ಮಂಡ್ಯದಲ್ಲಿ ಅಕ್ರಮವಾಗಿ ಮಾರಾಟವಾಗ್ತಿದೆ ಕೇರಳದ ಲಾಟರಿ ಟಿಕೆಟ್..!
ಕೇರಳದ ಲಾಟರಿಯನ್ನು ಮಂಡ್ಯದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲಾಟರಿಗೆ ನಿಷೇಧ ಹೇರಿದ್ದರೂ ಜನ ಮಾತ್ರ ಟಿಕೆಟ್ ಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ಪೊಲೀಸರು ಇದನ್ನು ಗಮನಿಸಿದರೂ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ಮಂಡ್ಯ(ಅ.15): ಕೇರಳದ ಲಾಟರಿ ಟಿಕೆಟ್‌ಗಳನ್ನು ಮಂಡ್ಯದಲ್ಲಿ ತಂದು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲಾಟಿ ಮಾರಾಟ ನಿಷೇಧ ಮಾಡಿದ್ದರೂ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿರುವುದು ವಿಪರ್ಯಾಸ.
ಈಗಾಗಲೇ ಮಂಡ್ಯ ಭಾಗದ ಸಾಕಷ್ಟು ಜನ ಲಾಟರಿ ಟಿಕೆಟ್ ಖರೀದಿ ವ್ಯಸನಿಗಳಾಗಿ ಬದಲಾಗಿದ್ದು, ಹೀಗಿದ್ದರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
ಸಕ್ಕರೆನಾಡಲ್ಲಿ ಎಗ್ಗಿಲ್ಲದೆ ಅಕ್ರಮ ಲಾಟರಿ ದಂಧೆ ನಡೆಯುತ್ತಿದ್ದು, ಕೇರಳದಿಂದ ದೊಡ್ಡ ಪ್ರಮಾಣದಲ್ಲಿ ಲಟಿ ಟಿಕೆಟ್‌ಗಳು ಸಪ್ಲೈ ಆಗತ್ತಿದೆ. ರಾಜ್ಯದಲ್ಲಿ ಲಾಟರಿಗೆ ನಿಷೇಧ ಹೇರಿದ್ದರೂ ಜನರಿಗೆ ಮಾತ್ರ ಲಾಟರಿ ಹುಚ್ಚು ಬಿಟ್ಟಿಲ್ಲ.
ಕೇರಳದಿಂದ ಟಿಕೆಟ್ ಹೇಗೆ ತಲುಪುತ್ತೆ..?
ಲಾಟರಿ ಟಿಕೆಟ್‌ಗಳನ್ನು ಕರ್ನಾಟಕದಲ್ಲಿ ಮಾರಲು ಅವಕಾಶ ಇಲ್ಲದಿದ್ದರೂ, ಪ್ರತಿದಿನ ಸರಕು ಸಾಗಣೆ ಲಾರಿಯ ಮೂಲಕ ಕೇರಳ ಲಾಟರಿ ಮಂಡ್ಯಕ್ಕೆ ತಲುಪುತ್ತಿದೆ. ಜಿಲ್ಲೆಗೆ ಬರುವ ಕೇರಳ ಲಾಟರಿ ಜಿಲ್ಲೆಯ ಹಲವು ಭಾಗಗಳಲ್ಲಿ ಮಾರಾಟವಾಗುತ್ತದೆ.
ಮಂಡ್ಯ: ಆತ್ಮಹತ್ಯೆಗೆ ಯತ್ನಿಸಿದ್ದ dysp ವಿರುದ್ಧವೇ ದೂರು ದಾಖಲು
ಮಂಡ್ಯ ಹಾಗೂ ಮದ್ದೂರು ತಾಲೂಕಿನಲ್ಲಿ ಲಾಟರಿ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು, ನಿವೃತ್ತ ಸರ್ಕಾರಿ ನೌಕರರು, ಕೂಲಿಗಾರರ,ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿಸುತ್ತಾರೆ.
ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ:
ಜಿಲ್ಲೆಯಲ್ಲಿ ಹೊರ ರಾಜ್ಯದ ಅಕ್ರಮ ಲಾಟರಿ ದಂಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಮಾರ್ಕೆಟ್ ,ಬಸ್ ನಿಲ್ದಾಣ, ಟೆಂಪೋ ನಿಲ್ದಾಣ ಮತ್ತು ಹೆಚ್ಚಿನ ಜನಸಂದಣಿ ಪ್ರದೇಶದಲ್ಲಿ ಲಾಟರಿ ಬೇಕಾಬಿಟ್ಟಿ ಬಿಕರಿಯಾಗುತ್ತಿದೆ. ಲಾಟರಿ ಆಸೆಗೆ ದುಡಿದ ಹಣವನ್ನೆಲ್ಲಾ ಜನರು ಟಿಕೆಟ್ ಕೊಳ್ಳುವುದಕ್ಕಾಗಿಯೇ ವ್ಯಯಿಸುತ್ತಿದ್ದಾರೆ.
ಕಡಿವಾಣ ಹಾಕಲು ಜನರ ಒತ್ತಾಯ:
ಲಾಟರಿ ಟಿಕೆಟ್ ದಂಧೆಯಿಂದ ಬೇಸತ್ತಿರುವ ಸಾರ್ವಜನಿಕರು ಅಕ್ರಮ ಲಾಟರಿ ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ. ಹಲವಾರು ಕುಟುಂಬಸ್ಥರು ಟಿಕೆಟ್‌ಗಾಗಿ ಹಣ ಪೋಲು ಮಾಡುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿರುವುದಾಗಿ ಜನ ಆರೋಪಿಸಿದ್ದಾರೆ. ಕೇರಳ ಲಾಟರಿಯನ್ನು ಮಂಡ್ಯದಲ್ಲಿ ಮಾರದಂತೆ ಕಡಿವಾಣ ಹಾಕಬೇಕಾಗಿ ಜಿಲ್ಲೆಯ ಹೋರಾಟಗಾರ ಒತ್ತಾಯಿಸಿದ್ದಾರೆ.
‘ಮನಸ್ಸಲ್ಲಿ ನೋವಿದ್ದರೂ ನಿವೃತ್ತಿ ಪಡೆಯಲ್ಲ’