Asianet Suvarna News

ಮನೆಗೆ ಕರೆದೊಯ್ಯದ ಪತಿ ವಿರುದ್ಧ ಪತ್ನಿ ಧರಣಿ

ನ್ಯಾಯಾ​ಲ​ಯದ ತೀರ್ಪು ನೀಡಿದರೂ ಮನೆಗೆ ಕರೆದೊಯ್ಯದ ಪತಿ ಮನೆ ಎದುರು ಪತ್ನಿ ಉಪವಾಸ ಸತ್ಯಾ​ಗ್ರಹ ಆರಂಭಿ​ಸಿ​ರುವ ಘಟನೆ ನಗ​ರದಲ್ಲಿ ನಡೆದಿದೆ. ನಗರದ ಅನ್ನ​ಪೂರ್ಣೇಶ್ವರಿ ಬಡಾ​ವ​ಣೆ​ಯ 5ನೇ ಕ್ರಾಸ್‌ನಲ್ಲಿ ವಾಸವಾಗಿರುವ ತಾಲೂ​ಕಿನ ಹೊನ್ನಾ​ಯ​ನ​ಕ​ಹಳ್ಳಿ ಗ್ರಾಮದ ಸರ್ಕಾರಿ ಶಾಲೆ​ಯ​ಲ್ಲಿ ಶಿಕ್ಷ​ಕ​ ಅಶೋಕ್‌ ಪತ್ನಿ ಶಾಂತ​ಕು​ಮಾರಿ ಧರಣಿ ಸತ್ಯಾ​ಗ್ರಹ ನಡೆ​ಸು​ತ್ತಿ​ದ್ದಾರೆ.

woman protests against husband for not taking her to home
Author
Bangalore, First Published Nov 15, 2019, 3:33 PM IST
  • Facebook
  • Twitter
  • Whatsapp

ಮಂಡ್ಯ(ನ.15): ನ್ಯಾಯಾ​ಲ​ಯದ ತೀರ್ಪು ನೀಡಿದರೂ ಮನೆಗೆ ಕರೆದೊಯ್ಯದ ಪತಿ ಮನೆ ಎದುರು ಪತ್ನಿ ಉಪವಾಸ ಸತ್ಯಾ​ಗ್ರಹ ಆರಂಭಿ​ಸಿ​ರುವ ಘಟನೆ ನಗ​ರದಲ್ಲಿ ನಡೆದಿದೆ.

ನಗರದ ಅನ್ನ​ಪೂರ್ಣೇಶ್ವರಿ ಬಡಾ​ವ​ಣೆ​ಯ 5ನೇ ಕ್ರಾಸ್‌ನಲ್ಲಿ ವಾಸವಾಗಿರುವ ತಾಲೂ​ಕಿನ ಹೊನ್ನಾ​ಯ​ನ​ಕ​ಹಳ್ಳಿ ಗ್ರಾಮದ ಸರ್ಕಾರಿ ಶಾಲೆ​ಯ​ಲ್ಲಿ ಶಿಕ್ಷ​ಕ​ ಅಶೋಕ್‌ ಪತ್ನಿ ಶಾಂತ​ಕು​ಮಾರಿ ಧರಣಿ ಸತ್ಯಾ​ಗ್ರಹ ನಡೆ​ಸು​ತ್ತಿ​ದ್ದಾರೆ.

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!

ನಾಗ​ಮಂಗಲ ತಾಲೂ​ಕಿನ ನರ​ಗ​ನ​ಹಳ್ಳಿ ಗಂಗೇ​ಗೌ​ಡರ ಪುತ್ರ ಅಶೋಕ್‌ ಹಾಗೂ ಮಂಡ್ಯ ತಾಲೂಕು ಹೊನ್ನಾಗಳ್ಳಿ ದೇವೇ​ಗೌ​ಡರ ಪುತ್ರಿ ಶಾಂತ​ಕು​ಮಾರಿ ವಿವಾಹ ಕಳೆದ 9 ವರ್ಷಗಳ ಹಿಂದೆ ನಡೆ​ದಿತ್ತು. ಈ ದಂಪ​ತಿಗೆ ಮಕ್ಕ​ಳಿರಲಿಲ್ಲ. 2014ರಲ್ಲಿ ಪತಿ ಅಶೋಕ್‌ ಬೇರೆ ಮನೆ ಮಾಡು​ವು​ದಾಗಿ ತಿಳಿಸಿ ಪತ್ನಿ​ಯನ್ನು ತವ​ರಿಗೆ ಕಳು​ಹಿ​ಸಿದ್ದನು. ನಂತ​ರದ ದಿನ​ಗ​ಳಲ್ಲಿ ಆತ ಪತ್ನಿಗೆ ವಿಚ್ಛೇ​ದನ ನೋಟಿಸ್‌ ಕಳು​ಹಿ​ಸಿ​ದ್ದಾನೆ.

