Apple Festive Offers: ಆಪಲ್ ಇಂಡಿಯಾ ದೀಪಾವಳಿ ಸೇಲ್! ಏನೆಲ್ಲ ಆಫರ್ಸ್?

*ಆಪಲ್ ಇತ್ತೀಚೆಗಷ್ಟೇ ಐಫೋನ್ 14 ಸರಣಿ ಫೋನುಗಳನ್ನು ಲಾಂಚ್ ಮಾಡಿದೆ
*ಸೋಮವಾರದಿಂದ ದೀಪಾವಳಿ ಸೇಲ್ ಆರಂಭಿಸುತ್ತಿದೆ ಆಪಲ್ 
*ಯಾವೆಲ್ಲ ಉತ್ಪನ್ನಗಳ ಮೇಲೆ ರಿಯಾಯ್ತಿ ಇರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ

Apple India Deepavali sales starts from today and check deals

ಇತ್ತೀಚೆಗಷ್ಟೇ ಆಪಲ್ (Apple) ಕಂಪನಿಯು ತನ್ನ ಐಫೋನ್ 14 (iPhone 14) ಸರಣಿ ಫೋನುಗಳನ್ನು ಮಾರುಕಟ್ಟೆಗೆ  ಬಿಡುಗಡೆ ಮಾಡಿದೆ. ಈಗ ಆ್ಯಪಲ್ ಕಂಪನಿುಯ ಭಾರತೀಯ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಆ್ಯಪಲ್ ದೀಪಾವಳಿ ಸೇಲ್ (Apple Deepavali Sale) ಆರಂಭಿಸಲಿದೆ. ಸೆಪ್ಟೆಂಬರ್ 26ರಂದು ಅಂದರೆ, ಸೋಮವಾರದಿಂದ ಆರಂಭವಾಗಲಿದೆ. ಗ್ರಾಹಕರಿಗೆ ಕೆಲವು ರಿಯಾಯ್ತಿಗಳೊಂದಿಗೆ ಆ್ಯಪಲ್ ಉತ್ಪನ್ನಗಳು ಈ ವಿಶೇಷ ದೀಪಾವಳಿ ಸೇಲ್ನಲ್ಲಿ ದೊರೆಯಲಿವೆ. ಸೆಪ್ಟೆಂಬರ್ 26ರಿಂದ ದೀಪಾವಳಿ ಸೇಲ್ ಆರಂಭಿಸುವ ಬಗ್ಗೆ ಆ್ಯಪಲ್ ಕಂಪನಿ ಅಧಿಕೃತವಾಗಿಯೇ ಮಾಹಿತಿಯನ್ನು ನೀಡಿದೆ. ಈ ದೀಪಾವಳಿ ಸೇಲ್ನಲ್ಲಿ ಕಂಪನಿಯು ಯಾವೆಲ್ಲ ಡಿಸ್ಕೌಂಟ್, ರಿಯಾಯ್ತಿಗಳನ್ನು ಒದಗಿಸಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಗ್ರಾಹಕರು ಸೀಮಿತ ಅವಧಿಯವರೆಗೆ ಕೊಡುಗೆಗಳನ್ನು ಪಡೆಯಲಿದೆ ಎಂದಷ್ಟೇ ತಿಳಿಸಿದೆ. ಹಾಗಾಗಿ, ಈ ಬಗ್ಗೆ ಇನ್ನಷ್ಟು ಮಾಹಿತಿಗಳು ದೊರೆಯಬೇಕಿದೆ.

ಇಷ್ಟಾಗಿಯೂ ಆ್ಯಪಲ್ ಕಂಪನಿಯ ಐಫೋನ್‌ಗಳ ಮಾರಾಟದ ಮೇಲೆ ಕೆಲವು ಉಚಿತ ಕೊಡುಗೆಗಳನ್ನು ನೀಡುತ್ತಿದೆ ಎನ್ನಲಾಗುತ್ತಿದೆ. ಆದರೆ, ಯಾವುದೇ ಖಚಿತವಾದ ಮಾಹಿತಿಯನ್ನು ಅದು ಬಹಿರಂಗಪಡಿಸಿಲ್ಲ. ಆ್ಯಪಲ್ ಐಫೋನ್ 13 (Apple iPhone 13) ಮತ್ತು  ಆ್ಯಪಲ್ ಐಫೋನ್ 13 ಮಿನಿ (iPhone 13 mini) ಜೊತೆಗೆ ಏರ್‌ಪಾಡ್‌ (AirPod) ಗಳನ್ನು ನೀಡುತ್ತದೆ ಎಂದು ಗ್ರಾಹಕರು ನಿರೀಕ್ಷಿಸುತ್ತಿದ್ದಾರೆ. ಆಪಲ್ ಕಳೆದ ವರ್ಷ ಐಫೋನ್ 12 ಮತ್ತು ಅದರ ಮಿನಿ ರೂಪಾಂತರದೊಂದಿಗೆ ಪೂರಕ ಏರ್‌ಪಾಡ್‌ಗಳನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2020 ರಲ್ಲಿ ಐಫೋನ್ 11 ಸರಣಿಯ ಬಿಡುಗಡೆಯೊಂದಿಗೆ, ಅದೇ ದಿನ ಹಾಲಿಡೇ ಡೀಲ್‌ಗಳನ್ನೂ ಕೂಡ ಘೋಷಿಸಿತ್ತು. ಇದೇ ರೀತಿಯ ಕೊಡುಗೆಯನ್ನು (Offers) ಬಹುಶಃ ಈ ವರ್ಷವೂ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸೋಮವಾರ ಈ ಬಗ್ಗೆ ಸ್ಪಷ್ಟವಾದ ಮಾಹಿತಿಯು ಗ್ರಾಹಕರಿಗೆ ಸಿಗಲಿದೆ.

