ಮಂಡ್ಯ(ಅ.12): ಇತ್ತೀಚೆಗಷ್ಟೇ ಬಿಜೆಪಿ ಕಚೇರಿಗೆ ಹೋಗಿ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕೆ ಕೃತಜ್ಞತೆ ಸಿಲ್ಲಿಸಿರುವ ಸಂಸದೆ ಸುಮಲತಾ ಅಂಬರೀಶ್‌ ಶುಕ್ರವಾರ ನಾಗಮಂಗಲದಲ್ಲಿ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಧನ್ಯವಾದ ಅರ್ಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಪರವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಶ್ರಮಿಸಿದ್ದರು. ಆದರೆ, ಇತ್ತೀಚೆಗೆ ಸುಮಲತಾ ಅವರು ಮಂಡ್ಯದ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರಿಂದ ಕೈ ಮುಖಂಡರಿಂದ ಸಾಕಷ್ಟುಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಚೇರಿಗೆ ಸುಮಲತಾ ಭೇಟಿ ನೀಡಿರುವುದು ಮಹತ್ವ ಪಡೆದಿದೆ.

ಕಾಂಗ್ರೆಸ್ ಮುಖಂಡರ ಓಲೈಕೆಗೆ ಮುಂದಾದ ಸಂಸದೆ ಸುಮಲತಾ

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಮಲತಾ, ಅಂದು ಬಿಜೆಪಿ ಕಚೇರಿಯಿಂದ ಕರೆದಿದ್ದರು. ಹೋಗಿ ಧನ್ಯವಾದ ಹೇಳಿ ಬಂದೆ. ಇವತ್ತು ಕಾಂಗ್ರೆಸ್‌ನವರು ಕರೆದಿದ್ರು. ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಈಗ ನಾನು ಕಾಂಗ್ರೆಸ್‌ನವರಿಗೆ ಧನ್ಯವಾದ ಹೇಳಿದ್ದೇನೆ. ಜೆಡಿಎಸ್‌ ಮತದಾರರು ನನಗೆ ಮತ ಹಾಕಿದ್ದರೆ. ಜೆಡಿಎಸ್‌ ಕಚೇರಿಗೆ ಕರೆದರೆ ಅಲ್ಲಿಗೂ ಹೋಗಿ ಧನ್ಯವಾದ ಹೇಳುತ್ತೇನೆ ಎಂದರು.

'ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ ಈಡೇರಿಸಿದ ಸಿಎಂ BSY