇಲ್ಸ್​ ಇಲ್ಲಿದೆ
 

Children Under 18 Must Get Parental Consent to Creat Social Media Accounts DPDP Act set forth this rule

ಕೋವಿಡ್​ ನೆಪದಿಂದ ಈಗ ಚಿಕ್ಕಪುಟ್ಟ ಮಕ್ಕಳ ಕೈಯಲ್ಲೂ ಸ್ಮಾರ್ಟ್​ಫೋನ್​ ಬಂದಿದೆ. ಹೊಟ್ಟೆಗೆ ಹಿಟ್ಟಲ್ಲದಿದ್ದರೂ ಕೈಯಲ್ಲೊಂದು  ಮೊಬೈಲ್ ಎನ್ನುವ ಸ್ಥಿತಿಗೆ ತಲುಪಲಾಗಿದೆ. ಎಷ್ಟೋ ಮಕ್ಕಳು ಮೊಬೈಲ್​ ಕೊಡಿಸಿಲ್ಲ ಎಂದು ಪ್ರಾಣ ಕಳೆದುಕೊಂಡಿರುವ ಘಟನೆಗಳು ಒಂದೆಡೆಯಾದರೆ, ಮೊಬೈಲ್​  ನೋಡಿ ಇನ್ನಿಲ್ಲದ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಸಿಕೊಂಡವರು ಇಲ್ಲವೇ ಮಿತಿಮೀರುವ ಲೈಂಗಿಕಾಸಕ್ತಿಯನ್ನು ಬೆಳೆಸಿಕೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧ್ಯಯನಗಳು ಇದಾಗಲೇ ಹಲವು ವರದಿಗಳನ್ನು ನೀಡಿವೆ. ಮಕ್ಕಳು ಸೋಷಿಯಲ್​ ಮೀಡಿಯಾ ಖಾತೆಗಳನ್ನು ತೆರೆದು ಇನ್ನಿಲ್ಲದಂತೆ ತೊಂದರೆಗೆ ಒಳಗಾಗುತ್ತಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ಎಲ್ಲದ್ದಕ್ಕೂ ಬ್ರೇಕ್​ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.  ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (DPDP) ಕಾಯ್ದೆಯ ಕರಡು ನಿಯಮ ರೂಪಿಸಲಾಗಿದ್ದು, ಇದು ಅಂಗೀಕಾರಗೊಂಡರೆ ಶೀಘ್ರದಲ್ಲಿಯೇ ಮಕ್ಕಳ ಜಾಲತಾಣಗಳ ಖಾತೆಗೆ ಬ್ರೇಕ್​ ಬೀಳಲಿದೆ.

 ಈ ನಿಯಮದ ಅನ್ವಯ 18 ವರ್ಷದ ಒಳಗಿನ ಮಕ್ಕಳು ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸುವಂತಿಲ್ಲ. ಒಂದು ವೇಳೆ ಹಾಗೆ ಮಾಡುವುದು ಅನಿವಾರ್ಯವಾದರೆ,  ಪೋಷಕರ ಅಥವಾ ಹಿರಿಯರ ಒಪ್ಪಿಗೆಯನ್ನು ಪಡೆಯುವುದು ಅಗತ್ಯವಾಗಿದೆ. ಮಕ್ಕಳು ಆನ್​ಲೈನ್​ ಅಕೌಂಟ್​ ತೆರೆಯಲು ಹೋದರೆ ಅಲ್ಲಿ ಒಂದು ಬಾಕ್ಸ್​ ಓಪನ್​ ಆಗುತ್ತದೆ. ಅಲ್ಲಿ ಪೋಷಕರು ತಮ್ಮ ಪಾಸ್​ವರ್ಡ್​ ಎಂಟರ್​ ಮಾಡಿ ಓಕೆ ಎಂದು ಕೊಟ್ಟರೆ ಮಾತ್ರ ಅಂಥ ಅಕೌಂಟ್​ ತೆರೆಯಲು ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಪೋಷಕರ ಬಳಿ ಯಾವುದಾದರೂ ಸೋಷಿಯಲ್​  ಮೀಡಿಯಾ ಅಕೌಂಟ್​ ಇದ್ದರೆ ಅದರಿಂದಲೇ ಲಾಗಿನ್​ ಆಗಿ ಮಕ್ಕಳಿಗೆ ಅನುಮತಿ ಕೊಡಬಹುದು. ಪಾಲಕರ ಬಳಿ ಯಾವುದೇ ಸೋಷಿಯಲ್​ ಮೀಡಿಯಾ ಖಾತೆ ಇಲ್ಲದಿದ್ದರೆ ಗುರುತಿನ ಚೀಟಿಗಳಾದ ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​, ರೇಷನ್​ ಕಾರ್ಡ್​ ಹೀಗೆ ಯಾವುದಾದರನ್ನೂ ಅಪ್​ಲೋಡ್​  ಮಾಡಿ ಅನುಮತಿ ಕೊಡಬೇಕಾಗುತ್ತದೆ.

