ಪಾನಿಪುರಿವಾಲನಿಗೆ 40 ಲಕ್ಷ ಆದಾಯ: ಹಲವರ ತಲೆ ಕೆಡಿಸಿರೋ GST ನೋಟಿಸ್ ಹಿಂದಿರೋ ಸತ್ಯನೇ ಬೇರೆ!
ಪಾನಿಪುರಿವಾಲನಿಗೆ 40 ಲಕ್ಷ ಆದಾಯದ ಹಿನ್ನೆಲೆಯಲ್ಲಿ, GST ನೋಟಿಸ್ ಜಾರಿಯಾಗಿರುವ ಸುದ್ದಿಯ ಹಿಂದಿರೋ ಸತ್ಯನೇ ಬೇರೆ. ನೋಟಿಸ್ ಬಂದದ್ದು ಏಕೆ?
ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ಪಾನಿಪುರಿ ಮಾರಾಟಗಾರನ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. 40 ಲಕ್ಷ ರೂಪಾಯಿ ಆದಾಯ ಇರುವ ಈ ಮಾರಾಟಗಾರನಿಗೆ ಜಿಎಸ್‌ಟಿ ನೋಟಿಸ್ ಬಂದಿದ್ದು, ಜಿಎಸ್ಟಿಯನ್ನು ಪಾವತಿಸುವಂತೆ ಹೇಳಲಾಗಿದೆ ಎನ್ನಲಾಗುತ್ತಿದೆ. ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರು ಕೂಡ ಈ ಸುದ್ದಿ ಕೇಳಿ ಸುಸ್ತಾಗಿ ಹೋಗಿದ್ದೂ ಇದೆ. ಕೆಲವರಂತೂ ಜೀವಮಾನ ಇಡೀ ದುಡಿದರೂ ತಮಗೆ ಇಷ್ಟು ಆದಾಯ ಬರುವುದಿಲ್ಲ ಎಂದು ಹೇಳಿದವರೂ ಉಂಟು. ಇದೇ ಕಾರಣಕ್ಕೆ ಪಾನಿಪುರಿ ಮಾರಾಟಗಾರನ ಜಿಎಸ್‌ಟಿ ನೋಟಿಸ್ ಹಲ್ಚಲ್ ಸೃಷ್ಟಿಸುತ್ತಲೇ ಇದ್ದು, ಇದರ ಬಗ್ಗೆ ಇದಾಗಲೇ ಥಹರೇವಾರಿ ಕಮೆಂಟ್ಸ್, ಮೀಮ್ಸ್ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಇದನ್ನು ಮೊದಲು ಸ್ಟ್ಯಾಂಡ್-ಅಪ್ ಕಮಿಡಿಯನ್ ಜಗದೀಶ್ ಚತುರ್ವೇದಿ ಅವರು ಶೇರ್ ಮಾಡಿದ್ದರು. "ಪಾನಿಪುರಿ ವಾಲಾ ವರ್ಷಕ್ಕೆ 40 ಲಕ್ಷ ಗಳಿಸುತ್ತಾನೆ ಮತ್ತು ಆದಾಯ ತೆರಿಗೆ ನೋಟಿಸ್ ಪಡೆಯುತ್ತಾನೆ" ಎಂದು ಅವರು ಬರೆದು ಕೊಂಡಿದ್ದರು.
