ಜಿಯೋ ಗ್ರಾಹಕರು ದೀರ್ಘಕಾಲದವರೆಗೆ ರಿಚಾರ್ಜ್ ಮಾಡದಿದ್ದರೆ ಸಿಮ್ ಶಾಶ್ವತವಾಗಿ ನಿಷ್ಕ್ರಿಯಗೊಳ್ಳಲಿದೆ ಎಂದು ಕಂಪನಿ ಎಚ್ಚರಿಸಿದೆ. ನಿಮ್ಮ ನಂಬರ್ ಉಳಿಸಿಕೊಳ್ಳಲು ಜಿಯೋ ಕೇವಲ 11 ರೂಪಾಯಿಗಳ ಅಗ್ಗದ ಪ್ಲಾನ್ ಅನ್ನು ಸೂಚಿಸಿದೆ.
ನವದೆಹಲಿ (ನವೆಂಬರ್ 14): ಅನೇಕರು ಎರಡು ಸಿಮ್ಗಳನ್ನು ಹೊಂದಿರುತ್ತಾರೆ. ಉದ್ದೇಶಗಳು ಬೇರೆ ಬೇರೆ ಇರಬಹುದು. ಆದರೆ ಇವತ್ತಿನ ದಿನಗಳಲ್ಲಿ ರಿಚಾರ್ಜ್ ಬೆಲೆಗಳು ತುಂಬಾನೇ ದುಬಾರಿ ಆಗುತ್ತಿವೆ. ಹೀಗಾಗಿ ಬಳಕೆದಾರರು ಅಗತ್ಯ ಇರುವ ನಂಬರ್ಗೆ ರಿಚಾರ್ಜ್ ಮಾಡಿ.. ಇನ್ನೊಂದು ನಂಬರ್ಗೆ ರಿಚಾರ್ಜ್ ಮಾಡದೇ ಬಿಟ್ಟು ಬಿಡುತ್ತಾರೆ. ಅಂಥವರಿಗೆ ಜಿಯೋ ದೊಡ್ಡ ಎಚ್ಚರಿಕೆ ನೀಡಿದೆ.
ಇನ್ಮುಂದೆ ನೀವು ರಿಚಾರ್ಜ್ ಮಾಡದಿದ್ದರೆ, ಆ ನಂಬರ್ ನಿಮ್ಮಿಂದ ಶಾಶ್ವತವಾಗಿ ಆಗಲಿದೆ. ಹೌದು, ಯಾರೆಲ್ಲ ಸಿಮ್ ರಿಚಾರ್ಜ್ ಮಾಡದೇ ಇಟ್ಟುಕೊಂಡಿರುವ ಗ್ರಾಹಕರಿಗೆ ಕಂಪನಿ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸುತ್ತಿದೆ. ಈ ಸಂದೇಶದಲ್ಲಿ ನಿಮ್ಮ ಸಂಖ್ಯೆಗೆ ರಿಚಾರ್ಜ್ ಮಾಡಬೇಕು. ಇಲ್ಲದಿದ್ದರೆ ಒಳಬರುವ ಕರೆಗಳು ಮತ್ತು SMS ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂಬ ಸಂದೇಶದ ಮೂಲಕ ಎಚ್ಚರಿಕೆ ನೀಡಿದೆ. ಒಂದು ವೇಳೆ ನೀವು ದೀರ್ಘಕಾಲದವರೆಗೆ ರೀಚಾರ್ಜ್ ಮಾಡದಿದ್ದರೆ.. ನಿಮ್ಮ ಮೊಬೈಲ್ ಸಂಖ್ಯೆ ಶಾಶ್ವತವಾಗಿ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ.
ಅದಕ್ಕಾಗಿ ನೀವು ಏನು ಮಾಡಬೇಕು?
ನಿಮಗೆ ಎರಡು ಸಿಮ್ ಅಗತ್ಯ ಇದ್ದರೆ, ಎರಡೂ ನಂಬರ್ಗಳಿಗೂ ರಿಚಾರ್ಜ್ ಮಾಡಿಸೋದು ಅನಿವಾರ್ಯ. ಒಂದು ಸಿಮ್ಗೆ ನಿಮಗೆ ಅಗತ್ಯ ಇರುವ ಪ್ಲಾನ್ಗಳನ್ನ ಹಾಕಿಸಿಕೊಂಡು, ಇನ್ನೊಂದು ಸಿಮ್ನ ನಂಬರ್ ಉಳಿಸಿಕೊಳ್ಳಲು ಗ್ರಾಹಕರ ಮುಂದೆ ಸ್ಪೆಷಲ್ ರಿಚಾರ್ಜ್ ಆಫರ್ ನೀಡಿದೆ. ಅದು ಕೇವಲ 11 ರೂಪಾಯಿ ರಿಚಾರ್ಜ್ ಪ್ಲಾನ್!
ಜಿಯೋ ಕಠಿಣ ನಿರ್ಧಾರ ಏಕೆ?
