ನವದೆಹಲಿ (ಫೆ.06): 2014ರಿಂದ ಈವರೆಗೆ ಒಟ್ಟಾರೆ 296 ಮೊಬೈಲ್‌ ಆ್ಯಪ್‌ಗಳನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ರಾಜ್ಯಸಭೆಯ ಶುಕ್ರವಾರದ ಕಲಾಪದಲ್ಲಿ ಈ ಸಂಬಂಧ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಸಚಿವ ಸಂಜಯ್‌ ಧೋತ್ರೆ ಅವರು, ‘ದೇಶದ ಸಾರ್ವಭೌಮತ್ವ, ಭದ್ರತೆ ಹಾಗೂ ಜನಾದೇಶದ ಕಾರಣಕ್ಕಾಗಿ ಈ ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ’ ಎಂದು ಹೇಳಿದ್ದಾರೆ.

100 ಚೀನಾ ಆ್ಯಪ್‌ ನಿರ್ಬಂಧಿಸಲು ಕೇಂದ್ರಕ್ಕೆ ರಾಜ್ಯದಿಂದ ಪ್ರಸ್ತಾವನೆ

ಆ್ಯಂಡ್ರಾಯಿಡ್‌ ಮತ್ತು ಐಫೋನ್‌ನ ಐಒಎಸ್‌ ವೇದಿಕೆಯಲ್ಲಿ ಚೀನಾದ ಮೊಬೈಲ್‌ ಆ್ಯಪ್‌ಗಳು ಸೇರಿದಂತೆ ಹಲವು ಮೊಬೈಲ್‌ ಆ್ಯಪ್‌ಗಳ ದುರ್ಬಳಕೆ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದವು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಚೀನಾದ ಹಲವು ರೀತಿಯ ಆ್ಯಪ್‌ಗಳು ಈ ವೇಳೆ ನಿಷೇಧಿಸಲ್ಪಟ್ಟಿವೆ. ಟಿಕ್‌ಟಾಕ್‌ನಂತಹ ಹಲವು ಜನಪ್ರಿಯವಾಗಿದ್ದವೂ ನಿಷೇಧ ಮಾಡಲಾಯಿತು.