ಆದರೆ ಇದರ ಸತ್ಯಾಂಶ ಈಗ ಬಯಲಾಗಿದೆ. ಇಂಡಿಯಾ ಟುಡೇ ಟಿವಿ ಈ ನೋಟೀಸ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. ಹಾಗೆಂದು ಈ ಸುದ್ದಿಯಲ್ಲಿ ಸತ್ಯಾಂಶ ಇಲ್ಲವೆಂದೇನಲ್ಲ. ಆದರೆ ಸ್ವಲ್ಪ ಕನ್ಫ್ಯೂಸ್ ಆಗಿದೆ ಅಷ್ಟೇ. ಅದೇನೆಂದರೆ, ಜಿಎಸ್‌ಟಿ ನೋಟಿಸ್ ಪಾನಿಪುರಿ ಮಾರಾಟಗಾರನಿಗೆ ಬಂದದ್ದು ನಿಜವೇ. ಆದರೆ ಆ ನೋಟಿಸ್ ಈ ನೋಟಿಸ್ ಎರಡನ್ನೂ ಮಿಕ್ಸ್ ಮಾಡಿ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಅಸಲಿಗೆ ಜಿಎಸ್‌ಟಿ ನೀಡುವಂತೆ ನೋಟಿಸ್ ನೀಡಿದ್ದು, ಕನ್ಯಾಕುಮಾರಿಯಲ್ಲಿರುವ ಹೋಟೆಲ್ ಮಾರಾಟಗಾರನಿಗೆ ವಿನಾ ಜಿಎಸ್‌ಟಿ ಹಣ ಪಾವತಿಸುವಂತೆ ಪಾನಿಪುರಿವಾಲಾನಿಗೆ ನೋಟಿಸ್ ನೀಡಲಿಲ್ಲ. ಹಾಗೆಂದು, ಪಾನಿಪುರಿವಾಲಾನಿಗೆ ನೋಟಿಸ್ ಬಂದಿಲ್ಲ ಎಂದಲ್ಲ. ಆತನಿಗೂ ನೋಟಿಸ್ ಬಂದಿರುವುದು ನಿಜವೇ.
ಟಿ.ವಿ ಪ್ರಿಯರಿಗೆ ಶಾಕ್ ಕೊಟ್ಟ ಕೆಲ ಚಾನೆಲ್ಗಳು: ಫೆ.1 ರಿಂದ ಟಿ.ವಿ ನೋಡುವುದು ಬಲು ದುಬಾರಿ- ಹೀಗಿವೆ ರೇಟ್
ಆಗಿದ್ದೇನೆಂದರೆ, ಪಾನಿಪುರಿ ಮಾರಾಟಗಾರರಿಗೆ ಜಿಎಸ್‌ಟಿ ನೋಂದಣಿ ಪ್ರಮಾಣಪತ್ರವನ್ನು ಪಡೆಯಲು ಮತ್ತು ಜಿಎಸ್‌ಟಿ ವ್ಯಾಪ್ತಿಗೆ ತನ್ನ ವ್ಯವಹಾರವನ್ನು ನೋಂದಾಯಿಸಲು ಜಿಎಸ್‌ಟಿ ಸಂಖ್ಯೆಯನ್ನು ಪಡೆಯಲು ನೋಟಿಸ್ ನೀಡಲಾಗಿದೆ. ಇದರ ಪ್ರಸ್ತುತ, GST ವಿನಾಯಿತಿ ಮಿತಿಯನ್ನು ಸರಕುಗಳಿಗೆ 40 ಲಕ್ಷ ಮತ್ತು ರೂ. ಸೇವೆಗಳಿಗೆ 20 ಲಕ್ಷ ರೂಪಾಯಿಗಳು ಇವೆ. ಇದರ ಅರ್ಥ ಪಾನಿಪುರಿ ಮಾರಾಟಗಾರ ಪಾನಿಪುರಿ ಸಾಮಗ್ರಿ ಮಾರಾಟ ಮಾಡಿ 40 ಲಕ್ಷ ರೂಪಾಯಿ ಇಲ್ಲವೇ, ಪಾನಿಪುರಿ ಮಾರಿ 20 ಲಕ್ಷ ರೂಪಾಯಿಗಿಂತಲೂ ಅಧಿಕ ವ್ಯವಹಾರ ನಡೆಸುತ್ತಿರುವುದು ನಿಜವೇ. ಆದ ಕಾರಣ, ನಿಯಮದ ಅನ್ವಯ ಅವನಿಗೆ ಜಿಎಸ್ಟಿಗೆ ವ್ಯವಹಾರವನ್ನು ನಿಯಮದ ಪ್ರಕಾರ ನೋಂದಾಯಿಸಿಕೊಳ್ಳಲು ಹೇಳಲಾಗಿದೆ.
