ಮೈಸೂರು [ನ.08]:  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನಂತವನನ್ನೇ ಬಿಟ್ಟಿಲ್ಲ. ಇನ್ನು ಶಾಸಕರಿಗೆ ಅನುದಾನ ಕೊಡುತ್ತಾರಾ? ಮೊದಲು ನಮ್ಮ ಮನೆ ಸರಿ ಮಾಡಿಕೊಳ್ಳೋಣ. ನನಗೂ ಚಕ್ರ ತಿರುಗಿಸಲು ಬರುತ್ತದೆ ಎಂಬುದನ್ನು ತೋರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಸಿದರು. 

ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಅನಿಲ್ ಚಿಕ್ಕಮಾದು ಹೇಳಿದ್ದ ‘ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಸಚಿವರಾಗಿದ್ದಾಗ ನೀಡಿದ್ದ 20 ಕೋಟಿ  ರು. ಅನುದಾನದಲ್ಲಿ ಬಿಜೆಪಿ ಸರ್ಕಾರ 15 ಕೋಟಿ ರು. ತಡೆ ಹಿಡಿದಿದೆ’ ಎಂಬ ಮಾತು  ಉಲ್ಲೇಖಿಸಿ, ಅನಿಲ್ ಬಿಜೆಪಿಯವರು ನನ್ನ ಕ್ಷೇತ್ರಕ್ಕೆ ಬಂದಿದ್ದ ಮೆಡಿಕಲ್ ಕಾಲೇಜನ್ನೇ ಬಿಟ್ಟಿಲ್ಲ. ಇನ್ನು ನಿಮ್ಮನ್ನು ಬಿಡುತ್ತಾರಾ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನಗೂ  ಚಕ್ರ ತಿರುಗಿಸಲು ಬರುತ್ತದೆ ಎಂಬುದನ್ನು ತೋರಿಸಿ ಕೊಡುತ್ತೇನೆ ಎಂದು ಗುಡುಗಿದರು. 

ತಪ್ಪು ಮಾಡಿದ್ದರೆ ನೇಣಿಗೆ ಹಾಕಿ: ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಒಂದು ಟ್ರೀಟ್‌ಮೆಂಟ್ ಆದರೆ ನನಗೊಂದು ತರಹ ಟ್ರೀಟ್‌ಮೆಂಟ್ ಕೊಟ್ಟರು. ಗಾಂಧಿ ಇದ್ದ ಜೈಲ್ ಅದಾದರೂ, ಅಲ್ಲಿ ಗೋಡ್ಸೆನೂ ಇದ್ದ. ನಾನು ತಪ್ಪು ಮಾಡಿದ್ದರೆ ನೇಣು ಹಾಕಲಿ ಎಂದು ಕೆಂಡಾಮಂಡಲರಾದರು.