ಬೆಂಗಳೂರು(ಆ.30): ಭಾರತೀಯ ಮಾರುಕಟ್ಟೆ ಮೇಲೆ ತನ್ನ ಗಮನವನ್ನು ಮುಂದುವರಿಸಿರುವ ಮೊಟೊರೋಲಾ ತನ್ನ ಜನಪ್ರಿಯ ಜಿ ಫ್ರಾಂಚೈಸಿಯಲ್ಲಿ ಇದೀಗ  moto g9 ಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಭಾರತದಲ್ಲಿ ಮೊದಲ ಬಾರಿಗೆ ಈ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಮುಂದಿನ ಪೀಳಿಗೆಯ ನೆಚ್ಚಿನ ಸ್ಮಾರ್ಟ್ ಫೋನ್ ಆಗಿದೆ. ಭಾರತೀಯ ಗ್ರಾಹಕರ ಅಭಿರುಚಿ ಮತ್ತು ಅವರ ಬೇಡಿಕೆಗೆ ತಕ್ಕಂತೆ ಈ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮೇಡ್ ಫಾರ್ ಇಂಡಿಯಾವಲ್ಲದೇ, ಭಾರತದಲ್ಲೇ ತಯಾರಾಗಿರುವ ಉತ್ಪನ್ನವಾಗಿದೆ.

ಡಿಸೆಂಬರ್ ಅಂತ್ಯಕ್ಕೆ ಮೊಬೈಲ್ ಇಂಡಸ್ಟ್ರಿಯಿಂದ 50 ಸಾವಿರ ಉದ್ಯೋಗ ಸೃಷ್ಟಿ!.

ಈ moto g9 ಕ್ಯಾಮೆರಾ, ಬ್ಯಾಟರಿ ಮತ್ತು ಇತ್ಯಾದಿಯ ಕಾರ್ಯಕ್ಷಮತೆಯ ಮಟ್ಟ ಪ್ರಬಲವಾಗಿದೆ. ಒಂದೇ ಉತ್ಪನ್ನದಲ್ಲಿ ಎಲ್ಲವನ್ನೂ ಒಟ್ಟಾಗಿ ಪಡೆಯಬೇಕೆಂದು ಬಯಸುವ ಗ್ರಾಹಕರು/ಬಳಕೆದಾರರ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಈ ಮೊಟೊ ಜಿ ಸಾಧನ ಹೊಂದಿದೆ. ಈ ಹೊಚ್ಚ ಹೊಸ moto g9 ತನ್ನ ವಿಭಾಗದಲ್ಲಿ ಒಟ್ಟಾರೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದರ ಸೂಪರ್-ರೆಸ್ಪಾನ್ಸಿವ್, ಇತ್ತೀಚಿನ ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 662 ಪ್ರೊಸೆಸರ್ ಬಳಕೆದಾರರ ಅನುಭವದ ಮಟ್ಟವನ್ನು ಕಳೆಗುಂದಿಸುವುದಿಲ್ಲ. ಇದರಲ್ಲಿನ ಟ್ರಿಪಲ್ ಕ್ಯಾಮೆರಾ ಸಿಸ್ಟಂನಲ್ಲಿ 48 ಎಂಪಿ ಮೇನ್ ಸೆನ್ಸಾರ್ ಇರಲಿದೆ. ಈ ಸೆನ್ಸಾರ್ ನಲ್ಲಿ ಅತ್ಯುತ್ತಮ ಗುಣಮಟ್ಟದ f/1.7 ಅಪೆರ್ಚರ್ ಮತ್ತು ಶಕ್ತಿಶಾಲಿಯಾದ 5000ಎಂಎಎಚ್ ಬ್ಯಾಟರಿ ಮತ್ತು 20W ಟರ್ಬೋಪವರ್ ಚಾರ್ಜಿಂಗ್ ವ್ಯವಸ್ಥೆಯೊಂದಿಗೆ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರಲಿದೆ.

ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..!.