- ಟೆಲಿಕಾಂ ಕಂಪನಿಗಳು ಕಟ್ಟುನಿಟ್ಟಾದ ರೂಲ್ಸ್ಗಳಿಗೆ ಒಳಪಡುತ್ತಿವೆ
- ಅದೇ ರೀತಿ ಜಿಯೋ ಸಹ ಈ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ
- ರಿಚಾರ್ಜ್ ಅವಧಿ ಮುಗಿದಾಗ ನಿರ್ಧಿಷ್ಟ ಸಮಯದ ವರೆಗೆ ಮಾತ್ರ ಕೆಲಸ
- ಸಂದೇಶಗಳು ಮತ್ತು ಕರೆಗಳು ಒಂದಷ್ಟು ದಿನಗಳವರೆಗೆ ಮಾತ್ರ ಬರುತ್ತವೆ
- ಹಲವು ವಾರಗಳ ಕಾಲ ರಿಚಾರ್ಜ್ ಮಾಡದಿದ್ದರೆ ನಿಮಗೆ ಯಾವುದೇ ಸೇವೆ ಸಿಗಲ್ಲ
ಸಿಮ್ ನಿಷ್ಕ್ರಿಯಕ್ಕೂ ಮೊದಲು ಕಂಪನಿ ಮೆಸೇಜ್ಗಳ ಮೂಲಕ ರಿಚಾರ್ಜ್ ಮಾಡಲು ನೆನಪಿಸುತ್ತದೆ. ಎಚ್ಚರಿಕೆಯ ನಂತರವೂ ನೀವು ಸಿಮ್ಗೆ ರಿಚಾರ್ಜ್ ಮಾಡದಿದ್ದರೆ.. ಅಂದರೆ TRAI ನಿಯಮಗಳ ಪ್ರಕಾರ 90 ದಿನಗಳ ನಂತರ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಬಹುದು. ಅಥವಾ ಆ ನಂಬರ್ ಬೇರೆಯವರಿಗೆ ನೀಡಬಹುದು.
ಆಗುವ ಸಮಸ್ಯೆಗಳು ಏನೇನು?
ಮೊಬೈಲ್ ಸಂಖ್ಯೆಗಳು ಹೆಚ್ಚಾಗಿ ಬ್ಯಾಂಕ್ ಖಾತೆಗಳು, ಆಧಾರ್ ಕಾರ್ಡ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಲಿಂಕ್ ಹೊಂದಿರುತ್ತವೆ. ಒಂದು ವೇಳೆ ನಂಬರ್ ನಿಷ್ಕ್ರಿಯಗೊಂಡರೆ ದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಜಿಯೋ, ಕೇವಲ 11 ರೂಪಾಯಿ ರಿಚಾರ್ಜ್ ಮಾಡಿ ನಂಬರ್ ಉಳಿಸಿಕೊಳ್ಳುವಂತೆ ಸಲಹೆ ನೀಡಿದೆ. ಇದು ಜಿಯೋದ ಅತ್ಯಂತ ಅಗ್ಗದ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದು. ನೀವು ನಿಮ್ಮ ಸಂಖ್ಯೆಯನ್ನು 11 ರೂಪಾಯಿಗಳಿಗೆ ರೀಚಾರ್ಜ್ ಮಾಡಿದ ತಕ್ಷಣ, ನಿಮ್ಮ ಸಿಮ್ ಕಾರ್ಡ್ ವ್ಯವಸ್ಥೆಯಲ್ಲಿ ಸಕ್ರಿಯವಾಗಿರುವ ಬಗ್ಗೆ ನೀವು ಸಂದೇಶವನ್ನು ಸ್ವೀಕರಿಸುತ್ತಿರಿ.
11 ರೂಪಾಯಿ ನೀವು ರೀಚಾರ್ಜ್ ಮಾಡಿಕೊಂಡರೆ 1 ಗಂಟೆಯ ಮಾನ್ಯತೆಯೊಂದಿಗೆ 10GB ಹೈ-ಸ್ಪೀಡ್ ಡೇಟಾ ನೀಡುತ್ತದೆ. ಡೇಟಾ ಮಾನ್ಯತೆ ಕೇವಲ 1 ಗಂಟೆಯಾಗಿದ್ದರೂ ನಿಮ್ಮ ಸಂಖ್ಯೆಯನ್ನು ಸಕ್ರಿಯವಾಗಿಡಲು ಇದು ಪರಿಣಾಮಕಾರಿ ಮಾರ್. ಕಡಿಮೆ ವೆಚ್ಚದಲ್ಲಿ ತಮ್ಮ ಹಳೆಯ ಸಂಖ್ಯೆಯನ್ನು ಸುರಕ್ಷಿತವಾಗಿಡಲು ಬಯಸುವವರಿಗೆ ಈ ಆಯ್ಕೆಯು ಸೂಕ್ತವಾಗಿದೆ.














