ಮಂಡ್ಯ(ಅ.08): ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿದೆ. ರಸ್ತೆ, ಜಮೀನು ಸಢರಿ, ಕೃಷಿಭೂಮಿಗೂ ನೀರು ಆವರಿಸಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬಿಡದೇ ಸುರಿದ ಮಳೆ ಅವಾಂತರ ಸೃಷ್ಟಿಸಿದೆ. ಮಂಡ್ಯದ ವಿವಿಧೆಡೆ ರಸ್ತೆ, ಜಮೀನುಗಳು ಜಲಾವೃತವಾಗಿದ್ದು, ನೂರಾರು ಎಕರೆ ಬೆಳೆ ಹಾನಿಯಾಗಿದೆ.

'ಸಿದ್ಧರಾಮಯ್ಯ ವಿಪಕ್ಷ ನಾಯಕನಾದ್ರೆ ರಾಜ್ಯದ ಸಮಸ್ಯೆ ಪರಿಹಾರ'.

ಕಳೆದ 4-5 ದಿನಗಳಿಂದ ಪ್ರತಿದಿನ ರಾತ್ರಿ ವೇಳೆ ಮಳೆ ಸುರಿಯುತ್ತಿದ್ದು, ಕಬ್ಬಿನ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ನಿರಂತರ ಮಳೆಗೆ ನೂರಾರು ಎಕರೆ ಕಬ್ಬು,ಬಾಳೆ,ಭತ್ತದ ಬೆಳೆಗಳು ಜಲಾವೃತವಾಗಿದೆ.

'ಪ್ರಚಾ​ರ​ ಸಿಗುತ್ತೆ ಎಂದು ಚೆಲುವರಾಯಸ್ವಾಮಿ ಬಾಯಿಗೆ ಬಂದಂತೆ ಮಾತಾಡ್ತಾರೆ'..!