ನಂಬಲಸಾಧ್ಯವಾದ ಕಾರ್ಯಕ್ಷಮತೆ
ಸೂಪರ್ ರೆಸ್ಪಾನ್ಸಿವ್ ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 662 ಮೊಬೈಲ್ ಪ್ಲಾಟ್ ಫಾರ್ಮ್ ಅನ್ನು ಹೊಂದಿರುವ ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್ ಫೋನ್ ಗಳಲ್ಲಿ ಈ moto g9 ಒಂದಾಗಿದೆ. ಅತ್ಯದ್ಭುತವಾದ ಎಐ ಕಾರ್ಯಕ್ಷಮತೆ ಮತ್ತು ಡೈನಾಮಿಕ್ ಕ್ಯಾಮೆರಾ ಸಾಮರ್ಥ್ಯಗಳನ್ನು ಒಳಗೊಂಡಿದೆ. ಈ ಮೂಲಕ ಬಳಕೆದಾರರು ಫೋಟೋಗಳನ್ನು ಸೆರೆ ಹಿಡಿಯಬಹುದಾಗಿದೆ ಮತ್ತು ಬ್ರ್ಯಾಂಡ್ ನ್ಯೂ ಮಾರ್ಗಗಳಿಗೆ ಸಂಪರ್ಕ ಸಾಧಿಸಿಕೊಳ್ಳಬಹುದಾಗಿದೆ. ಇದಲ್ಲದೇ, ನೀವು ಮೃದುವಾದ ಮತ್ತು ವಿವಿಧ ರೀತಿಯ ಗ್ರಾಫಿಕ್ಸ್ ನೊಂದಿಗೆ ಅಗಾಧ ಪ್ರಮಾಣದ ಗೇಮ್ಸ್ ಮತ್ತು ವಿಡಿಯೋಗಳನ್ನು ಎಂಜಾಯ್ ಮಾಡಬಹುದಾಗಿದೆ. ಸ್ನ್ಯಾಪ್ ಡ್ರಾಗನ್ 662 ಹೆಚ್ಚಿಸಲ್ಪಟ್ಟಿರುವ ವೇಗಗಳು ಮತ್ತು ಆನ್ ಡಿವೈಸ್ ಕಾರ್ಯಕ್ಷಮತೆಯೊಂದಿಗೆ ನಿರ್ಮಾಣ ಮಾಡಲ್ಪಟ್ಟಿದೆ. ಕಡಿಮೆ ಲ್ಯಾಗ್ ನೊಂದಿಗೆ ನೀವು ತಡೆರಹಿತವಾಗಿ ಹಲವು ಟಾಸ್ಕ್ ಗಳನ್ನು ಮಾಡಿಕೊಳ್ಳಬಹುದಾಗಿದೆ. ಇದರ ಜತೆಗೆ ಪ್ರತಿಯೊಂದು ಸ್ಪರ್ಶ, ಟ್ಯಾಪ್ ಮತ್ತು ಸ್ವೈಪ್ ನಲ್ಲಿಯೂ ನಿಮ್ಮ ಫೋನ್ ನಿಂದ ನಯವಾದ ಅನುಭವವನ್ನು ಪಡೆಯಲಿದ್ದೀರಿ. ಇದರ ವಿಶೇಷವೆಂದರೆ RAM ನ 4ಜಿಬಿಯನ್ನು ಮಿಸ್ ಮಾಡಿಕೊಳ್ಳುವ ಪ್ರಶ್ನೆಯೇ ಇರುವುದಿಲ್ಲ.

