ಮಂಡ್ಯ(ನ.08 ): ಅನರ್ಹ ಶಾಸಕ ನಾರಾಯಣಗೌಡ ಅವರ ಹತ್ಯೆಗೆ ನೀಡಲಾಗಿತ್ತು ಎನ್ನುವ ಸುದ್ದಿ ಮಂಡ್ಯದಲ್ಲಿ ಕೇಳಿ ಬಂದಿದೆ. ಇದನ್ನು ಹೇಳಿದ್ದು ಯಾರೋ ಮೂರನೇ ವ್ಯಕ್ತಿಯಲ್ಲ, ಸ್ವತಃ ನಾರಾಯಣ ಗೌಡ ಅವರೇ ಇಂತಹದೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ಅನರ್ಹ ಶಾಸಕ ನಾರಾಯಣ ಗೌಡ ಸ್ಫೋಟಕ‌ ಹೇಳಿಕೆ ನೀಡಿದ್ದಾರೆ. ತಮ್ಮನ್ನು ಹತ್ಯೆ ಮಾಡಲು ಸುಪಾರಿ ನೀಡಿದ ಬಗ್ಗೆ ಮಾತನಾಡಿದ ನಾರಾಯಣ ಗೌಡ, ಸುಪಾರಿ ಕೊಟ್ಟವರು ಯಾರು, ಯಾಕೆ ಕೊಟ್ಟರು ಎಂಬೆಲ್ಲ ವಿಚಾರಗಳನ್ನು ಹೇಳಿಲ್ಲ.

ಮಂಡ್ಯ: ಜೆಡಿಎಸ್ ಸಭೆಯಲ್ಲಿ ಮದ್ಯ ಜೊತೆ ಭರ್ಜರಿ ಬಾಡೂಟ..!

ನಾರಾಯಣಗೌಡನ್ನ ಹೊಡೆದು ಹಾಕ್ಬುಡ್ಬೇಕು‌ ಅಂತಾ 50 ಲಕ್ಷಕ್ಕೆ ಫಿಕ್ಸ್ ಮಾಡಿದ್ದರು. ಆದ್ರೆ ಆ ಭಗವಂತನ ಶಕ್ತಿ ಎಲ್ಲಿ ಮಾಡೋಕೆ ಬಿಡುತ್ತೆ ಸರ್..? ಅಂಡರ್ ವಲ್ದ್ ಡಾನ್‌ಗಳಾಗಿದ್ದ ದಾವೂದ್ ಮತ್ತು ಚೋಟಾ ರಾಜನ್ ಅಂತಿದ್ದವರೇ ನನ್ನನ್ನು ಹೊಡಿಯೋಕೆ ಆಗ್ಲಿಲ್ಲ, ಭಗವಂತನ ಆಶೀರ್ವಾದ. ಇನ್ನು ನನ್ನ ತಾಲೂಕಿನವ್ರು ಹೊಡೆಯೋಕೆ ಸಾಧ್ಯಾನಾ ಎಂದು ಪ್ರಶ್ನಿಸಿದ್ದಾರೆ.

ಅಂದಿನಿಂದ ಗನ್ ಮ್ಯಾನ್‌ನನ್ನು ಬಿಟ್ಟಿದ್ದೇನೆ. ಭಯ ಪಡೋದಿಲ್ಲ. ಕೆಟ್ಟೋರು ಕೆಟ್ಟೋರೇ, ಈ ತಾಲೂಕಿನಲ್ಲಿ ಯಾರು ಕೊಟ್ಟೋರಿದ್ದಾರೆ, ಲೂಟಿ ಮಾಡ್ತಿದ್ದಾರೆ ಅವ್ರಿಗೆ ಪಾಠ ಕಲಿಸೋದೇ ನನ್ನ ಗುರಿ. ಇನ್ನು ಯಾವುದೇ ಕಾರಣಕ್ಕೂ ಹೆದರೋ ಪ್ರಶ್ನೇನೆ ಇಲ್ಲ ಇಲ್ಲ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ತೊಟ್ಟಿಲಮಡು ಉತ್ಸವ, ಮಕ್ಕಳಾಗಲು ಅಷ್ಟತೀರ್ಥ ಸ್ನಾನ