ಟಿ.ವಿ ಪ್ರಿಯರಿಗೆ ಶಾಕ್​ ಕೊಟ್ಟ ಕೆಲ ಚಾನೆಲ್​ಗಳು: ಫೆ.1 ರಿಂದ ಟಿ.ವಿ ನೋಡುವುದು ಬಲು ದುಬಾರಿ- ಹೀಗಿವೆ ರೇಟ್​

ಈಗಿನ ಮಕ್ಕಳು ರಂಗೋಲಿ ಕೆಳಗೆ ನುಸುಳುವ ಜಾಯಮಾನದವರು. ಆದ್ದರಿಂದ ಸೋಷಿಯಲ್ ಮೀಡಿಯಾ ಅಕೌಂಟ್​ ಓಪನ್​ ಮಾಡುವಾಗಲೇ ತಮ್ಮ ವಯಸ್ಸನ್ನು ಹೆಚ್ಚಿಗೆ ತೋರಿಸುವ ಸಾಧ್ಯತೆ ಇರುತ್ತದೆ. ಆದರೆ ಅದಕ್ಕೂ ಬ್ರೇಕ್​ ಬೀಳಲಿದೆ. ಸದ್ಯ ಈ ಕರಡು ಪ್ರತಿಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿದ್ದರೂ ಜಾಲತಾಣಗಳ ಮಾಲೀಕರಿಗೆ ನಿಯಮ ರೂಪಿಸುವಂತೆ ತಿಳಿಸಲಾಗಿದೆ. ಒಂದು ವೇಳೆ ವಯಸ್ಸಿನ ಬಗ್ಗೆ ಇಲ್ಲವೇ ಪಾಲಕರು ಎಂದು ಯಾರದ್ದಾದರೂ ಬಳಿ ವೆರಿಫಿಕೇಷನ್​  ಮಾಡಿಸುವುದು ಎಲ್ಲಾ ಮಾಡಿದರೆ ಮಕ್ಕಳು ಕಾನೂನಾತ್ಮಕ ಸಮಸ್ಯೆಗಳಿಗೆ ಎದುರಾಗಬಹುದು. ಹಲವು ವರ್ಷ ಅವರು ಯಾವುದೇ ಸೋಷಿಯಲ್​ ಮೀಡಿಯಾ ಖಾತೆ ತೆರೆಯಲು ಆಗದೇ ಇರಬಹುದು ಎನ್ನುವುದನ್ನೂ ಈ ಕರಡು ಪ್ರತಿ ಸೂಚಿಸಿದೆ. 

ಅದೇ ರೀತಿ, ಕೆಟ್ಟದ್ದಾಗಿ ಕಮೆಂಟ್​ ಹಾಕುವುದು, ನಕಲಿ ಐಡಿ ಇಟ್ಟುಕೊಂಡು ಮನಸೋ ಇಚ್ಛೆ ಬೈಯುವುದು, ನಿಂದನೆ ಮಾಡುವುದು ಇಂಥ ಅಕೌಂಟ್​ಗಳ ಮೇಲೂ ಕೇಂದ್ರ ಸರ್ಕಾರ ಕಣ್ಣು ಇಟ್ಟಿದ್ದು, ಇವುಗಳಿಗೂ ಶೀಘ್ರದಲ್ಲಿಯೇ ಸೂಕ್ತ ನಿಯಮ ಜಾರಿಗೆ ಬರಲಿದೆ. 

ಪಾನಿಪುರಿವಾಲನಿಗೆ 40 ಲಕ್ಷ ಆದಾಯ: ಹಲವರ ತಲೆ ಕೆಡಿಸಿರೋ GST ನೋಟಿಸ್​ ಹಿಂದಿರೋ ಸತ್ಯನೇ ಬೇರೆ!

Latest Videos
Follow Us:
Download App:
  • android
  • ios