ಸೆ.23ಕ್ಕೆ ಭಾರತದಲ್ಲಿ Apple ಆನ್‌ಲೈನ್ ಸ್ಟೋರ್ ಆರಂಭ; ಸುಲಭವಾಗಿ ಸಿಗಲಿದೆ ಬ್ರ್ಯಾಂಡೆಡ್ ಫೋನ್!
ಹಬ್ಬದ ಪ್ರಯುಕ್ತ ಭಾರತದಲ್ಲಿ ಆ್ಯಪಲ್ ತನ್ನದೆ ಆನ್‌ಲೈನ್ ಸ್ಟೋರ್ ಆರಂಭಿಸುತ್ತಿದೆ. ಈ ಮೂಲಕ ತನ್ನದೇ ವೆಬ್ ಸ್ಟೋರ್ ಮೂಲಕ ಗ್ರಾಹಕರಿಗೆ ನೇರವಾಗಿ ಸ್ಮಾರ್ಟ್ ಪೋನ್ ತಲುಪಿಸಲು ಆ್ಯಪಲ್ ಮುಂದಾಗಿದೆ. ಸೆಪ್ಬೆಂಬರ್ 23ರಂದು ಭಾರತದಲ್ಲಿ ಆರಂಭಗೊಳ್ಳುತ್ತಿರುವ ಆನ್‌ಲೈನ್ ಸ್ಟೋರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಸೆ.18): ಭಾರತದಲ್ಲಿ ಆ್ಯಪಲ್ ಹೊಸ ಅಧ್ಯಾಯ ಆರಂಭಿಸುತ್ತಿದೆ. ಇಲ್ಲೀತನಕ ಫ್ಲಿಪ್‌ಕಾರ್ಟ್, ಅಮೇಜಾನ್ ಮೂಲಕ ಆನ್‌ಲೈನ್‌ನಲ್ಲಿ ಮೊಬೈಲ್ ಮಾರಾಟ ಮಾಡುತ್ತಿದ್ದ ಆ್ಯಪಲ್ ಇದೀಗ ತನ್ನದೇ ಆ್ಯಪಲ್ ಆನ್‌ಲೈನ್ ಸ್ಟೋರ್ ಆರಂಭಿಸುತ್ತಿದೆ. ಇದರೊಂದಿಗೆ ಗ್ರಾಹಕರು ನೇರವಾಗಿ ಆ್ಯಪಲ್ ಸ್ಟೋರ್ ಮೂಲಕ ಗ್ರಾಹಕರು ಬ್ರ್ಯಾಂಡೆಡ್ ಫೋನ್ ಖರೀದಿಸಬುಹುದು.
ಆ್ಯಪಲ್ iPhone 12 ಬಿಡುಗಡೆಗೆ ಕೌಂಟ್‌ಡೌನ್; ಇದು Appleನ ಮೊದಲ 5G ಫೋನ್!
2019ರಲ್ಲಿನ ವಿದೇಶಿ ಉತ್ಪನ್ನಗಳ ವ್ಯವಹಾರ ಹಾಗೂ ಮಾರಾಟದಲ್ಲಿನ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಇದರ ಪರಿಣಾಮವಾಗಿ ಆ್ಯಪಲ್ ಔಟ್‌ಲೆಟ್ ಹಾಗೂ ಆನ್‌ಲೈನ್ ಸ್ಟೋರ್ ಆರಂಭಿಸುತ್ತಿದೆ. ಸೆಪ್ಟೆಂಬರ್ 23 ರಂದು ನೂತನ ಆ್ಯಪಲ್ ಅನ್‌ಲೈನ್ ಸ್ಟೋರ್ ಭಾರತದಲ್ಲಿ ಆರಂಭಗೊಳ್ಳುತ್ತಿದೆ. ಹಬ್ಬಕ್ಕೂ ಮುಂಚಿತವಾಗಿ ಸ್ಟೋರ್ ಆರಂಭಗೊಳ್ಳುತ್ತಿದ್ದು, ಮಾರಾಟದಲ್ಲಿ ಗಣನೀಯ ಏರಿಕೆಯನ್ನು ನಿರೀಕ್ಷಿಸಿದೆ.
ನೀರಿನಲ್ಲಿ ತೇಲುವ Apple ಸ್ಟೋರ್, ಇದು ವಿಶ್ವದಲ್ಲೇ ಮೊದಲು!..