Flipkart Sale: ಕಡಿಮೆ ರೇಟಿಗೆ ಸಿಗಲಿದೆ 5 ದುಬಾರಿ ಫೋನ್‌ಗಳು!

ಆಪಲ್ ಐಫೋನ್  ಮಾರಾಟದ ಮೇಲೆ ದರ ಕಡಿತವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂದು ಇನ್ನೂ ಹೇಳಿಲ್ಲ. ಐಫೋನ್ 14 ಸರಣಿಯ ಚೊಚ್ಚಲ ಭಾಗವಾಗಿ ಸಂಸ್ಥೆಯು ಇತ್ತೀಚೆಗೆ ಐಫೋನ್ 13 ನ ಬೆಲೆಯನ್ನು ಕಡಿಮೆ ಮಾಡಿದೆ ಎಂಬುದನ್ನು ಗಮನಿಸಬಹುದು. ಸಾಮಾನ್ಯವಾಗಿ ಹೊಸ ಐಫೋನ್‌ಗಳನ್ನು (iPhone) ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಹಳೆಯ ಐಫೋನ್ ಬೆಲೆಯನ್ನು ಕಂಪನಿಯು ಕಡಿಮೆ ಮಾಡುತ್ತದೆ. ಅದೇ ರೀತಿ ಈಗಲೂ ಮಾಡಿದೆ. ಹಾಗಾಗಿ, ಈಗಾಗಲೇ ಐಫೋನ್ 13 ಫೋನ್ ಬೆಲೆ ಕಡಿಮೆ ಮಾಡಿದ್ದರಿಂದ ಮತ್ತೆ ಇದೇ ಫೋನ್ ಖರೀದಿಗೆ ಇನ್ನಷ್ಟು ಆಫರ್ ಸಿಗದೇ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ,  ಬ್ಯಾಂಕ್ ಕಾರ್ಡ್‌ಗಳನ್ನು ರಿಯಾಯಿತಿಗಳಿಗೆ ಆಧಾರವಾಗಿ ಬಳಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಡೈನಾಮಿಕ್ ಐಲ್ಯಾಂಡ್: ಆ್ಯಂಡ್ರಾಯ್ಡ್ ಫೋನ್‌ಗಳಿಗೂ ಐಫೋನ್ 14 ರೀತಿಯ ಫೀಚರ್?

ಸದ್ಯಕ್ಕೆ ಐಫೋನ್ 13 ಬೆಲೆ 69,900 ರೂ. ಇದೆ. ಈ ಫೋನ್ (Phone) ಬೆಲೆ ದರ ಕಡಿತದ ಬಳಿಕ ಒಂದಿಷ್ಟು ಕಡಿಮೆಯಾಗಿದೆ. ಆದಾಗ್ಯೂ, ಆಸಕ್ತ ಖರೀದಿದಾರರು ಫ್ಲಿಪ್ಕಾರ್ಟ್ (Flipkart) ಬಿಗ್ ಬಿಲಿಯನ್ ಡೇಸ್ (Big Billion Days) ಸಮಯದಲ್ಲಿ ಈ ಸಾಧನವನ್ನು 56,990 ರೂ.ಗೆ ಖರೀದಿಸಬಹುದಾಗಿದೆ. ಆದಾಗ್ಯೂ, ವೆಚ್ಚವು ಈಗಾಗಲೇ 56,990 ರೂ ಆಗಿರುವುದರಿಂದ, ಇದು ಒಂದು ಬಾರಿಯು ಒನ್ ಟೈಮ್ ಡೀಲ್ ಆಗಿದೆ ಎಂದು ಹೇಳಬಹುದು. ಹಾಗಾಗಿ, ಕಡಿಮೆ ಬೆಲೆಗೆ ಖರೀದಿ ಮಾಡಬೇಕು ಎನ್ನುವವರಿಗೆ ಅದೇ ಬೆಲೆಗೆ ಸಿಕ್ಕರೂ ಸಿಗಬಹುದು. ಐಪ್ಯಾಡ್‌ಗಳು, ಮ್ಯಾಕ್‌ಬುಕ್‌ಗಳು ಮತ್ತು ಹೆಡ್‌ಫೋನ್‌ಗಳಂತಹ ಐಟಂಗಳ ಮೇಲೆ ಆಪಲ್ ರಿಯಾಯಿತಿಗಳನ್ನು ನೀಡುತ್ತದೆಯೇ ಎಂಬುದರ ಬಗ್ಗೆ ಖಚಿತವಾದ ಮಾಹಿತಿಗಳು ಇಲ್ಲ. ಯಾವೆಲ್ಲ ಉತ್ಪನ್ನಗಳ ಮೇಲೆ ರಿಯಾಯ್ತಿ ದೊರೆಯಲಿದೆ ಎಂದು ಬಗ್ಗೆ ಮುಂಗಡವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ, ಸೋಮವಾರ ಈ ಬಗ್ಗೆ ಎಲ್ಲ ಮಾಹಿತಿಯೂ ಹೊರ ಬೀಳಲಿದೆ ಎಂದು ಹೇಳಬಹುದು.

Latest Videos
Follow Us:
Download App:
  • android
  • ios