ಮಂಡ್ಯ(ನ.08): ಕೆ. ಆರ್. ಪೇಟೆ ಅನರ್ಹ ಶಾಸಕ ನಾರಾಯಣಗೌಡ ಅವರನ್ನು ಮುಂಬೈಯಿಂದ ಕರೆದು ತರಲು ಹೋಗಿದ್ದಾಗ ಏನೆಲ್ಲಾ ಘಟನೆಗಳು ಹಾಗೂ ಪ್ರಹಸನಗಳು ನಡೆದು ಎನ್ನುವುದನ್ನು ಜಿಪಂ ಸದಸ್ಯ ಮಂಜುನಾಥ್ ಗುರುವಾರ ನೀತಿ ಮಂಗಲ ಗ್ರಾಮ ದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಬಹಿರಂಗ ಪಡಿಸಿದ್ದಾರೆ.

ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಮಂಜು ನಾಥ್, ನಾರಾಯಣಗೌಡರನ್ನು ಕರೆತರಲು ಮುಂಬೈಗೆ ತೆರಳಿದ್ದ ಜೆಡಿಎಸ್ ನಿಯೋಗದಲ್ಲಿ ನಾನೂ ಇದ್ದೆ. ಅಂದು ನಾರಾಯಣಗೌಡರನ್ನು ಭೇಟಿ ಮಾಡಲು ಮುಂಬೈಗೆ ಹೋಗಿದ್ದೆವು. ಅಲ್ಲಿ ನಾರಾಯಣಗೌಡ ನಾಟಕವಾಡಿಕೊಂಡು ಆಸ್ಪತ್ರೆ ಸೇರಿದ್ದರು. ನಾಲ್ಕೈದು ಬಾರಿ ಪೋನ್ ಮಾಡಿದ್ರೂ ಕರೆ ಸ್ವೀಕರಿಸಲಿಲ್ಲ. ಕಡೆಗೆ ಪೋನ್ ಸ್ವೀಕರಿಸಿದರು ಎಂದಿದ್ದಾರೆ.

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಹತ್ಯೆಗೆ ಸುಪಾರಿ..?

ನಿಮ್ಮ ಸಿಎಂ ನನ್ನನ್ನ ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷರನ್ನಾಗಿ ಮಾಡ್ತಿನಿ ಅಂತ ಹೇಳಿದ್ದರು, ಮಾಡಿಲ್ಲ. ಅವರಿಗೆ ಅಧ್ಯಕ್ಷ ಸ್ಥಾನದ ನೇಮಕಾತಿ ಪತ್ರದ ಫ್ಯಾಕ್ಸ್ ಮಾಡಿಸಲು ಹೇಳಿ ನಾನು ವಾಪಸ್ ಬರ್ತಿನಿ ಎಂದು ಹೇಳಿದ್ದರು. ಅದೆಲ್ಲಾ ಆಗಲ್ಲಣ್ಣ ನೀವು ಬನ್ನಿ ಎಂದು ಗೋಗರೆದರು ಅವರು ಬರಲಿಲ್ಲ. ನಿಮ್ಮ ಪುಟ್ಟರಾಜುವಿಗೆ ಹೇಳಿ ಅವರ ಕಡೆಯಿಂದ ಸಿಎಂಗೆ ಹೇಳಿಸಿ ಮಂಡಳಿಯ ಅಧ್ಯಕ್ಷ ಸ್ಥಾನದ ನೇಮಕಾತಿಯ ಆದೇಶದ ಪ್ರತಿ ಕೊಡಿಸಿ ಎಂದು ಬೇಡಿಕೆ ಇಟ್ಟರು. ಅದು ನಡೆಯುವುದಿಲ್ಲ, ನಿಮ್ ಜೊತೆ ನಾವಿರ್ತಿವಿ ಬನ್ನಿ ಎಂದು ಕೇಳಿಕೊಂಡೆವು. ಆದರೂ ಬರಲಿಲ್ಲ ನಾರಾಯಣ ಗೌಡರು ಎಂದು ಮಂಜುನಾಥ್ ವಿವರಿಸಿದ್ದಾರೆ.

ನನಗೂ ಚಕ್ರ ತಿರುಗಿಸಲು ಬರುತ್ತದೆ : ಡಿಕೆಶಿ ವಾರ್ನಿಂಗ್

ಆ ವೇಳೆಗೆ ಈಗಿನ ಡಿಸಿಎಂ ಡಾ. ಅಶ್ವಥ್ ನಾರಾ ಯಣ್ ಪೋನ್ ತೆಗೆದುಕೊಂಡು ನಿಮ್ಮ ಶಾಸಕರನ್ನು ಮಿನಿಸ್ಟರ್ ಮಾಡಿಕೊಂಡು ಬರ್ತಿವಿ ನಡೀರಿ ಎಂದ ರು. ಬಿಜೆಪಿ ಹೇಳಿದಂತೆ ಮಾಡುತ್ತಿದ್ದಾರೆ. ಇದೆಲ್ಲಾ ನಾಟಕ ಎಂದು ಮಂಜುನಾಥ್ ವಿವರಿಸಿದ್ದಾರೆ.