ಬೆರಗುಗೊಳಿಸುವ ಕ್ಯಾಮೆರಾಗಳು
moto g9 ಯಲ್ಲಿನ 48 ಎಂಪಿ ಟ್ರಿಪಲ್ ಕ್ಯಾಮೆರಾ ಸಿಸ್ಟಂಗೆ ಧನ್ಯವಾದಗಳನ್ನು ಹೇಳಲೇಬೇಕು. ಏಕೆಂದರೆ, ಇದರಲ್ಲಿನ ಮುಖ್ಯ ಕ್ಯಾಮೆರಾದಲ್ಲಿ ಯಾವುದೇ ಬೆಳಕಿನಲ್ಲಿಯೂ ಅಥವಾ ಸೆಟ್ಟಿಂಗ್ ನಲ್ಲಿಯೂ ನೀವು ಅತ್ಯದ್ಭುತವಾದ ಫೋಟೋಗಳನ್ನು ಸೆರೆ ಹಿಡಿಯಬಹುದಾಗಿದೆ. ಇದರಲ್ಲಿನ ಆಳವಾದ ಸೆನ್ಸಾರ್ ಮತ್ತು ಮ್ಯಾಕ್ರೋ ವಿಶನ್ ಕ್ಯಾಮೆರಾ ಈ ಅತ್ಯದ್ಭುತ ಫೋಟೋಗಳನ್ನು ತೆಗೆಯಲು ನೆರವಾಗುತ್ತವೆ. 48 ಎಂಪಿ ಮುಖ್ಯ ಕ್ಯಾಮೆರಾವು ಸಂಪೂರ್ಣವಾಗಿ ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದರಲ್ಲಿ 4X ಲೈಟ್ ಸೆನ್ಸಿಟಿವಿಟಿ, ನೈಟ್ ವಿಶನ್ ಮೋಡ್ ಮತ್ತು ಕ್ಲಾಸ್ ಲೀಡಿಂಗ್, ಲಾರ್ಜ್ ಎಫ್/1.7 ಅಪೆರ್ಚರ್ ವೈಶಿಷ್ಟ್ಯತೆಗಳಿವೆ. ಈ ವೈಶಿಷ್ಟ್ಯತೆಗಳಿಂದ ಮಂದ ಬೆಳಕಿನಲ್ಲಿಯೂ ನೀವು ಅತ್ಯಂತ ಬ್ರೈಟ್ ಆಗಿರುವ ಫೋಟೋಗಳನ್ನು ಕ್ಲಿಕ್ಕಿಸಬಹುದಾಗಿದೆ. ಆಳವಾದ ಸೆನ್ಸಾರ್ ನೊಂದಿಗೆ ಮುಖ್ಯ ಕ್ಯಾಮೆರಾವು ಹಿನ್ನೆಲೆಯನ್ನು ಸ್ವಯಂಚಾಲಿತವಾಗಿ ಬ್ಲರ್ ಅಂದರೆ ಮಸುಕು ಮಾಡುವ ಗುಣವನ್ನು ಹೊಂದಿದೆ. ಇದಲ್ಲದೇ, ಪ್ರತಿದಿನದ ಫೋಟೋಗಳು ಅತ್ಯಂತ ಸುಂದರವಾಗಿ ನಿಖರವಾಗಿ ಬರುವಂತೆ ಮಾಡಲಿದೆ. ಮ್ಯಾಕ್ರೋ ವಿಶನ್ ಕ್ಯಾಮೆರಾದೊಂದಿಗೆ 4X ಸೌಲಭ್ಯದಿಂದ ನಿಮ್ಮ ವಸ್ತುವಿನ ತೀರಾ ಸನಿಹಕ್ಕೆ ಕೊಂಡೊಯ್ಯುವ ಸ್ಟಾಂಡರ್ಡ್ ಲೆನ್ಸ್ ಗಳಿವೆ. ಹೀಗಾಗಿ ಅತ್ಯಂತ ಚಿಕ್ಕದಾದ ವಸ್ತುವಿನ ಮೇಲೆಯೂ ನೀವು ಅತ್ಯುತ್ತಮವಾಗಿ ಫೋಕಸ್ ಮಾಡಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್ ನೊಂದಿಗೆ ಬೃಹತ್ತಾದ ಬ್ಯಾಟರಿ
ನೀವು ಎಡೆಬಿಡದೆ ಮನೋರಂಜನೆಗಾಗಿ ಅಥವಾ ಕೆಲಸಕ್ಕಾಗಿ ನಿಮ್ಮ ಫೋನ್ ಅನ್ನು ಬಳಸಿದರೂ ಚಿಂತೆ ಇಲ್ಲ. ನೀವು ಜಗತ್ತಿನೊಂದಿಗೆ ಸಂಪರ್ಕವನ್ನು ಹೊಂದಿದ್ದರೂ ಚಿಂತೆ ಇಲ್ಲ. ಬ್ಯಾಟರಿ ಲೈಫ್ ವಿಚಾರದಲ್ಲಿ moto g9 ಬಗ್ಗೆ ಚಿಂತೆಯನ್ನು ಮಾಡಲೇಬೇಕಿಲ್ಲ. ಏಕೆಂದರೆ, ಹೆಚ್ಚು ಬಾಳಿಕೆ ಬರುವಂತಹ 5000 ಎಂಎಎಚ್ ಬ್ಯಾಟರಿ ಇರುವುದರಿಂದ ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ನಿಮಗೆ ಫೋನ್ ಅನ್ನು ಎರಡು ದಿನಗಳಿಗೂ ಹೆಚ್ಚು ಕಾಲ ಬಳಸಬಹುದಾಗಿದೆ. ಸತತ 83 ಗಂಟೆಗಳ ಕಾಲ ನೀವು ಸ್ಟ್ರೀಂ ಮ್ಯೂಸಿಕ್ ಆಲಿಸಬಹುದು, 16 ಗಂಟೆಗಳ ಕಾಲ ಸ್ಟ್ರೀಂ ವಿಡಿಯೋಗಳನ್ನು ವೀಕ್ಷಿಸಬಹುದು ಅಥವಾ ನಿಮ್ಮ ನೆಚ್ಚಿನ ವೆಬ್ ಸೈಟ್ ಗಳನ್ನು 13 ಗಂಟೆಗಳ ಕಾಲ ಬ್ರೌಸ್ ಮಾಡಬಹುದಾಗಿದೆ. ತ್ವರಿತವಾಗಿ ಬ್ಯಾಟರಿ ಚಾರ್ಜ್ ಆಗಲು 20W TurboPower™ ಚಾರ್ಜರ್ ಇರುತ್ತದೆ. ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ.

