ಮೋದಿ ಸರ್ಕಾರದ ಜೊತೆ ಆ್ಯಪಲ್ ಮಾತುಕತೆ; ಭಾರತದಲ್ಲಿ ಆರಂಭವಾಗಲಿದೆ ಹೊಸ ಘಟಕ

ಕೊರೋನಾ ವೈರಸ್‌ನಿಂದ ವಿಶ್ವವೇ ನಲುಗಿ ಹೋಗಿದೆ. ಚೀನಾದ ವುಹಾನ್‌ನಲ್ಲಿ ಆರಂಭವಾದ ಈ ವೈರಸ್ ಎಲ್ಲಾ ದೇಶಗಳನ್ನು ಕಂಗೆಡಿಸಿದೆ. ಇದೀಗ ಚೀನಾದಿಂದ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಸ್ಥಳಾಂತರಕ್ಕೆ ಮುಂದಾಗಿದೆ. ಇದರಲ್ಲಿ ಪ್ರಮುಖಾಗಿ ಆ್ಯಪಲ್ ಐಫೋನ್ ಕಂಪನಿ ಕೂಡ ಒಂದು. ಇದೀಗ ಚೀನಾದಲ್ಲಿರುವ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಲು ಆ್ಯಪಲ್ ತುದಿಗಾಲಲ್ಲಿ ನಿಂತಿದೆ.
 

Apple company plan to shift nearly one fifth of its production capacity from China to India

ನವದೆಹಲಿ(ಮೇ.11): ಚೀನಾದ ವುಹಾನ್‌ನಿಂದ ಆರಂಭಗೊಂಡ ಕೊರೋನಾ ವೈರಸ್ ಇದೀಗ ಭಾರತ, ಅಮೆರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಪರಿಣಾಮ ಎದುರಿಸುತ್ತಿದೆ. ಅತ್ತ ಚೀನಾ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇದೀಗ ಅಮೆರಿಕಾ, ಜಪಾನ್ ಸೇರಿದಂತೆ ಹಲವು ಕಂಪನಿಗಳು ಚೀನಾದಿಂದ ಬೇರೆಡೆ ಸ್ಥಳಾಂತರಕ್ಕೆ ಮುಂದಾಗಿದೆ. ಇದರಲ್ಲಿ ಪ್ರಮುಖವಾಗಿ ಆ್ಯಂಪಲ್ ಐಫೋನ್ ಕಂಪನಿ ಚೀನಾದಲ್ಲಿರುವ ಉತ್ಪಾದನಾ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಲು ಮುಂದಾಗಿದೆ.

Appleನ ಬಜೆಟ್ ಫೋನ್‌ ಬಿಡುಗಡೆಗೆ ಡೇಟ್ ಫಿಕ್ಸ್? ಅಂದಾಜು ಬೆಲೆ ಮತ್ತು ಫೀಚರ್ಸ್

ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಆ್ಯಂಪಲ್ ಕಂಪನಿ, ಭಾರತಕ್ಕೆ ಆಗಮಿಸಲು ಉತ್ಸುಕತೆ ತೋರಿದೆ. ಎಲ್ಲವೂ ಸರಿಹೊಂದಿದರೆ, ಚೀನಾದಲ್ಲಿರುವ ಉತ್ಪಾದನಾ ಘಟಕಗಳ ಪೈಕಿ ಶೇಕಡಾ 20 ರಷ್ಟು ಭಾರತಕ್ಕೆ ಸ್ಥಳಾಂತರವಾಗಲಿದೆ. ಈ ಮೂಲಕ ಮುಂದಿನ 5 ವರ್ಷದಲ್ಲಿ 40 ಬಿಲಿಯನ್ ಅಮೆರಿಕಾ ಡಾಲರ್‌ನಷ್ಟು ಉತ್ಪನ್ನಗಳನ್ನು ಭಾರತದಿಂದ ರಫ್ತು ಮಾಡಲು ಆ್ಯಪಲ್ ನಿರ್ಧರಿಸಿದೆ.

ಚೀನಾದಲ್ಲಿರುವ ಜಪಾನ್ ಕಂಪನಿಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದರೆ, ಜಪಾನ್ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಇತ್ತ ಅಮೆರಿಕ ಮೂಲದ ಕಂಪನಿಗಳು ಕೂಡ ಚೀನಾದಿಂದ ಹೊರಹೋಗಲು ನಿರ್ಧರಿಸಿದೆ. ಚೀನಾದಿಂದ ಹೊರಬರಲು ನಿರ್ಧರಿಸಿರುವ ಕಂಪನಿಗಳನ್ನು ಸೆಳೆಯಲು ಭಾರತದ ಸರ್ಕಾರ ಮುಂದಾಗಿದೆ. 

ಸರಿಸುಮಾರ್ 1.5 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಮೊತ್ತದ  ಆ್ಯಪಲ್ ಫೋನ್‌ಗಳು ಭಾರತದಲ್ಲಿ ಮಾರಾಟವಾಗತ್ತಿದೆ. ಭಾರತದ ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 2ರಿಂದ 3 ರಷ್ಟು ಆ್ಯಪಲ್ ಫೋನ್ ಆಕ್ರಮಿಸಿಕೊಂಡಿದೆ. 2018-19ರ ಸಾಲಿನಲ್ಲಿ ಚೀನಾದಲ್ಲಿರುವ ಆ್ಯಪಲ್ ಕಂಪನಿ ಉತ್ಪಾದನಾ ಘಟಕ 220 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಮೊತ್ತದ ಫೋನ್ ಉತ್ಪಾದನೆ ಮಾಡಿತ್ತು. ಇದರಲ್ಲಿ 185 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಿದೆ. ಚೀನಾದಲ್ಲಿ 4.5 ಮಿಲಿಯನ್ ಉದ್ಯೋಗಿಗಳನ್ನ ಹೊಂದಿದೆ.

Latest Videos
Follow Us:
Download App:
  • android
  • ios