ಡೇಟಾ-ಬಾಕರಿಗೆ ಇನ್ನಿಲ್ಲ ಟೆನ್ಶನ್, ಏರ್ಟೆಲ್ ತಂದಿದೆ ಹೊಸ ಇಂಟರ್ನೆಟ್ ಪ್ಲಾನ್!
ಮೊಬೈಲ್‌ನಲ್ಲಿ ಇಂಟರ್ನೆಟ್ ಇಲ್ದಿದ್ರೆ ಅಥವಾ ಮುಗಿದು ಹೋದ್ರೆ ತಲೆ ಚಿಟ್ಟು ಹಿಡಿಯುವ ಬಹಳ ಮಂದಿ ನಮ್ಮಲ್ಲಿದ್ದಾರೆ. ಕೆಲವರಿಗೆ ಹೊಟ್ಟೆಗೆ ಊಟ-ತಿಂಡಿ ಇಲ್ದಿದ್ರೂ ಪರ್ವಾಗಿಲ್ಲ, ಇನ್ನು ಕೆಲವರಿಗೆ ಕೈಯಲ್ಲಿ ದುಡ್ಡು ಇಲ್ದಿದ್ರೂ ಪರ್ವಾಗಿಲ್ಲ, ಮೊಬೈಲ್‌ನಲ್ಲಿ ಇಂಟರ್ನೆಟ್ ಇರ್ಬೇಕು. ಅಂಥ ಡೇಟಾದ ಹಸಿವು ಇರುವವರಿಗೆ ಏರ್ಟೆಲ್ ಪ್ಲಾನ್‌ವೊಂದನ್ನು ಪರಿಚಯಿಸಿದೆ.
ಈಗ ಜನಕ್ಕೆ ಬೆಳಗ್ಗೆ ತಿನ್ನಕ್ಕೆ ವಡಾ ಸಿಗದಿದ್ದರೂ ಪರ್ವಾಗಿಲ್ಲ, ಬೆಳಗೆದ್ದ ಕೂಡ್ಲೇ ಮೊಬೈಲ್‌ನಲ್ಲಿ ಡೇಟಾ ಮಾತ್ರ ಬೇಕೇ ಬೇಕು. ಮೊಬೈಲ್ ಬಳಕೆ ಕಾಲ್‌ಗಿಂತ ಇಂಟರ್ನೆಟ್‌ಗಾಗಿಯೇ ಹೆಚ್ಚು ಉಪಯೋಗಿಸ್ತಾರೆ. ವಾಟ್ಸಪ್ಪು, ಫೇಸ್ಬುಕ್ಕು, ಆನ್‌ಲೈನ್ ಶಾಪಿಂಗು, ಮನಿ ಟ್ರಾನ್ಸ್‌ಫರ್, ಕ್ಯಾಬ್ ಬುಕ್ಕಿಂಗು, ಫುಡ್ ಆರ್ಡಿರಿಂಗು, ಆ ನ್ಯೂಸು, ಈ ನ್ಯೂಸು, ಆ ಆ್ಯಪು, ಈ ಆ್ಯಪು.... ಹೀಗೆ ಇಂಟರ್ನೆಟ್ ಬಳಕೆಯ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ.
ಮೊಬೈಲ್ ಕೈಗೆ ಬಂದ ಆರಂಭದ ದಿನಗಳಲ್ಲಿ ಕಾಲ್ ಚಾರ್ಜಸ್, ಮೆಸೇಜ್ ದರಗಳ ಬಗ್ಗೆ ತಲೆಕೆಡಿಸಿಕೊಂಡಷ್ಟು ಈಗ ಟೆನ್ಶನ್ ತಕೋಬೇಕಾಗಿಲ್ಲ. ಈಗ ಏನಿದ್ದರೂ ಡೇಟಾ ಮತ್ತದರ ಕಾಸಿನದ್ದೇ ಚಿಂತೆ!
