ಮಂಡ್ಯ [ನ.011]:  ಗ್ರಾಮ ದೇವತೆಯ ತೆಪ್ಪೋತ್ಸವ ನಡೆಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಶಾಸಕರು ರಕ್ಷಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡೇನಹಳ್ಳಿ ಕೆರೆ 20 ವರ್ಷಗಳ ನಂತರ ತುಂಬಿದ್ದು,  ಕೆರೆಯಲ್ಲಿ ಭಾನುವಾರ ಗ್ರಾಮಸ್ಥರು ತೆಪ್ಪೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವೇಳೆ ದೇವರ ಉತ್ಸವ ಮೂರ್ತಿಗಳನ್ನ  ಹೊತ್ತ ತೆಪ್ಪ ಕೆರೆ ಪ್ರವೇಶಿಸಿದೆ. ಇದೇ ವೇಳೆ  ಬಿಂಡೇನಹಳ್ಳಿಯ ಅಭಿ ಹಾಗೂ ಕುಶಾಲ್ ಎಂಬ ಇಬ್ಬರು ಯುವಕರು ಕೆರೆಯಲ್ಲಿ ಈಜಲು ದುಮುಕಿದ್ದು, ಈಜು ಬಾರದೇ ರಕ್ಷಣೆಗೆ ಕೂಗಿಕೊಂಡಿದ್ದಾರೆ. 

ಇದೇ ಸಂದರ್ಭದಲ್ಲಿ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಸೇರಿದಂತೆ ಕೆಲವರು ಮತ್ತೊಂದು ಬೋಟ್ ನಲ್ಲಿ ವಿಹಾರ ಹೊರಟಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ನೀರಿನಲ್ಲಿ ಮುಳುಗುತ್ತಿದ್ದ ಅಭಿ ಎಂಬ ಯುವಕ ಈಜಲಾರದೆ ರಕ್ಷಣೆಗೆ ಕೂಗಿಕೊಂಡಿದ್ದಾನೆ. 

ಅನೈತಿಕ ಸಂಬಂಧಕ್ಕೆ ಒಪ್ಪದ ಸೊಸೆಯನ್ನೇ ಕೊಂದ ಮಾವ...

 ಮುಳುಗಲಾರಂಭಿಸಿದ್ದ ಯುವಕನ ಕೂಗು ಹಾಗೂ ದಡದ ಮೇಲಿದ್ದ ಗ್ರಾಮಸ್ಥರ ಕೂಗಾಟ ಕೇಳಿಸಿಕೊಂಡ ಶಾಸಕ ಸುರೇಶ್ ಗೌಡ ತಾವಿದ್ದ ಬೋಟ್ ಅನ್ನ  ಮುಳುಗುತ್ತಿದ್ದ ಯುವಕನ ಕಡೆಗೆ ತಂದು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 

 ಮುಳುಗುವ ಹಂತದಲ್ಲಿದ್ದ ಆತನ ಕೈ ಹಿಡಿದು ದಡ ಸೇರಿಸಿದ್ದಾರೆ. ಯುವಕನಿಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.