'ಪ್ರಚಾ​ರ​ ಸಿಗುತ್ತೆ ಎಂದು ಚೆಲುವರಾಯಸ್ವಾಮಿ ಬಾಯಿಗೆ ಬಂದಂತೆ ಮಾತಾಡ್ತಾರೆ'..!

ಪ್ರಚಾರ ಸಿಗುತ್ತೆ ಅಂತ ಚೆಲುವರಾಯ ಸ್ವಾಮಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಕಿಡಿಕಾರಿದ್ದಾರೆ. ಚೆಲುವರಾಯಸ್ವಾಮಿ ಅವರಿಗೆ ಮಾಜಿ ಸಿಎಂ ಎಚ್‌ .ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

Chaluvarayaswamy gives statement for popularity says dc thammanna

ಮಂಡ್ಯ(ಅ.07): ಬೆಳಗ್ಗೆ ಸಿದ್ದರಾಮಯ್ಯರ ಮನೆ, ರಾತ್ರಿ ಯಡಿಯೂರಪ್ಪನವರ ಮನೆಯಲ್ಲಿರುವ ಚೆಲುವರಾಯಸ್ವಾಮಿ ಅವರಿಗೆ ಮಾಜಿ ಸಿಎಂ ಎಚ್‌ .ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮದ್ದೂರಿನಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಕಿಡಿಕಾರಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎರಡೂ ಸಕ್ಕರೆ ಕಾರ್ಖಾನೆ​ಗಳು ಕುಮಾ​ರ​ಸ್ವಾಮಿ ಅವ​ರಿಂದಲೇ ಮುಚ್ಚಿವೆ ಎಂದು ಆರೋ​ಪಿ​ಸಿ​ರುವ ಚೆಲು​ವ​ರಾ​ಯ​ಸ್ವಾಮಿ ಅವರು ಜಿಲ್ಲಾ ಮಂತ್ರಿ​ಯಾ​ಗಿ​ದ್ದಾಗ ಕಾರ್ಖಾನೆಗಳ ಪುನ​ಶ್ಚೇ​ತ​ನಕ್ಕೆ ಏಕೆ ಶ್ರಮಿ​ಸ​ಲಿಲ್ಲ ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿಗಳಿಂದ ಹಣ ಬಿಡುಗಡೆ ಮಾಡಿಸಲಿ:

ಚೆಲು​ವ​ರಾ​ಯ​ಸ್ವಾಮಿ ಅವರು ಹೊರ​ಗಿ​ದ್ದರೂ ನಾವು ಅವ​ರನ್ನು ಗೌರ​ವ​ದಿಂದ ನಡೆ​ಸಿ​ಕೊ​ಳ್ಳು​ತ್ತಿ​ದ್ದೇವೆ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದರೆ ಪ್ರಚಾ​ರ​ ಸಿಗುತ್ತದೆ ಎಂದು ಬಾಯಿಗೆ ಬಂದಂತೆ ಮಾಧ್ಯ​ಮ​ಗಳ ಮುಂದೆ ಮಾತ​ನಾ​ಡು​ತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಹೊಂದಿರುವ ನೀವು ಸಿಎಂ ಯಡಿ​ಯೂ​ರ​ಪ್ಪ​ನ​ವರ ಬಳಿ ಹೋಗಿ ಕಾರ್ಖಾನೆ ಪುನ​ಶ್ಚೇ​ತ​ನಕ್ಕೆ ಹಣ ಬಿಡು​ಗಡೆ ಮಾಡಿ​ಸಿ ಆ ಮೂಲಕ ಶಕ್ತಿ ಪ್ರದರ್ಶಿಸಿ ಎಂದು ಸವಾಲು ಹಾಕಿದರು.

ಅನುಕಂಪ ಗಿಟ್ಟಿಸೋದು ಇನ್ನಾದ್ರು ಬಿಡಿ: ಎಚ್‌ಡಿಕೆ ನಡೆಗೆ ಚೆಲುವರಾಯಸ್ವಾಮಿ ಕಿಡಿ

ಸಂಚಿನಿಂದ ಮೈತ್ರಿ ಸರ್ಕಾರ ಪತನ:

ಮಾಜಿ ಸಿಎಂ ಎಚ್‌.ಡಿ.ಕುಮಾ​ರ​ಸ್ವಾಮಿ ಜಿಲ್ಲೆಯ ಅಭಿ​ವೃ​ದ್ಧಿ​ಯನ್ನು ಗುರಿ​ಯಾ​ಗಿ​ಸಿ​ಕೊಂಡು 8,500 ಕೋಟಿ ರು. ಹಣ​ವನ್ನು ನಿಗ​ದಿ​ಪ​ಡಿಸಿ ಅಭಿ​ವೃದ್ಧಿ ಕಾರ್ಯ​ಗ​ಳಿಗೆ ಚಾಲನೆ ಕೊಟ್ಟಿದ್ದರು. ಮೈಷು​ಗರ್‌ಗೆ ಬದ​ಲಾಗಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪ​ನೆಗೆ 450 ಕೋಟಿ ರು. ಹಣ​ವನ್ನು ಮೀಸ​ಲಿ​ಟ್ಟಿ​ದ್ದರು. ಸರ್ಕಾರ ಉಳಿ​ದಿ​ದ್ದರೆ ಎಲ್ಲಾ ಯೋಜ​ನೆ​ಗಳು ಕಾರ್ಯ​ಗ​ತ​ಗೊ​ಳ್ಳು​ತ್ತಿ​ದ್ದವು. ಆದರೆ, ಕೆಲ ಪಿತೂ​ರಿ​ಗಾ​ರರು ನಡೆ​ಸಿದ ಸಂಚಿ​ನಿಂದ ಮೈತ್ರಿ ಸರ್ಕಾರ ಪತ​ನ​ವಾ​ಯಿತು. ಇದಕ್ಕೆ ಕುಮಾ​ರ​ಸ್ವಾ​ಮಿ​ ಅ​ವ​ರನ್ನು ಹೊಣೆ​ಗಾ​ರ​ರ​ನ್ನಾಗಿ ಮಾಡು​ವುದು ಸರಿ​ಯಲ್ಲ ಎಂದರು.