ಅಲ್ಟ್ರಾ-ಇಮೆರ್ಸಿವ್, ಅಲ್ಟ್ರಾ-ವೈಡ್ ಡಿಸ್ ಪ್ಲೇ
ಇದರಲ್ಲಿನ ಅಲ್ಟ್ರಾ ವೈಡ್ ಸ್ಕ್ರೀನ್ ನಿಂದಾಗಿ ನಿಮಗೆ ಫೋಟೋಗಳು, ವಿಡಿಯೋ, ಮೂವಿಗಳು ಮತ್ತು ಗೇಮ್ ಗಳನ್ನು ಅತ್ಯುತ್ತಮವಾಗಿ ವೀಕ್ಷಿಸಬಹುದಾಗಿದೆ. ಇದರಲ್ಲಿನ 6.5 ಇಂಚಿನ ಮ್ಯಾಕ್ಸ್ ವಿಶನ್ ಎಚ್ ಡಿ+ ಡಿಸ್ ಪ್ಲೇ ನಿಮಗೆ 20:9 ಅನುಪಾತದಲ್ಲಿ ಗರಿಷ್ಠ ಮಟ್ಟದ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತದೆ.

ವ್ಯಾಪಕವಾದ ಸ್ಟೋರೇಜ್
moto g9 64 ಜಿಬಿ ಬಿಲ್ಟ್-ಇನ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಹೀಗಾಗಿ ನೀವು ಹೆಚ್ಚು ಹೆಚ್ಚು ಫೋಟೋಗಳು, ಹಾಡುಗಳು, ಮೂವಿಗಳು ಮತ್ತು ಗೇಮ್ಸ್ ಅನ್ನು ಡೌನ್ಲೋಡ್ ಮಾಡಿಕೊಂಡು ಸ್ಟೋರ್ ಮಾಡಬಹುದಾಗಿದೆ. ಇದರ ಮತ್ತೊಂದು ವಿಶೇಷವೆಂದರೆ ಮೈಕ್ರೋ ಎಸ್ ಡಿ ಸ್ಲಾಟ್ ನಲ್ಲಿ 512 ಜಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಆಪರೇಟಿಂಗ್ ಸಿಸ್ಟಂ ಮತ್ತು ಸಾಫ್ಟ್ ವೇರ್
ಗ್ರಾಹಕರಿಗೆ ಪರಿಶುದ್ಧವಾದ ಆ್ಯಂಡ್ರಾಯ್ಡ್ ಒಎಸ್ ನೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡುವ ನಮ್ಮ ಬದ್ಧತೆಯನ್ನು moto g9 ನಲ್ಲಿ ಮುಂದುವರಿಸಿದ್ದೇವೆ. ಇದರಲ್ಲಿ ಯಾವುದೇ ಕ್ಲಂಕಿ ಸಾಫ್ಟ್ ವೇರ್ ಸ್ಕಿನ್ಸ್ ಇರುವುದಿಲ್ಲ, ಯಾವುದೇ ನಕಲಿ ಆ್ಯಪ್ ಗೆ ಅವಕಾಶವೇ ಇರುವುದಿಲ್ಲ, ಗ್ರಾಹಕರು ಇಷ್ಟಪಡುವ ಆ್ಯಂಡ್ರಾಯ್ಡ್ 10 ಅನ್ನು ಒಳಗೊಂಡಿದೆ. 1 ಕನಿಷ್ಠ ಒಎಸ್ ಅಪ್ ಗ್ರೇಡ್ ಮತ್ತು 2 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಗಳ ಭರವಸೆಯನ್ನು ಈ ಸ್ಮಾರ್ಟ್ ಫೋನ್ ಒಳಗೊಂಡಿದೆ.

