ಹೆದ್ದಾರಿಯಲ್ಲಿ ಬಿದ್ದ ಬೈಕರ್ ಐಫೋನ್ ಮೇಲಿಂದ ಪಾಸಾಯ್ತು 7 ಕಾರು, ಒಂದ ಹಿಂದೆ ಮತ್ತೊಂದರಂತೆ 7 ಕಾರುಗಳು ಐಫೋನ್ ಮೇಲಿಂದ ತೆರಳಿದೆ. ಕೊನೆಗೂ ಐಫೋನ್ ಎತ್ತಿಕೊಂಡ ಮಾಲೀಕ ಹೇಳಿದ್ದೇನು?

ಸ್ಮಾರ್ಟ್‌ಫೋನ್ ಕೈಯಿಂದ ಕೆಳಕ್ಕೆ ಬಿದ್ದರೆ ಕತೆ ಮುಗೀತು. ಪ್ರಮುಖವಾಗಿ ಡಿಸ್‌ಪ್ಲೆ ಹಾಗೂ ಟಚ್ ಸಮಸ್ಯೆ ಎದುರಾಗುತ್ತದೆ. ಬಳಿಕ ರಿಪೇರಿ ಮಾಡಿದರೂ ಮೊದಲಿನ ರೀತಿ ಇರುವುದಿಲ್ಲ, ಇದ್ದರೂ ವಾರೆಂಟಿ ಇರುವುದಿಲ್ಲ. ಸ್ಮಾರ್ಟ್‌ಫೋನ್‌ಗಳ ಪೈಕಿ ಐಫೋನ್ ಉತ್ತಮ ಗುಣಮಟ್ಟದ ಫೋನ್ ಎಂದು ಬಳಕೆದಾರರು ಸರ್ಟಿಫಿಕೇಟ್ ನೀಡುತ್ತಾರೆ. ಅಚಾನಕ್ಕಾಗಿ ಬೈಕರ್ ಒಬ್ಬನ ಫೋನ್ ಹೆದ್ದಾರಿಗೆ ಬಿದ್ದು ಕ್ರಾಶ್ ಟೆಸ್ಟ್ ನಡೆದು ಹೋಗಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಐಫೋನ್ ಜಾರಿ ಹೆದ್ದಾರಿಗೆ ಬಿದ್ದಿದೆ. ಈ ಐಫೋನ್ ಮೇಲಿನಿಂದ 7 ಕಾರಗಳು ವೇಗವಾಗಿ ಸಾಗಿದೆ. ಕೊನೆಗೆ ಓಡೋಡಿ ಬಂದ ಮಾಲೀಕ ಐಫೋನ್ ಎತ್ತಿಕೊಂಡಿದ್ದಾನೆ.

ಹೆದ್ದಾರಿ ಮೇಲೆ ಬಿದ್ದ ಐಫೋನ್

ರಾಯಲ್ ಎನ್‌ಫೀಲ್ಡ್ ಬುಲೆಟ್ ಮೂಲಕ ಸಾಗುತ್ತಿದ್ದ ಬೈಕ್ ಸವಾರ ನ್ಯಾವಿಗೇಶನ್‌ಗಾಗಿ ತನ್ನ ಐಫೋನ್ 17‌ನಲ್ಲಿ ಹಾಕಿ ಸಾಗಿದ್ದ. ಬೈಕ್‌ ಹ್ಯಾಂಡಲ್ ಬಳಿ ಐಫೋನ್ ಫಿಕ್ಸ್ ಮಾಡಿ ವೇಗವಾಗಿ ಸಾಗುತ್ತಿದ್ದಂತೆ ಐಫೋನ್ ಕೆಳಕ್ಕೆ ಬಿದ್ದಿದೆ. ಬೈಕ್ ಸವಾರ ತಕ್ಷಣವೇ ಬೈಕ್ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಹೆದ್ದಾರಿಯಿಂದ ಐಫೋನ್ ಹೆಕ್ಕಿ ತೆಗೆಯಲು ಓಡಿದ್ದಾನೆ.

ಬೈಕರ್ ಓಡಿ ಬರುವ ವೇಳೆಗೆ ಐಫೋನ್ ಮೇಲಿಂದ 7 ಕಾರುಗಳು ತೆರಳಿದೆ. 7 ಕಾರುಗಳ ಟೈಯರ್‌ನ ಅಡಿಯಲ್ಲಿ ಸಿಲುಕಿದ ಐಫೋನ್ 17 ರಸ್ತೆಯಿಂದ ಹೆಕ್ಕಿ ತೆಗೆದ ಮಾಲೀಕ, ಅನ್‌ಲಾಕ್ ಮಾಡುತ್ತಿದ್ದಂತೆ ಆನ್ ಆಗಿದೆ. ಎಲ್ಲಾ ಫೀಚರ್ , ಟಚ್ ವರ್ಕ್ ಆಗುತ್ತಿದೆ. ಈ ಘಟನೆಯಿಂದ ಬೈಕ್ ಸವಾರ ಅಚ್ಚರಿಗೊಂಡಿದ್ದಾನೆ. ಕಾರಣ ಅತೀ ವೇಗದಲ್ಲಿ ಸಾಗುತ್ತಿರುವಾಗ ಐಫೋನ್ ಹೆದ್ದಾರಿಗೆ ಬಿದ್ದಿದೆ. ಬಿದ್ದ ರಭಸದಲ್ಲೇ ಪುಡಿ ಪುಡಿಯಾಗುವ ಎಲ್ಲಾ ಲಕ್ಷಣವಿತ್ತು. ಬಳಿಕ ಇದರ ಮೇಲೆ 7 ಕಾರುಗಳ ಪಾಸಾಗಿದೆ. ಹೀಗಾಗಿ ತನ್ನ ಐಫೋನ್ ಪುಡಿ ಪುಡಿಯಾಗಿರಲಿದೆ ಎಂದು ಬಾವಿಸಿದ್ದ. ಆದರೆ ಯಾವುದೇ ಸಮಸ್ಯೆ ಇಲ್ಲದೆ, ಸಣ್ಣ ಸ್ಕ್ರಾಚ್ ಮೂಲಕ ಐಫೋನ್ 17 ಉತ್ತಮವಾಗಿದೆ ಎಂಬುದು ಖಾತ್ರಿಗೊಂಡಿದೆ.

ಐಫೋನ್ ಗುಣಮಟ್ಟ ಕುರಿತು ಭರ್ಜರಿ ಪ್ರತಿಕ್ರಿಯೆ

ರಸ್ತೆ ಮೇಲೆ ಬಿದ್ದು 7 ಕಾರು ಪಾಸ್ ಆದರೂ ಐಫೋನ್ 17 ಯಾವುದೇ ಸಮಸ್ಯೆಯಾಗಿಲ್ಲ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಐಫೋನ್‌ ಇಷ್ಟು ದುಬಾರಿ ಯಾಕೆ ಅನ್ನೋದು ಈ ವಿಡಿಯೋ ಮೂಲಕ ಸಾಬೀತಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ಆ್ಯಪಲ್ ಕಂಪನಿ ಈ ವಿಡಿಯೋವನ್ನು ಜಾಹೀರಾತಾಗಿ ಬಳಸಿಕೊಳ್ಳಬಹುದು. ಇದಕ್ಕಿಂತ ಉತ್ತಮ ಜಾಹೀರಾತು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

View post on Instagram