ಮನ್ಮುಲ್‌ ಯಶಸ್ಸಿನ ಹಿಂದೆ ಒಗ್ಗಟ್ಟು:

ಮನ್‌ಮುಲ್‌ ಅಧ್ಯಕ್ಷ ಚುನಾ​ವಣೆ ಯಶ​ಸ್ಸಿನ ಹಿಂದೆ ಜೆಡಿ​ಎಸ್‌ನ​ವರ ಒಗ್ಗಟ್ಟು ಇದೆ. ಜೆಡಿ​ಎಸ್‌ನ​ವ​ರೆ​ಲ್ಲರೂ ಸೇರಿ ಬಿಜೆಪಿ ಬೆಂಬ​ಲಿತ ನಿರ್ದೇಶಕಿ ರೂಪಾ ಅವ​ರನ್ನೇ ಅಧ್ಯ​ಕ್ಷ​ರ​ನ್ನಾಗಿ ಮಾಡ​ಬೇ​ಕು ಎಂದು ನಿರ್ಧರಿ​ಸಿ​ದ್ದೆವು. ಅದಕ್ಕೆ ಆರಂಭ​ದಲ್ಲಿ ರೂಪಾ ಅವರೂ ಒಪ್ಪಿ​ದ್ದರು. ಆದರೆ, ಕೊನೇ ಗಳಿ​ಗೆ​ಯಲ್ಲಿ ಪಕ್ಷದ ವರಿ​ಷ್ಠರ ನಿಲು​ವಿಗೆ ಬದ್ಧ​ವಾ​ಗಿ​ರು​ತ್ತೇವೆ ಎಂದು ಹೇಳಿದ ನಂತರ ನಾವು ನಮ್ಮದೇ ಪಕ್ಷ​ದ​ವ​ರನ್ನು ಅಭ್ಯರ್ಥಿಯ​ನ್ನಾಗಿ ಮಾಡಿ​ದೆವು. ಎಲ್ಲರೂ ಅದಕ್ಕೆ ಸಹ​ಕ​ರಿ​ಸಿ​ದ್ದಾರೆ ಎಂದು ಪ್ರತಿ​ಕ್ರಿ​ಯಿ​ಸಿ​ದರು.

ಬಹಿರಂಗ ಚರ್ಚೆಗೆ ಸಿದ್ಧ:

ಜಿಲ್ಲೆಯ ಬಗ್ಗೆ ಮಾತ​ನಾಡಲು ಕುಮಾ​ರ​ಸ್ವಾಮಿ ಅವ​ರಿಗೆ ನೈತಿಕ ಹಕ್ಕಿಲ್ಲ ಎಂದು ಹೇಳುವ ಚಲು​ವ​ರಾ​ಯ​ಸ್ವಾಮಿ ಈ ಬಗ್ಗೆ ಬಹಿ​ರಂಗ ಚರ್ಚೆಗೆ ಬರಲು ಸಿದ್ಧ​ರಿ​ದ್ದಾ​ರೆಯೇ. ಜಿಲ್ಲೆಯ ಅಭಿ​ವೃದ್ಧಿ ವಿಚಾ​ರ​ವಾಗಿ ನಮಗೆ ನೈತಿ​ಕತೆ ಇದೆಯೋ ಇಲ್ಲವೋ ಎಂಬು​ದನ್ನು ನಿರ್ಧರಿ​ಸಲು ಮಂಡ್ಯ​ದಲ್ಲೇ ವೇದಿಕೆ ನಿರ್ಮಿಸೋಣ. ಜನರ ಮುಂದೆ ಚರ್ಚಿಸೋಣ. ಆಗ ನಮ್ಮ ನೈತಿ​ಕ​ತೆ​ಯನ್ನು ನಾವು ಸಾಭೀ​ತು ಮಾಡಲು ಸಿದ್ಧ​ರಿ​ದ್ದೇವೆ. ಅದಕ್ಕೆ ಅವರು ಸಿದ್ದ​ರಿ​ದ್ದಾ​ರೆಯೇ ಎಂಬು​ದನ್ನು ಹೇಳಲಿ ಎಂದು ಶಾಸಕ ತಮ್ಮಣ್ಣ ಸವಾಲು ಹಾಕಿದರು.

'ಸಿದ್ಧರಾಮಯ್ಯ ವಿಪಕ್ಷ ನಾಯಕನಾದ್ರೆ ರಾಜ್ಯದ ಸಮಸ್ಯೆ ಪರಿಹಾರ'

Latest Videos
Follow Us:
Download App:
  • android
  • ios