ಪ್ರತ್ಯೇಕವಾದ ಗೂಗಲ್ ಅಸಿಸ್ಟೆಂಟ್
ನಮ್ಮ ಗ್ರಾಹಕರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಗೂಗಲ್ ಅಸಿಸ್ಟೆಂಟ್ ಅನ್ನು ಅಕ್ಸೆಸ್ ಮಾಡುವುದು ಎಷ್ಟು ಅಗತ್ಯ ಎಂಬುದನ್ನು ನಾವು ಅರಿತಿದ್ದೇವೆ. ಈ ಕಾರಣದಿಂದಲೇ ನಾವು moto g9 ಯಲ್ಲಿ ಪ್ರತ್ಯೇಕವಾದ ಗೂಗಲ್ ಅಸಿಸ್ಟೆಂಟ್ ಬಟನ್ ಅನ್ನು ಸೇರಿಸಿದ್ದೇವೆ. ಇದರ ಮೇಲೆ ಒಂದು ಕ್ಲಿಕ್ ಮಾಡಿದರೆ ಸಾಕು ಗೂಗಲ್ ಅಸಿಸ್ಟೆಂಟ್ ಓಪನ್ ಆಗಿ ನಿಮಗಿಷ್ಟವಾಗಿರುವುದನ್ನು ಕೇಳಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ, ಬಟನ್ ಅನ್ನು ಒತ್ತಿದಾಗ ವಾಯ್ಸ್ ಕಂಟ್ರೋಲ್ ಪಡೆಯಬಹುದು ಮತ್ತು ಗೂಗಲ್ ಅಸಿಸ್ಟೆಂಟ್ ಗೆ ಕೇಳಿ ಉತ್ತರ ಪಡೆಯಬಹುದು. ಇಲ್ಲಿ ಟೈಪ್, ಟ್ಯಾಪ್ ಅಥವಾ ಸ್ವೈಪ್ ಮಾಡುವ ಅಗತ್ಯವಿರುವುದಿಲ್ಲ.

ಎನ್ಎಫ್ ಸಿ ಸಪೋರ್ಟ್:
ಕ್ಲಾಸ್ ಲೀಡಿಂಗ್ ಎನ್ಎಫ್ ಸಿ ಸಪೋರ್ಟ್ ನೊಂದಿಗೆ ಸುಲಭವಾಗಿ ಕಾಂಟ್ಯಾಕ್ಟ್-ಲೆಸ್ ಪೇಮೆಂಟ್ ಗಳನ್ನು ಮಾಡಬಹುದು.

ಡ್ಯುಯೆಲ್-ಬ್ಯಾಂಡ್ ವೈಫೈ:
ಇದರಲ್ಲಿನ ಡ್ಯುಯೆಲ್ ಬ್ಯಾಂಡ್ ವೈಫೈ ಸಪೋರ್ಟ್ ನಿಂದಾಗಿ ನೀವು ಆರಾಮವಾಗಿ ಯಾವುದೇ ಅಡಚಣೆ ಇಲ್ಲದೇ ವರ್ಕ್ ಫ್ರಂ ಹೋಂ ಜವಾಬ್ದಾರಿಯನ್ನು ನಿರ್ವಹಣೆ ಮಾಡಬಹುದಾಗಿದೆ.

ನಿಮ್ಮ ಮುಖ & ಫಿಂಗರ್ ಪ್ರಿಂಟ್ ಗಳೇ ಪಾಸ್ವರ್ಡ್
ಫೇಸ್ ರೆಕಗ್ನಿಶನ್ & ಫಿಂಗರ್ ಪ್ರಿಂಟ್ ರೀಡರ್ ವ್ಯವಸ್ಥೆ ಇದರಲ್ಲಿದ್ದು, ಇವುಗಳೇ ಪಾಸ್ವರ್ಡ್ ಆಗಿರುತ್ತವೆ. ಈ ಮೂಲಕ ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಬಹುದು.

ಲಭ್ಯತೆ ಮತ್ತು ಬೆಲೆ
ಸ್ಟನ್ನಿಂಗ್ moto g9 ಎರಡು ಸುಂದರವಾದ ಬಣ್ಣಗಲಾದ ಡೀಪ್ ಸಫೈರ್ ಬ್ಲ್ಯೂ ಮತ್ತು ನ್ಯಾಚುರಲ್ ಫಾರೆಸ್ಟ್ ಗ್ರೀನ್ ನಲ್ಲಿ ಲಭ್ಯವಿದೆ. ಫ್ಲಿಪ್ ಕಾರ್ಟ್ ನಲ್ಲಿ 31 ಆಗಸ್ಟ್ 2020 ರ ಮಧ್ಯಾಹ್ನ 12 ಗಂಟೆಯಿಂದ ಲಭ್ಯವಿದೆ. ಈ moto g9 ಸ್ಮಾರ್ಟ್ ಫೋನ್ ಆಕರ್ಷಕವಾದ ರೂಪಾಯಿ 11,499 ಗೆ ಲಭ್ಯವಿದೆ.