ಮಂಡ್ಯದ ನಂಜನಗೂಡಿನಲ್ಲಿ ದರೋಡೆಕೋರರ ಗುಂಪೊಂದು ಕೇರಳ ಮೂಲದ ಕಾರನ್ನು ತಡೆದು 80 ಲಕ್ಷ ರು.ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ದರೋಡೆಕೋರರ ಬಂಧನಕ್ಕೆ ತಂಡ ರಚಿಸಿ ಪೊಲೀಸರು ಬಲೆ ಬೀಸಿದ್ದಾರೆ.
ಮಂಡ್ಯ(ಅ.18): ಕೇರಳ ಮೂಲದ ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ, ಕಾರಿನ ಸಹಿತ 80 ಲಕ್ಷ ರು.ಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಂಜನಗೂಡು ನಗರದ ಕಪಿಲಾ ನದಿಯ ಡಿ. ದೇವರಾಜ ಅರಸು ಸೇತುವೆ ಬಳಿ ನಡೆದಿದೆ.
ಕೇರಳ ಮೂಲದ ಜಲಾಲ್ ಮಹಮದ್ ಹಾಗೂ ಸ್ನೇಹಿತ ಮೈಸೂರಿನಿಂದ ಸುಮಾರು 80 ಲಕ್ಷ ರು. ಗಳನ್ನು ಸಾಗಿಸುತ್ತಿದ್ದ ಮಾಹಿತಿಯನ್ನು ಅರಿತ ಸುಮಾರು 10 ಜನರ ದರೋಡೆಕೋರರ ತಂಡ ಪಟ್ಟಣ ಕಪಿಲಾ ನದಿಯ ಸೇತುವೆ ಬಳಿ ಕಾರನ್ನು ಅಡ್ಡಗಟ್ಟಿಕಾರಿನ ಸಮೇತ 80 ಲಕ್ಷ ನಗದನ್ನೂ ದೋಚಿ ಪರಾರಿಯಾಗಿದ್ದಾರೆ.
ತಾಲೂಕು ಕಚೇರಿಗೆ ಸಚಿವರ ದಿಢೀರ್ ಭೇಟಿ; ಬ್ಯಾಗ್, ಲಾಕರ್ ಚೆಕ್ ಮಾಡಿದ್ರು ಆರ್. ಅಶೋಕ್
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಐಜಿಪಿ ವಿಫುಲ್‌ಕುಮಾರ್, ಎಸ್ಪಿ ರಿಷ್ವಂತ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ದರೋಡೆಕೋರರ ಬಂಧನಕ್ಕೆ ತಂಡ ರಚಿಸಿ ಪೊಲೀಸರು ಬಲೆ ಬೀಸಿದ್ದಾರೆ.
ಸ್ಥಳದಲ್ಲಿನ ಹೋಟೆಲ್ ಮತ್ತು ಇತರೆ ಖಾಸಗಿ ಕಟ್ಟಡದ ಸಿಸಿ ಟಿವಿ ಪುಟೇಜ್‌ನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳು ಹುಲ್ಲಹಳ್ಳಿ ರಸ್ತೆ ಮೂಲಕ ಸರಗೂರನತ್ತ ಪ್ರಯಾಣ ಬೆಳೆಸಿ ಪರಾರಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
