Asianet Suvarna News Asianet Suvarna News

ಡಾಟಾ ಸುರಕ್ಷತೆಯ ಭರವಸೆ ನೀಡುವ ಆಪಲ್ ಫೋನ್‌ನ ಯೂಟ್ಯೂಬ್ ಚಾನಲ್ಲೇ ಹ್ಯಾಕ್‌ ಆಯ್ತಾ?

ಡಾಟಾ ಸುರಕ್ಷತೆಯ ಭರವಸೆ ನೀಡುವ ಆಪಲ್ ಫೋನ್‌ನ ಯೂಟ್ಯೂಬ್ ಚಾನಲ್ಲೇ ಹ್ಯಾಕ್ ಆದ್ರೆ  ಹೇಗಿರುತ್ತದೆ. ಖಂಡಿತ ಶಾಕ್ ಆಗೇ ಆಗುತ್ತದೆ. ಈಗ ಇಂತಹದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  

Apples YouTube channel, which assures customers worldwide of data security on their iPhone, is hacked akb
Author
First Published Sep 10, 2024, 10:06 AM IST | Last Updated Sep 10, 2024, 11:22 AM IST

ಆಪಲ್ ಫೋನ್‌ಗಳು ಅಥವಾ ಐಪೋನ್‌ಗಳು ಇಂಟರ್‌ನೆಟ್‌ನಲ್ಲಿ ನಮ್ಮ ಡಾಟಾ ಸುರಕ್ಷತೆಗೆ ಹೆಸರಾದಂತಹ ಫೋನ್‌ಗಳು. ಇದೇ ಕಾರಣಕ್ಕೆ ಅನೇಕರು ಇತ್ತೀಚೆಗೆ ಐಫೋನ್‌ಗಳನ್ನೇ ಹೆಚ್ಚು ಬಳಕೆ ಮಾಡುತ್ತಾರೆ. ಯುವ ಸಮೂಹದಲ್ಲೂ ಈ ಐಫೋನ್ ಕ್ರೇಜ್ ತೀವ್ರವಾಗಿದೆ. ಹೀಗಿರುವಾಗ ಈ ಆಪಲ್ ಕಂಪನಿಯ ಯೂಟ್ಯೂಬ್ ಚಾನೆಲ್ಲೇ ಹ್ಯಾಕ್ ಆದ್ರೆ  ಹೇಗಿರುತ್ತದೆ. ಖಂಡಿತ ಶಾಕ್ ಆಗೇ ಆಗುತ್ತದೆ. ಈಗ ಇಂತಹದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  

ಕಂಪನಿಯ ಬಹು ನಿರೀಕ್ಷಿತ 'ಗ್ಲೋಟೈಮ್' ಕಾರ್ಯಕ್ರಮದಲ್ಲಿ ಆಪಲ್ ಸಿಇಒ ಟಿಮ್ ಕುಕ್ ಬಿಟ್‌ಕಾಯಿನ್ ಕೇಳುವ ಎಐಯಲ್ಲಿ ಸೃಷ್ಠಿ ಮಾಡಿದ ನಕಲಿ ವೀಡಿಯೊವೊಂದು ವೈರಲ್ ಆಗಿದೆ. ಹೀಗಾಗಿ ಆಪಲ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿರಬಹುದು ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯೂಟ್ಯೂಬ್‌ನಲ್ಲಿ ಲೈವ್‌ಸ್ಟ್ರೀಮ್ ಆದ ಈ ವೀಡಿಯೊದಲ್ಲಿ ಆಪಲ್ ಸಂಸ್ಥಾಪಕ ಟೀಮ್‌ ಕುಕ್ ಅವರು ವೀಕ್ಷಕರ ಬಳಿ ಬಿಟ್‌ಕಾಯಿನ್‌ಗಾಗಿ ಕೇಳುತ್ತಿರುವುದನ್ನು ಈ ಎಐ ವೀಡಿಯೋ ತೋರಿಸಿದ್ದು, ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

