Asianet Suvarna News Asianet Suvarna News

ಜಿಯೋಗೆ ಸೆಡ್ಡು; ಗ್ರಾಹಕರಿಗೆ ಉಚಿತ ರಿಚಾರ್ಜ್ ಆಫರ್ ಘೋಷಿಸಿದ ಏರ್‌ಟೆಲ್!

  • ಏರ್‌ಟೆಲ್ ಗ್ರಾಹಕರಿಗೆ ಉಚಿತ ರಿಚಾರ್ಜ್ ಆಫರ್
  • 5.5 ಕೋಟಿ ಗ್ರಾಹಕರಿಗೆ ಈ ಸೌಲಭ್ಯ ಲಭ್ಯ
  • ಕೊರೋನಾ ಕಾರಣ ಉಚಿತ ಟಾಕ್‌ಟೈಮ್, ಡೇಟಾ ಗ್ರಾಹಕರಿಗೆ ಉಚಿತ
Airtel Announces Free recharge offer for low income customers ckm
Author
Bengaluru, First Published May 16, 2021, 8:45 PM IST

ನವದೆಹಲಿ(ಮೇ.16): ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ದುಡಿಮೆ ಇಲ್ಲದೆ, ವೇತನ ಇಲ್ಲದೆ ಸರ್ಕಾರದ ನೆರವು ಎದುರನೋಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಏರ್‌ಟೆಲ್ ಗ್ರಾಹಕರಿಗೆ ಉಚಿತ ರಿಚಾರ್ಜ್ ಆಫರ್ ಘೋಷಿಸಿದೆ.

ಕೊರೋನಾ ಸಂಕಷ್ಟದಲ್ಲಿ ಜಿಯೋ ಆಫರ್: ಪ್ರತಿ ತಿಂಗಳು 300 ನಿಮಿಷ ಔಟ್‌ಗೋಯಿಂಗ್ ಉಚಿತ!...

ಜಿಯೋ ತನ್ನ ಗ್ರಾಹಕರಿಗೆ ಉಚಿತ ವಾಯ್ಸ್ ಕಾಲ್ ಹಾಗೂ ಡೇಟಾ ಆಫರ್ ನೀಡಿತ್ತು. ಜಿಯೋ ಆಫರ್ ಬೆನ್ನಲ್ಲೇ ಇದೀಗ ಏರ್‌ಟೆಲ್ ಗ್ರಾಹಕರಿಗೆ ಫ್ರೀ ರಿಚಾರ್ಜ್ ಹಾಗೂ ಡಬಲ್ ಕೂಪನ್ ಆಫರ್ ನೀಡಿದೆ. ಈ ಡಬಲ್ ಕೂಪನ್ ಆಫರ್ ಮೂಲಕ 79 ರೂಪಾಯಿಗಳ ರಿಚಾರ್ಜ್ ಮಾಡಿದರೆ, ಏರ್‌ಟೆಲ್ ಉಚಿತವಾಗಿ 79 ರೂಪಾಯಿ ರಿಚಾರ್ಜ್ ಮಾಡಿಕೊಡಲಿದೆ.

ಉಚಿತ ವಾಯ್ಸ್ ಕಾಲ್ ಹಾಗೂ ಡೇಟಾ ಯೋಜನೆಗಾಗಿ ಏರ್‌ಟೆಲ್ 270 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಈ ಮೂಲಕ ಕಡಿಮೆ ಆದಾಯ ಹಾಗೂ ಉದ್ಯೋಗ ಕಡಿತಗೊಂಡ 5.5 ಕೋಟಿ ಗ್ರಾಹಕರಿಗೆ ಈ ಉಚಿತ ಆಫರ್ ನೀಡುತ್ತಿದೆ.  ಉಚಿತ ರಿಚಾರ್ಜ್ ಆಫರ್‌ನಲ್ಲಿ ಏರ್‌ಟೆಲ್ ಗ್ರಾಹಕರು 39 ರೂಪಾಯಿ ಟಾಕ್‌ ಟೈಮ್, 100 MB ಡೇಟಾ ಸಿಗಲಿದೆ. ಇನ್ನು 28 ದಿನಗಳ ವ್ಯಾಲಿಟಿಡಿ ಸಿಗಲಿದೆ.

Follow Us:
Download App:
  • android
  • ios