ಈಗೀಗ ಬಳಕೆದಾರನಿಗೆ ಗೋಣಿ ತುಂಬಾ ಡೇಟಾ ತುಂಬಿಕೊಟ್ಟರೂ ಕಡಿಮೆನೇ! ಅತ್ತ ಎಲ್ಲಾ ಟೆಲಿಕಾಂ ಕಂಪನಿಗಳು ಚಿನ್ನದ ಮೊಟ್ಟೆ ಕೊಡೋ ಕೋಳಿನೂ ಇದೇ...! ಹಾಗಾಗಿ ಅವುಗಳ ನಡುವೆ ದರದ ವಿಚಾರದಲ್ಲಿದ್ದ ಪೈಪೋಟಿ ಹೋಗಿ ಸಮರದ ರೂಪ ತಾಳಿದೆ ಎಂದರೆ ತಪ್ಪಾಗಲ್ಲ ಬಿಡಿ.
ಇದನ್ನೂ ಓದಿ | ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?...
ಭಾರ್ತಿ ಏರ್ಟೆಲ್ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಹೊಸ ಪ್ಲಾನ್‌ಗಳನ್ನು ಹೊರ ತಂದಿದೆ. ಮೊದಲ ಪ್ಲಾನ್‌ಗೆ ನೀವು 349 ರೂ. ಕೊಡ್ಬೇಕು. ಆಗ 28 ದಿನಗಳ ಮಟ್ಟಿಗೆ ಪ್ರತಿ ದಿನ 3GB ಡೇಟಾ ಸಿಗುತ್ತೆ! ಇದು ಎಲ್ಲರಿಗೂ ಅಲ್ಲ, 4G ಬಳಕೆದಾರರಿಗೆ ಮಾತ್ರ.
ಇನ್ನೊಂದು ಪ್ಲಾನ್‌ಗೆ 558 ರೂ. ರೀಚಾರ್ಜ್ ಮಾಡಿಸಿದ್ರೆ ಆಯ್ತು. 82 ದಿನಗಳ ಕಾಲ ಪ್ರತಿದಿನ 3GB ಡೇಟಾ ಬಳಸ್ಬಹುದು. ಅಂದ ಹಾಗೆ, ಇದು 3G ಕನೆಕ್ಷನ್ ಇದ್ದವರಿಗೆ ಅನ್ವಯವಾಗುತ್ತೆ.
ಈ ಎರಡೂ ಪ್ಲಾನ್‌ಗಳಲ್ಲಿ ಲೋಕಲ್, STD, ನ್ಯಾಷನಲ್ ರೋಮಿಂಗ್ ಎಲ್ಲಾ ಅನ್ಲಿಮಿಟೆಡ್! SMS ಮಾಡ್ತೀರೋ ಇಲ್ವೋ ಗೊತ್ತಿಲ್ಲ, ದಿನಕ್ಕೆ 100 SMS ಅಂತೂ ಫ್ರೀ ಇದೆ. ಅಷ್ಟೇ ಅಲ್ರೀ, ಏರ್ಟೆಲ್ XStream ಮತ್ತು ಏರ್ಟೆಲ್ Wynkಗೆ ಸಬ್‌ಸ್ಕ್ರಿಪ್ಶನ್ ಕೂಡಾ ಸಿಗುತ್ತೆ! ಶಾ ಅಕಾಡೆಮಿಯ 4 ವಾರಗಳ ಕೋರ್ಸ್‌ಗೆ ಆ್ಯಕ್ಸೆಸ್, ನಿಮ್ಮ ಸ್ಮಾರ್ಟ್‌ಫೋನ್‌ಗೆ ಒಂದು ವರ್ಷದ ನಾರ್ಟನ್ ಮೊಬೈಲ್ ಸೆಕ್ಯೂರಿಟಿ ಸೂಟ್ ಕೂಡಾ ಸಿಗುತ್ತೆ.