ಕೆ. ಆರ್‌. ಪೇಟೆ: ಕಾಂಗ್ರೆಸ್‌ನಿಂದ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಕಣಕ್ಕೆ..!

ಪ್ರಕ​ರ​ಣದ ಕುರಿತು ವಿಚಾ​ರಣೆ ನಡೆ​ಸಿದ ನ್ಯಾಯಾ​ಲಯ 2019ರ ಫೆ. 8ರಂದು ವಿಚ್ಚೇ​ದ​ನಕ್ಕೆ ಸಮ್ಮ​ತಿ​ಸದೆ ಪತ್ನಿ​ಯನ್ನು ಮನೆಗೆ ಕರೆ​ಯೊ​ಯ್ಯು​ವಂತೆ ತೀರ್ಪು ನೀಡಿತ್ತು. ನ್ಯಾಯಾಲಯದ ತೀರ್ಪಿನ ನಂತರ ಪತಿ ಅಶೋಕ್‌ ಮೇ ತಿಂಗ​ಳಲ್ಲಿ ಮನೆಗೆ ಕರೆ​ದು​ಕೊಂಡು ಹೋಗು​ವು​ದಾಗಿ ಒಪ್ಪಿ​ಕೊಂಡಿದ್ದನು. ಆದರೆ, ಈವ​ರೆ​ಗೂ ಪತ್ನಿ ಶಾಂತ​ಕು​ಮಾ​ರಿ​ಯನ್ನು ಮನೆಗೆ ಕರೆ​ದೊ​ಯ್ಯದೇ ಸತಾಯಿಸುತ್ತಿದ್ದನು.

ಇದ​ರಿಂದ ಬೇಸತ್ತ ಪತ್ನಿ ಶಾಂತ​ಕು​ಮಾರಿ ನಗರದ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಪತಿ ಮನೆ ಎದುರು ಉಪ​ವಾಸ ಸತ್ಯಾ​ಗ್ರಹ ಆರಂಭಿ​ಸಿ​ದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿ ಶಾಂತ​ಕು​ಮಾ​ರಿಗೆ ಭದ್ರತೆ ಒದ​ಗಿ​ಸಿ​ದ್ದಾರೆ. ಶಾಂತಕುಮಾರಿ ಧರಣಿ ಆರಂಭಿಸುತ್ತಿದ್ದಂತೆ ಪತಿ ಅಶೋಕ್‌ ತಂದೆ ಮನೆ​ಯೊ​ಳ​ಗಿಂದ ಹೊರಗೆ ಬಂದು ಬಾಗಿ​ಲಿಗೆ ಬೀಗ ಹಾಕಿ​ ಭದ್ರ​ತೆ​ಯ​ಲ್ಲಿದ್ದ ಮಹಿಳಾ ಪೊಲೀಸ್‌ ಪೇದೆ​ಯನ್ನೂ ತಳ್ಳಿ ಪರಾ​ರಿ​ಯಾ​ಗಿ​ದ್ದಾರೆ ಎಂದು ಹೇಳಲಾಗಿದೆ. ತಮಗೆ ನ್ಯಾಯ ದೊರೆ​ಯು​ವ​ವ​ರೆ​ಗೂ ಇಲ್ಲಿಂದ ಕದ​ಲು​ವು​ದಿಲ್ಲ ಎಂದು ಅಶೋಕ್‌ ಪತ್ನಿ ಶಾಂತ​ಕು​ಮಾರಿ ಉಪ​ವಾಸ ಸತ್ಯಾ​ಗ್ರಹ ಆರಂಭಿ​ಸಿ​ದ್ದಾರೆ.

ಕೆ. ಆರ್. ಪೇಟೆ JDS ಅಭ್ಯರ್ಥಿ ಫಿಕ್ಸ್, ಅಧಿಕೃತ ಘೋಷಣೆಯೊಂದೇ ಬಾಕಿ

Follow Us:
Download App:
  • android
  • ios