Asianet Suvarna News Asianet Suvarna News

ನಿಸರ್ಗದ ಸುಖ ಸವಿಯೋಣ, ಜೀವ ಸಂಕುಲವನ್ನು ಪಾಲನೆ ಮಾಡುವ ಭೂ ತಾಯಿಯ ಕಾಪಾಡುವ!

* ಜೀವ ಸಂಕುಲಕ್ಕೆ ಮಗುವಾಗಿ ಪಾಲನೆ ಮಾಡುವ ತಾಯಿ ಭೂಮಿ

* ಪ್ರಕೃತಿಯ ಸೊಬಗಲಿ ನಾವೆಲ್ಲ ಪ್ರಾಣಿ,ಪಕ್ಷಿಗಳನ್ನು ಜೀವಿಸಲು ಬಿಡಬೇಕು

* ಹಸುರು ಉಸಿರಾಗಬೇಕು ಪ್ರತಿಯೊಬ್ಬ ಮಕ್ಕಳಿಗೆ ಪರಿಸರ ಮಹತ್ವ ತಿಳಿಸಬೇಕು

Protecting environment is our responsibility pod
Author
Bangalore, First Published Apr 20, 2022, 2:31 PM IST

ರಂಜಿತ್ ಕೆ ಎಸ್, ಸಾಗರ

ನಿಸರ್ಗ (Environment) ಒಂದು ಕೊಡುಗೆ ಅದನ್ನು ವರ್ಣಿಸಲು ಪದಗಳೇ ಸಾಲದು ನಿಸರ್ಗದ ಒಡಲು ತಾಯಿಯ ಮಡಿಲು ಯಾವುದಕ್ಕೂ ಸರಿಸಾಟಿಯಾಗದು. ಜೀವ ಸಂಕುಲಕ್ಕೆ ಮಗುವಾಗಿ ಪಾಲನೆ ಮಾಡುವ ತಾಯಿ, ಪ್ರಕೃತಿಯನ್ನು (Nature) ತನ್ನ ಮಡಿಲಲ್ಲಿ ಜೋಗುಳವಾಡುವ ಭೂ ತಾಯಿ ಇವಳನ್ನು ನಾವು ಕಾಪಾಡುವ ಒಂದು ಮನೋಭಾವ ಇರ ಬೇಕು. ಪ್ರಕೃತಿಯ ಸೊಬಗಲಿ ನಾವೆಲ್ಲ ಪ್ರಾಣಿ,ಪಕ್ಷಿಗಳನ್ನು ಜೀವಿಸಲು ಬಿಡಬೇಕು. ಹಸುರು ಉಸಿರಾಗಬೇಕು ಪ್ರತಿಯೊಬ್ಬ ಮಕ್ಕಳಿಗೆ ಪರಿಸರ ಮಹತ್ವ ತಿಳಿಸುವುದರ ಜತೆಗೆ ಜೂನ್ 5ರಂದು ಸಸಿಗಳನ್ನು ನೆಡುವುದರ ಮೂಲಕ ಪ್ರಕೃತಿಯ ಮಹತ್ವ ತಿಳಿಸುವುದು ನಮ್ಮ ಕರ್ತವ್ಯ.

ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿ ಉಳಿದ್ರೆ ಮಾತ್ರ ನಮಗೆ ಉಳಿಗಾಲ ಎಂಬುದನ್ನು ಬಾಲ್ಯದಲ್ಲೇ ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾದ ಅಗತ್ಯವಂತು ಇಂದು ಹಿಂದಿಗಿಂತ ಹೆಚ್ಚಿದೆ. ತಾಪಮಾನ ಹೆಚ್ಚಳ, ಅರಣ್ಯನಾಶ, ಕೆಲವೊಂದು ಜೀವ ಪ್ರಭೇದಗಳ ನಾಶ ಸೇರಿದಂತೆ ನಿಸರ್ಗದ ಮೇಲಾಗುತ್ತಿರುವ ನಿರಂತರ ದೌರ್ಜನ್ಯ ಭವಿಷ್ಯದಲ್ಲಿ ಭೂಮಿ ಮೇಲಿನ ಬದುಕನ್ನು ನರಕವಾಗಿಸುವ ಭಯವಂತೂ ಇದ್ದೇಇದೆ. ಹೀಗಾಗಿ ಮಕ್ಕಳಿಗೆ ಪ್ರಕೃತಿಯ ಒಡನಾಟ ಕಲ್ಪಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕಿದೆ.