ಆ್ಯಪಲ್ ತನ್ನದೆ ಆನ್‌ಲೈನ್ ಸ್ಟೋರ್ ಆರಂಭಿಸುತ್ತಿರುವ 38ನೇ ರಾಷ್ಟ್ರ ಭಾರತವಾಗಿದೆ. ನಮಗಿದು ಅತ್ಯುತ್ತಮ ಅವಕಾಶ. ಭಾರತದಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಭಾರಿ ಬೇಡಿಕೆ ಹಾಗೂ ಅತ್ಯಂತ ವಿಪುಲವಾಗಿದೆ. ಹೀಗಾಗಿ ಆ್ಯಪಲ್ ತನ್ನದೇ ಆನ್‌ಲೈನ್ ಸ್ಟೋರ್ ಆರಂಭಿಸುತ್ತಿದೆ. ಈ ಮೂಲಕ ಗ್ರಾಹಕರಿಗೆ ಫ್ಯಾಕ್ಟಿರಿಯಂದ ನೇರವಾಗಿ ಗ್ರಾಹಕರಿಗೆ ಆ್ಯಪಲ್ ಬ್ರ್ಯಾಂಡೆಡ್ ಫೋನ್ ಕೈಸೇರಲಿದೆ ಎಂದು ರಿಟೆಲ್ ಆ್ಯಪಲ್ ಸ್ಟೋರ್ ಉಪಾಧ್ಯಕ್ಷ ಡೈಯರ್ಡ್ರೆ ಒಬ್ರಿಯಾನ್ ಹೇಳಿದ್ದಾರೆ.
ಆ್ಯಪಲ್ ಸ್ಟೋರ್ ಸೆಪ್ಟೆಂಬರ್ 23ಕ್ಕೆ ಆರಂಭಗೊಳ್ಳುತ್ತಿದೆ. ಆರಂಭದಲ್ಲಿ ಯಾವುದೇ ಡಿಸ್ಕೌಂಟ್ ಆಫರ್ ಆ್ಯಪಲ್ ನೀಡುತ್ತಿಲ್ಲ. ಆದರೆ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್, ಸ್ಪೆಷಲ್ ಗಿಫ್ಟ್ ಸೇರಿದಂತೆ ಕೆಲ ಸರ್ಪ್ರೈಸ್ ಪ್ಯಾಕೇಜ್ ನೀಡುತ್ತಿದೆ. ತಿಂಗಳ ಕಂತು, ಕಾರ್ಡ್ ಪೇಮೆಂಟ್ ಸೇರಿದಂತೆ ಹಲವು ಆಯ್ಕೆಗಳನ್ನು ನೀಡುತ್ತಿದೆ. ಕೊರೋನಾ ವೈರಸ್ ಕಾರಣ ಕ್ಯಾಶ್ ಆನ್ ಡೆಲವರಿ ಆಯ್ಕೆ ಸದ್ಯಕ್ಕೆ ನೀಡುತ್ತಿಲ್ಲ.
ಸದ್ಯ ಭಾರತದಲ್ಲಿ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಶೇಕಡಾ 30 ರಷ್ಟು ಆ್ಯಪಲ್ ಐಫೋನ್ ಮಾರಾಟ ಮಾಡುತ್ತಿದೆ. ಇದೀಗ ಆ್ಯಪಲ್ ತನ್ನದೇ ಸ್ಟೋರ್ ಆರಂಭಿಸಿರುವ ಕಾರಣ ಇದೀಗ ಪೈಪೋಟಿ ಹೆಚ್ಚಾಗಲಿದೆ. ನಗರ ವಲಯದಲ್ಲಿ ಬುಕ್ ಮಾಡಿದ ಮರುದಿನವೇ ಗ್ರಾಹಕರಿಗೆ ಫೋನ್ ಡೆಲಿವರಿಯಾಗಲಿದೆ. ಇನ್ನು ನಗರದಿಂದ ಹೊರವಲಯದಲ್ಲಿರುವ ಅಥವಾ ಜಿಲ್ಲೆಗಳಲ್ಲಿರುವ ಗ್ರಾಹಕರಿಗೆ 2 ದಿನಗಲ್ಲಿ ಫೋನ್ ಸಿಗಲಿದೆ.