ಆ್ಯಪಲ್ ಫುಲ್ ಸ್ಕ್ರೀನ್ iPhone ಬಿಡುಗಡೆಗೆ ತಯಾರಿ, ಡಿಸ್‌ಪ್ಲೆ ಒಳಗೆ ಕ್ಯಾಮರಾ!
* ಪೂರ್ಣ ಪರದೆಯ ಐಫೋನ್ ಬಿಡುಗಡೆ ಬಗ್ಗೆ ವಿಶ್ಲೇಷಕ ಮಿಂಗ್ ಚಿ ಕುವೋ ವಿಶ್ಲೇಷಕ ಸುಳಿವು
* ಈ ಹೊಸ ಐಫೋನ್ ಅಂಡರ್-ಡಿಸ್ಪ್ಲೇ ಫ್ರಂಟ್ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ
* ಮುಂಬರುವ ಸೆಪ್ಟೆಂಬರ್‌ನಲ್ಲಿ ಐಫೋನ್ 14 ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ
ತನ್ನ ಉತ್ಕೃಷ್ಟ ಸಾಧನಗಳ ಮೂಲಕ ಹೆಸರುವಾಸಿಯಾಗಿರುವ ಆಪಲ್ ಕಂಪನಿಯು ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ತನ್ನ ಮೊದಲ ಪೂರ್ಣ ಪರದೆಯ ಐಫೋನ್ (Full-Screen iPhone) ಮುಂಬರುವ 2024ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಸ್ಮಾರ್ಟ್‌ಫೋನ್ ವಲಯದಲ್ಲಿ ಹೆಚ್ಚು ಖ್ಯಾತಿಯಾಗಿರುವ ವಿಶ್ಲೇಷಕ ಮಿಂಗ್ ಚಿ ಕುವೋ (Ming Chi Kuo) ಅವರೂ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಆಪಲ್ 2024ರಲ್ಲಿ ತನ್ನ ಮೊದಲ ಪೂರ್ಣ ಪರದೆಯ ಐಫೋನ್ ಬಿಡಗುಡೆ ಮಾಡಲು ಆಪಲ್ ಸಿದ್ಧತೆ ನಡೆಸಿದೆ ಎಂದು ಅವರು ವಿಶ್ಲೇಷಿಸುತ್ತಿದ್ದಾರೆ. ಮಿಂಗ್ ಚಿ ಕುವೊ ಅವರ ಪ್ರಕಾರ, ಭವಿಷ್ಯದಲ್ಲಿ ಫೋನ್ ಪೂರ್ಣ-ಪರದೆಯ ಐಫೋನ್ ಪ್ರದರ್ಶನದೊಂದಿಗೆ ಅಂಡರ್-ಡಿಸ್ಪ್ಲೇ ಫ್ರಂಟ್ ಕ್ಯಾಮೆರಾ (Under Display Camera) ವನ್ನು ಒಳಗೊಂಡಿರಬಹುದು. ಮೊದಲ ನಿಜವಾದ ಪೂರ್ಣ-ಪರದೆಯ ಐಫೋನ್ 2024 ರಲ್ಲಿ ಹೊರಬರಲಿದೆ ಎಂದು ನಾನು ನಂಬುತ್ತೇನೆ. 2024 ರಲ್ಲಿ, ಹೈ-ಎಂಡ್ ಐಫೋನ್‌ಗಳು ಅಂಡರ್ ಡಿಸ್‌ಪ್ಲೇ ಫೇಸ್ ಐಡಿ ಜೊತೆಗೆ ಅಂಡರ್ ಡಿಸ್ಪ್ಲೇ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿರುತ್ತವೆ. ಕಡಿಮೆ-ಬೆಳಕಿನ ವಾತಾವರಣವು ಮುಂಭಾಗದ ಕ್ಯಾಮರಾ ಗುಣಮಟ್ಟಕ್ಕೆ ಪ್ರತಿಕೂಲವಾಗಿದೆ ಮತ್ತು ಗುಣಮಟ್ಟದ ವರ್ಧನೆಗಳಿಗೆ ISP ಮತ್ತು ಅಲ್ಗಾರಿದಮ್ ನಿರ್ಣಾಯಕವಾಗಿದೆ ಎಂದು ಟ್ವೀಟ್‌ನಲ್ಲಿ ವಿಶ್ಲೇಷಕ ಕುವೋ ಹೇಳಿದ್ದಾರೆ.
WhatsAppನಲ್ಲಿ ಲಾಸ್ಟ್ ಸೀನ್ ಹೈಡ್ ಮಾಡಬಹುದು, ಆದರೆ, ಷರತ್ತು ಅನ್ವಯ...!
ಈ ವರ್ಷದ ಐಫೋನ್ 14 ಸ್ವಯಂ-ಫೋಕಸ್ ಮತ್ತು ದೊಡ್ಡ ದ್ಯುತಿರಂಧ್ರದೊಂದಿಗೆ ವರ್ಧಿತ ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತದೆ ಎಂದು ಕುವೊ ಭವಿಷ್ಯ ನುಡಿದಿದ್ದಾರೆ. ಮೂಲಗಳ ಪ್ರಕಾರ, ಎಲ್ಲಾ ನಾಲ್ಕು ಆವೃತ್ತಿಗಳು (iPhone 14, iPhone 14 Max, iPhone 14 Pro, ಮತ್ತು iPhone 14 Pro Max) f/1.9 ಅಪರ್ಚರ್ ಮತ್ತು ಆಟೋಫೋಕಸ್ ಸಾಮರ್ಥ್ಯಗಳೊಂದಿಗೆ ನವೀಕರಿಸಿದ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಒಳಗೊಂಡಿರುತ್ತದೆ. Apple iPhone 14 Pro ಮತ್ತು 14 Pro Max ಗಳು ನವೀಕರಿಸಿದ ಬ್ಯಾಕ್ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿವೆ ಎಂದು ನಂಬಲಾಗಿದೆ, ಬಹುಶಃ 48 MP ವೈಡ್ ಲೆನ್ಸ್ ಪ್ರಾಥಮಿಕ ಸಂವೇದಕ ಮತ್ತು 8K ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯಗಳೊಂದಿಗೆ ಬರಲಿದೆ.