ಸುಂದರ ಪ್ರಕೃತಿ ಭೂಮಿಯನ್ನೇ ಸ್ವರ್ಗವಾಗಿಸಿದೆ. ಇಂತಹ ಸಂದರ್ಭದಲ್ಲಿ ಅ ಪ್ರಕೃತಿಯ ಸಂಪತ್ತು ಉಳಿವು ನಮ್ಮ ಕೈಯಲ್ಲಿ ಇದೆ. ನಮ್ಮ ಬೇಕು ಬೇಡಿಕೆಗಳನ್ನು ಈ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಪರಿಸರದಿಂದ ಪಡೆದುಕೆuಟಿಜeಜಿiಟಿeಜಳ್ಳುವುದು. ಅದರ ಉಳಿವಿಗಾಗಿ ಪ್ರತಿಯೊಬ್ಬರು ಪ್ರತಿ ಕ್ಷಣವೂ ಆಲೋಚಿಸುವ ಭಾವನೆ ಹೊಂದಿರಬೇಕು. ಎಲ್ಲರೂ ನಿಸರ್ಗದ ಮಕ್ಕಳು ಚಿಗುರುವ ಎಲೆಗಳಂತೆ ನಮ್ಮ ದಿನ ನಿತ್ಯದ ಜೀವನ ಪರಿಸರ ಸೌಂದರ್ಯ ಇನ್ನೂ ಹೆಚ್ಚಾಗಲಿ ಇದು ಪ್ರಕೃತಿಯಲ್ಲಿ ಅಡಗಿರುವ ಸೌಂದರ್ಯ.

ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ವಿಜ್ಞಾನ ಯುಗದಲ್ಲಿರುವ  ವಿಜ್ಞಾನದ ಆವಿಷ್ಕಾರಗಳಿಂದ ಸುಖ ಸೌಲಭ್ಯಗಳನ್ನು ಪಡೆದು ಬದುಕನ್ನು ಸುಖದ ಸುಪ್ಪತ್ತಿಗೆಯಲ್ಲಿಟ್ಟಿದೇವೆ ಎನ್ನುವುದು ನಿಜವಾದರೂ ಅದರ ಮೇಲೆ ನಿದ್ದೆಯಿಲ್ಲದೆ ಹೊರಳಾಡುತ್ತಿರುವುದೂ ವಾಸ್ತವ ಸತ್ಯ.ಮಾನಸಿಕ ಸುಖಕ್ಕೆ ಕಾಣುವ ಕಣ್ಣು ಕೇಳುವ ಕಿವಿ ತೆರೆದ ಹೃದಯ ಇರಬೇಕು.ನಮ್ಮ ಕಣ್ಣು ಕಿವಿ ಹೃದಯವನ್ನು ತೆರೆಸುವ ಶಕ್ತಿ ನಿಸರ್ಗಕ್ಕಿದೆ.ಇದರ ಆಕರ್ಷಣೆಗೆ ಒಳಗಾಗುವ ಮಂದಿ ಮಾನಸಿಕ ಸುಖ ಪಡೆಯುವಲ್ಲಿ  ಸಮರ್ಥರಾಗುತ್ತರೆ.ಅಂತವರು ನಿಸರ್ಗದ ಸೌಂದರ್ಯವನ್ನು ಸವಿಯಲು ನಾನಾ ದೇಶಗಳಿಗೆ ತೆರಳುವ ಬದಲು ಮಕ್ಕಳನ್ನು ಹಳ್ಳಿಯ ಪರಿಸರದ ಕಡೆಗೆ ಕರೆದುಕೊಂಡು ಬರುವುದು ಸೂಕ್ತ .

ಇಲ್ಲಿರುವ ಬೆಟ್ಟ, ಗುಡ್ಡ, ಹೊಲ ಗದ್ದೆಗಳ ಆ ಪ್ರಕೃತಿಯ ಸಹಜ ಒಡನಾಟ ದೊರೆಯುತ್ತದೆ.ಮಕ್ಕಳಿಗೆ ಮುದ ನೀಡುವ ಪ್ರಾಣವಾಯುವಿಗೆ ಹತ್ತಿರವಾಗುವ  ಪರಿಸರದ ಮೇಲೆ ತಮ್ಮ ಸ್ವಾರ್ಥಕ್ಕಾಗಿ ಹಾನಿ ಎಸಗುವ ಮಂದಿಯಿಂದ ಪರಿಸರ ನಾಶವಾಗುತ್ತಿದೆ ಎಂಬುದನ್ನು ಎಳೆಯ ಮಕ್ಕಳ ಮನಸಿನಲ್ಲಿ ಜಾಗೃತಿಯ ಬೀಜ ಬಿತ್ತಿದರೆ ಈ ಪ್ರಕೃತಿಯ ರಕ್ಷಣೆಯ ಬಗ್ಗೆ ಅವರಲ್ಲೂ ಒಲವು ಹೆಚ್ಚಾಗಬಹುದು.

Follow Us:
Download App:
  • android
  • ios