Apple ಫೋನುಗಳಲ್ಲಿ Lockdown mode, ಸ್ಪೈವೇರ್ ದಾಳಿಯಿಂದ ರಕ್ಷಣೆ

ಈ ಬಗ್ಗೆ  MysteryDealz ಹೆಸರಿನ ಖಾತೆ ಹೊಂದಿರುವ ಟ್ವಿಟ್ಟರ್ ಬಳಕೆದಾರರು, ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಆಪಲ್‌ನ ಅಧಿಕೃತ  ಯುಎಸ್ ಯೂಟ್ಯೂಬ್ ಚಾನಲ್ ಅನ್ನು ಹ್ಯಾಕ್ ಮಾಡಲಾಗಿದೆ. ಟಿಮ್ ಕುಕ್‌ ಅವರ ಎಐ ಸೃಷ್ಟಿಸಿದ ನಕಲಿ ವೀಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಪ್ರಸ್ತುತ ಬಿಟ್‌ ಕಾಯಿನ್‌ಗಾಗಿ ವೀಕ್ಷಕರ ಬಳಿ ಕೇಳುತ್ತಿರುವ ದೃಶ್ಯವಿದೆ ಎಂದು ಬರೆದುಕೊಂಡು ವೀಡಿಯೋ ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಅನೇಕರು ಹಂಚಿಕೊಂಡಿದ್ದು, ವೈರಲ್ ಆಗಿದೆ.  ಒಬ್ಬರು ವೀಕ್ಷಕರು ಕ್ರಿಫ್ಟೊ ಸ್ಕ್ಯಾಮ್‌ನಿಂದ ಹ್ಯಾಕ್ ಆಗಿರುವುದು ನಾನ ಅಥವಾ ಆಪಲ್‌ನ ಯೂಟ್ಯೂಬ್ ಚಾನಲ್ಲಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಪಲ್ ಸಂಸ್ಥೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಚೆನ್ನೈಗೆ ಸಾಗಿಸುತ್ತಿದ್ದ 12 ಕೋಟಿ ಮೌಲ್ಯದ ಐಫೋನ್ ಕಳ್ಳತನ,ಕೇಸ್ ದಾಖಲಿಸಲು 15 ದಿನ ತೆಗೆದ ಪೊಲೀಸ್!

ಇತ್ತ ಭಾರತದಲ್ಲಿ ಕೂಡ ಇಂದು ನೂತನ ಆಪಲ್ ಐಫೋನ್ ಸಿರೀಸ್ 16 ಬಿಡುಗಡೆಯಾಗಿದ್ದು, ಮಾರಾಟ ಹೆಚ್ಚಿಸಲು ಹಾಗೂ ಮಾರುಕಟ್ಟೆಯಲ್ಲಿ ತಂತ್ರಜ್ಞಾನದೊಂದಿಗೆ ತನ್ನ ವೇಗವನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ  ಇದನ್ನು ಎಐ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ.  ಸಿಲಿಕಾನ್ ವ್ಯಾಲಿಯಲ್ಲಿರುವ ಆಪಲ್ ಐಫೋನ್‌ನ ಮುಖ್ಯ ಕಚೇರಿಯಲ್ಲಿ ನಡೆದ ಗ್ಲೋಟೈಮ್ ಕಾರ್ಯಕ್ರಮದಲ್ಲಿ ಆಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್ ಅವರು ಈ ಎಐ ಚಾಲಿತ ನೂತನ ಐಫೋನ್ 16 ಅನ್ನು ಬಿಡುಗಡೆಗೊಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು ಆಪಲ್ ಗೌಪ್ಯತೆ ಮತ್ತು ಅದರ ಪ್ರಗತಿಯ ಸಾಮರ್ಥ್ಯಗಳಿಗಾಗಿ ತಳದಿಂದ ವಿನ್ಯಾಸಗೊಳಿಸಲಾದ ಮೊದಲ ಐಫೋನ್‌ಗಳನ್ನು ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದು  ಹೇಳಿದರು. ಆಪಲ್ ಸಂಸ್ಥೆಯ ಸರಿಸುಮಾರು ಶೇಕಡಾ 60ರಷ್ಟು ಆದಾಯವೂ ಐಫೋನ್ ಮಾರಾಟದಿಂದ ಬರುತ್ತಿದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಕುಸಿತ ಕಂಡು ಬಂದ ಹಿನ್ನೆಲೆ ಮತ್ತೆ ಮಾರಾಟವನ್ನು ಮೇಲೆತ್ತಲು ಸಂಸ್ಥೆ ಹೊಸ ರೀತಿಯಲ್ಲಿ ಯೋಜನೆ ರೂಪಿಸಿದೆ. 

 

 

Latest Videos
Follow Us:
Download App:
  • android
  • ios