ಫೋನ್‌ಗಾಗಿ ಕವರ್‌ಗಳು ಮತ್ತು ಪರಿಕರಗಳನ್ನು ಉತ್ಪಾದಿಸಲು ಬಳಸಲಾಗುವ ಐಫೋನ್ 14 ಸರಣಿಯ ಲೋಹದ ಅಚ್ಚುಗಳು ಹೊಸ ಸೋರಿಕೆಯಾದ ಚಿತ್ರಗಳಲ್ಲಿ ಬಹಿರಂಗವಾಗಿವೆ. Weibo ನಲ್ಲಿ ಅಪ್‌ಲೋಡ್ ಮಾಡಲಾದ ಅಚ್ಚುಗಳು (Moulds), ಸರಣಿಯು ಎರಡು ಐಫೋನ್ (iPhone) ಗಾತ್ರಗಳನ್ನು ಮಾತ್ರ ಒಳಗೊಂಡಿರುತ್ತದೆ ಎಂದು ಸೂಚಿಸುತ್ತದೆ.
ಪ್ರಸ್ತುತ ಐಫೋನ್ 13 ಸರಣಿಯು ಮೂರು ಗಾತ್ರಗಳಲ್ಲಿ ಬರುತ್ತದೆ. IPhone 13 mini (5.4-inch screen), iPhone 13 ಮತ್ತು iPhone 13 Pro (6.1-inch screen), ಮತ್ತು iPhone 13 Pro Max ಮಾದರಿಗಳು (6.7-inch screen). ಆದಾಗ್ಯೂ, ಲೋಹದ ಅಚ್ಚುಗಳು 14 ಸರಣಿಯು ಕೇವಲ ಎರಡು ರೀತಿಯ ಐಫೋನ್‌ಗಳನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ. 6.1-ಇಂಚಿನ ಮತ್ತು 6.7-ಇಂಚಿನ ಎರಡು ಗಾತ್ರಗಳಲ್ಲಿ ಲಭ್ಯವಿರಲಿದೆ.
ಐಫೋನ್ 14ರಲ್ಲಿ ಉಪಗ್ರಹ ಸಂಪರ್ಕ ಸೌಲಭ್ಯ
ಆಪಲ್ (Apple) ಕಂಪನಿಯ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಐಫೋನ್ 14 (iPhone 14) ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ, ಆಗಲೇ ಈ ಫೋನ್ ಬಗ್ಗೆ ಸಾಕಷ್ಟು ಕುತೂಹಲ ಮೂಡುತ್ತಿದೆ. ಹಲವು ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತಿದ್ದು, ಹೊಸ ಹೊಸ ಫೀಚರ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಉಪಗ್ರಹ ಸಂಪರ್ಕವನ್ನು ಹೊಂದುವ ಸೌಲಭ್ಯವನ್ನು ಈ ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಏ.27ಕ್ಕೆ Xiaomi Pad 5 ಲಾಂಚ್, 7 ವರ್ಷದ ಬಳಿಕ ಭಾರತದಲ್ಲಿ ಶವೊಮಿ ಟ್ಯಾಬ್ಲೆಟ್
ಯಾವುದೇ ಸೆಲ್ಯುಲಾರ್ ಸೇವೆ ಇಲ್ಲದಿದ್ದರೂ ಸಹ ಬಳಕೆದಾರರು ಕರೆಗಳನ್ನು ಮಾಡಲು ಮತ್ತು ಸಂದೇಶಗಳನ್ನು ಕಳುಹಿಸಲು ಈ ಉಪಗ್ರಹ ಸಂಪರ್ಕ ಸೌಲಭ್ಯವು ಅನುವು ಮಾಡಿಕೊಡುತ್ತದೆ. ಐಫೋನ್ 14 ಸರಣಿಯ ಜೊತೆಗೆ, ಆಪಲ್ ವಾಚ್‌ಗೆ ಉಪಗ್ರಹ ಸಂಪರ್ಕವನ್ನು ನೀಡುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಗ್ರಾಹಕರಿಗೆ ಸಂಪರ್ಕ ಆಯ್ಕೆಗಳೊಂದಿಗೆ ನೀಡಲು ಈ ಸಾಮರ್ಥ್ಯಗಳನ್ನು ಪ್ರಾರಂಭಿಸುತ್ತಿದೆ ಇದೊಂದು ಹೊಸ ಫೀಚರ್ ಆಗಿದ್ದು, ಬಹುಶಃ ಇತರ ಯಾವುದೇ ಸ್ಮಾರ್ಟ್‌ಫೋನ್ ಕಂಪನಿಯಗಳು ಈ ರೀತಿಯ ಹೊಸ ಫೀಚರ್ ಅನ್ನು ನೀಡುತ್ತಿಲ್ಲ ಎನ್ನಬಹುದು. ಹಾಗಾಗಿ, ಆಪಲ್ ಕಂಪನಿಯ ಈ ಹೊಸ ಸಾಹಸವು ಹೆಚ್ಚು ಚರ್ಚೆಗೊಳಗಾತುಗುತ್ತಿದೆ.