ಆದರೆ ಹೋಟೆಲ್ಗೆ ನೀಡಿರುವ ನೋಟಿಸ್ ಅನ್ನು ಪಾನಿಪುರಿವಾಲಾಗೆ ನೀಡಿರುವ ನೋಟಿಸ್ಗೆ ಸೇರಿಸಿ ಅದನ್ನು ವೈರಲ್ ಮಾಡಲಾಗುತ್ತಿದೆ. ಮಾರಾಟಗಾರರಿಗೆ ನೋಂದಣಿ ಪ್ರಮಾಣಪತ್ರವನ್ನು ಪಡೆಯಲು ಮತ್ತು ಜಿಎಸ್‌ಟಿ ವ್ಯಾಪ್ತಿಗೆ ಬರಲು ತನ್ನ ವ್ಯವಹಾರವನ್ನು ನೋಂದಾಯಿಸಲು ಜಿಎಸ್‌ಟಿ ಸಂಖ್ಯೆಯನ್ನು ಪಡೆಯುವ ಮೂಲಕ ತಿಳಿಸುವುದಾಗಿ ಹೇಳಿದೆ. ಇದಕ್ಕೆ ಮಾರಾಟಗಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಚೆನ್ನೈನ ಅಧಿಕಾರಿಗಳೇ ತಿಳಿಸಿರುವುದಾಗಿ ವರದಿಯಾಗಿದೆ. ವರದಿಗಳ ಪ್ರಕಾರ, ಡಿಸೆಂಬರ್ 17 ರಂದು ತಮಿಳುನಾಡು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಮತ್ತು ಕೇಂದ್ರ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 70 ರ ಅಡಿಯಲ್ಲಿ ಮಾರಾಟಗಾರರಿಗೆ ಸಮನ್ಸ್ ನೀಡಲಾಗಿದೆ. ಮಾರಾಟಗಾರನಿಗೆ ಸಮನ್ಸ್ ನೀಡಲಾಗಿದೆ ಮತ್ತು ಕಳೆದ ಮೂರು ವರ್ಷಗಳಿಂದ ಅವರ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಹಣಕಾಸಿನ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. 40 ಲಕ್ಷ ವಾರ್ಷಿಕ ವಹಿವಾಟು ನಡೆಸಿದ ನಂತರವೂ ಜಿಎಸ್‌ಟಿ ನೋಂದಣಿ ಇಲ್ಲದೆ ಸೇವೆಗಳನ್ನು ಒದಗಿಸುವುದು ಅಥವಾ ಸರಕುಗಳನ್ನು ಪೂರೈಸುವುದು ಅಪರಾಧ ಎಂದು ಅದು ಹೇಳಿದೆ. ಇದರ ಅರ್ಥ, ಆತ ಅಷ್ಟು ದುಡಿಮೆ ಮಾಡುತ್ತಿರುವುದಂತೂ ನಿಜ ಎನ್ನುವುದು ತಿಳಿದಿದೆ! ಆದ್ದರಿಂದ ತಲೆ ಕೆಡಿಸಿಕೊಳ್ಳುತ್ತಿರುವವರ ತಲೆ ಮತ್ತೂ ಕೆಡುವುದು ನಿಜ.
ಪ್ರತಿ ತಿಂಗಳು 5 ಸಾವಿರ ಸೇವ್ ಮಾಡಿ- 8.50 ಲಕ್ಷ ಪಡೆದುಕೊಳ್ಳಿ: ಪೋಸ್ಟ್ ಆಫೀಸ್ ಈ ಯೋಜನೆ ನೋಡಿ...