ಮಂಡ್ಯ [ಅ.11]: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆಯನ್ನು ಬಿ ಎಸ್ ಯಡಿಯೂರಪ್ಪ ಈಡೇರಿಸುತ್ತಿದ್ದಾರೆ ಎಂದು ಅನರ್ಹ ಶಾಸಕ ನಾರಾಯಣ ಗೌಡ ಹೇಳಿದ್ದಾರೆ. 

ಮಂಡ್ಯದಲ್ಲಿಂದು ಮಾತನಾಡಿದ ಕೆ ಆರ್ ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣ ಗೌಡ ಯಡಿಯೂರಪ್ಪ ಸರ್ಕಾರದಿಂದ ಕೋಟಿ ಕೋಟಿ ಅನುದಾದ ನೀಡಲಾಗಿದೆ. ಕುಮಾರಸ್ವಾಮಿ ಸಂತೆ ಬಾಚನಹಳ್ಳಿ  ಏತ ನೀರಾವರಿ ಯೋಜನೆಗೆ ಹಣ ನೀಡುವ ಭರವಸೆ ನೀಡಿದ್ದರು. ಆದರೆ ಅವರು ನೀಡಿರಲಿಲ್ಲ. ಯಡಿಯೂರಪ್ಪ ಸರ್ಕಾರ 212 ಕೋಟಿ ರು. ಹಣ ಬಿಡುಗಡೆ ಮಾಡಿದ್ದಾರೆ ಎಂದರು. 

ರಸ್ತೆ, ಒಳಚರಂಡಿ ಅಭಿವೃದ್ಧಿಗೆ 33 ಕೋಟಿ, ಬೂಕನಕೆರೆ ಹೋಬಳಿಗೆ 23 ಕೋಟಿ ಹಣ ಮಂಜೂರಾಗಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಕೆರೆ, ಕಟ್ಟೆ ತುಂಬಿಸುವ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಮೈತ್ರಿ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಪುಟ್ಟರಾಜು ಸ್ವಂತ ತಾಲ್ಲೂಕಿಗೆ 1800 ಕೋಟಿ ಹಣ ಮಂಜೂರು ಮಾಡಿಕೊಂಡರು.  ಕೆ.ಆರ್.ಪೇಟೆಗೆ 50 ಕೋಟಿ ನೀಡುವಂತೆ ಮನವಿ ಮಾಡಿದರೂ ನೀಡಲಿಲ್ಲ. ಅನುದಾನ ನೀಡದಿದ್ದಕ್ಕೇ ನಾವು ರಾಜೀನಾಮೆ ನೀಡಬೇಕಾಯಿತು ಎಂದರು.

ಯಡಿಯೂರಪ್ಪ ಅವ್ರು ಕೆ.ಆರ್.ಪೇಟೆ ಕ್ಷೇತ್ರಕ್ಕೆ ಸಹಕರಿಸುತ್ತಿದ್ದಾರೆ ಎಂದು ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅನರ್ಹ ಶಾಸಕ ನಾರಾಯಣ ಗೌಡ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ.