ಅತೀ ದೊಡ್ಡ ಸಾಹಿತ್ಯೋತ್ಸವ ಜೈಪುರ ಲಿಟರೇಚರ್ ಫೆಸ್ಟಿವಲ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಸುಧಾಮೂರ್ತಿ ತಾವು ಅಂತಾರಾಷ್ಟ್ರೀಯ ನಾನಿ ಎಂದೇ ಮಾತು ಆರಂಭಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದರು. ಹೌಸ್ ಫುಲ್ ಸಾಹಿತ್ಯೋತ್ಸವದ ಸೊಗಸನ್ನು ಕತೆಗಾರ ಜೋಗಿ ಅಕ್ಷರರೂಪಕ್ಕಿಳಿಸಿದ್ದಾರೆ.
ಜೈಪುರ ಲಿಟರರಿ ಫೆಸ್ಟಿವಲ್ನ 16ನೇ ಸಂಚಿಕೆ ಜನವರಿ 19ರಿಂದ ಆರಂಭವಾಗಿದೆ. ಜಗತ್ತಿನ ಅತಿ ದೊಡ್ಡ ಲಿಟರರಿ ಶೋ ಎಂದೇ ಕರೆಸಿಕೊಳ್ಳುವ ಈ ಸಾಹಿತ್ಯೋತ್ಸವದ ಮೊದಲ ದಿನದ ವಿಶೇಷ ವಿಷಯಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಕತೆಗಾರರಾದ ಜೋಗಿ.
ಮಾತುಗಳೆಲ್ಲ ಸುಳ್ಳು, ಮನಸ್ಸೆಂಬುದು ಮಾಯೆ, ನಮಗೆ ಒಂಟಿಯಾಗಿ ನಿಲ್ಲುವ ಧೈರ್ಯವಿಲ್ಲ, ಹೀಗಾಗಿ ನಾವು ಸಂಘಜೀವಿಗಳು, ಎಲ್ಲಾ ತತ್ವಜ್ಞಾನವೂ ಬೊಗಳೆ, ಎಲ್ಲಾ ಉಪದೇಶಗಳೂ ರಗಳೆ ಎನ್ನುತ್ತಿದ್ದ ಯೂಜಿ ಸಂಕ್ರಾಂತಿಯ ದಿನ ನೆನಪಾಗುತ್ತಾರೆ.
ಅನುವಾದಗೊಳ್ಳದೇ ಹೋದರೆ ಸಾಹಿತ್ಯ ಹಬ್ಬುವುದಿಲ್ಲ ನಮ್ಮಲ್ಲಿಗೆ ಬರುವ ಶೇ.80ರಷ್ಟುಮಂದಿ 27 ವರ್ಷ ಒಳಗಿನವರು ಎಡವೋ ಬಲವೋ, ನಮಗೆ ಎಲ್ಲವೂ ಒಂದೇ ಜೆಎಲ್ಎಫ್ ಅಂದ್ರೆ ಸಂಗೀತ, ಸಾಹಿತ್ಯ, ಕಲೆ, ಪರಂಪರೆ ಮತ್ತು ಭೂರಿಭೋಜನ
‘ಧರ್ಮಾತ್ಮ- ನಾನು ಕಂಡಂತೆ ಧರ್ಮಸಿಂಗ್’ - ವಿಕ್ರಂ ಪ್ರಕಾಶನ ಪ್ರಕಟಿಸಿರುವ ಈ ಕೃತಿಯನ್ನು ಹಿರಿಯ ಅಧಿಕಾರಿ ಡಾ ಡಿ.ವಿ.ಗುರುಪ್ರಸಾದ್ ಬರೆದಿದ್ದಾರೆ. ಕೃತಿಯ ಆಯ್ದ ಭಾಗ ಇಲ್ಲಿದೆ.
ಮನುಷ್ಯನ ಗುರಿ ಏನು..? ಇಂದು ಕುಮಾರವ್ಯಾಸ ಜಯಂತಿ ಕವಿಬ್ರಹ್ಮನಷ್ಟೇ ಅಲ್ಲ, ಭಾವಬ್ರಹ್ಮ ಕುಮಾರವ್ಯಾಸ ಕವಿಸಾರ್ಭೌಮನ ಕಾವ್ಯಸೌಂದರ್ಯ ಬಲ್ಲಿರಾ?
5ನೇ ಶತಮಾನದಿಂದಲೂ ಉತ್ತರವಿಲ್ಲದ ಒಗಟಾಗಿಯೇ ಉಳಿದಿದ್ದ ಸಂಸ್ಕೃತದ ಒಗಟೊಂದನ್ನು ಕಡೆಗೂ ಭಾರತೀಯ ಮೂಲದ ಕೇಂಬ್ರಿಡ್ಜ್ ವಿದ್ಯಾರ್ಥಿ ಬಿಡಿಸುವ ಮೂಲಕ ದಾಖಲೆ ಮಾಡಿದ್ದಾರೆ.
‘ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ, ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ’ ಅನ್ನೋದು ಎಂ ಆರ್ ಕಮಲ ಬರೆದ ಕವಿತೆಯೊಂದರ ಸಾಲು. ಅಮ್ಮ ಹಚ್ಚಿದ ಬೆಳಕಿನ ಬಗ್ಗೆ ಲೇಖಕಿ ಗೀತಾ ಬಿ ಯು ‘ಅಮ್ಮನ ನೆನಪು’ ಕೃತಿಯಲ್ಲಿ ಬರೆದಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ಈ ಕೃತಿಯ ಆಯ್ದಭಾಗ ಇಲ್ಲಿದೆ.
ಸು. ರಂ. ಎಕ್ಕುಂಡಿ ಹುಟ್ಟಿದ್ದು ಜನವರಿ 20, 1923. ಇದು ಅವರ ಜನ್ಮ ಶತಮಾನೋತ್ಸವದ ವರ್ಷ. ಅವರ ಕುರಿತು ಅವರ ಮಗನೇ ಬರೆದ ಒಂದು ಆಪ್ತಚಿತ್ರ.
ಕೇವಲ ನೋಡಿಕೊಳ್ಳವವರು ಬೇಕೋ? ದಾದಿಯರು ಬೇಕೋ? ಆ ಅಂಶದ ಮೇಲೆ ತಿಂಗಳ ವೆಚ್ಚ ನಿರ್ಧಾರವಾಗುತ್ತದೆ. ಹೀಗೆ ಬರುವ ಆರೈಕೆದಾರರಿಗೆ ಮನೆಯಲ್ಲಿಯೇ ಉಳಿಯಲು ಜಾಗ, ತಿಂಡಿ-ಊಟದ ವ್ಯವಸ್ಥೆಯನ್ನು ಕಲ್ಪಿಸುಬೇಕು. ಬರುವ ಆರೈಕೆದಾರರು 8 ಗಂಟೆ ಸೇವೆ ಅಥವಾ 24 ಗಂಟೆ ಸೇವೆಗೆ ಲಭ್ಯವಿರುತ್ತಾರೆ.