ಪ್ಲೇಲಿಸ್ಟ್ನಲ್ಲಿರುವ ಸಂತೋಷದ ಹಾಡುಗಳನ್ನು ಜನ ಅಂದಾಜು 175 ಬಾರಿ ಕೇಳಿದರೆ, ದುಃಖದ ಟ್ಯೂನ್ಗಳನ್ನು ಅಂದಾಜು 800 ಬಾರಿ ಕೇಳುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.
ಡಿ.15ಕ್ಕೆ ಡಾ. ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನದ ಉದ್ಘಾಟನೆ ಹಿನ್ನೆಲೆಯಲ್ಲಿ ಸುಬ್ಬಣ್ಣ ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ ಖ್ಯಾತ ಗಾಯಕಿ ಅರ್ಚನಾ ಉಡುಪ.
ಮುಕ್ತಿನಾಥದಲ್ಲಿರುವ ಈ ವಿಷ್ಣುವಿನ ದೇವಾಲಯವು ಅನ್ನಪೂರ್ಣ ಸಕ್ರ್ಯೂಟ್ನ ಪ್ರಸಿದ್ಧ ಚಾರಣ ಮಾರ್ಗದಲ್ಲಿದೆ. ಹಾಗಾಗಿ ಹೆಜ್ಜೆ ಹೆಜ್ಜೆಗೂ ಚಾರಣಿಗರೂ ಸೈಕ್ಲಿಸ್ಟ್ರೂ ಎದುರಾಗುತ್ತಾರೆ. ಎತ್ತೆಸೆಯುವ ಜೀಪಿನಲ್ಲಿ ಕುಲುಕುವ ಪ್ರಯಾಣದಲ್ಲಿ ನಾವಿದ್ದರೆ ಬೆನ್ನಿಗೆ ಚೀಲ ಕಟ್ಟಿಕೊಂಡು ಚಾರಣಿಗರಿಗೆಂದೇ ಬೆಟ್ಟದಿಂದ ಬೆಟ್ಟಕ್ಕಿರುವ ತೂಗು ಸೇತುವೆಗಳನ್ನು ಬಳಸಿಕೊಂಡು ನಮಗಿಂತ ಮೊದಲೇ ಗಮ್ಯ ಸ್ಥಾನ ಮುಟ್ಟುವ ಅವರನ್ನು ಅವರ ಉತ್ಸಾಹವನ್ನೂ ಮೆಚ್ಚಲೇ ಬೇಕು.
ಪಂಚರಂಗಿ ಅನ್ನೋ ಆನೆಗೆ ಬಪ್ಪಿ ಅನ್ನೋ ಮರಿ ಇದೆ. ಅದೆಷ್ಟುತುಂಟ ಅಂದ್ರೆ, ಬಪ್ಪಿ ಮರಿ ಮಾಡೋ ತುಂಟಾಟಕ್ಕೆ ಅಮ್ಮ ಪಂಚರಂಗಿಗೆ ರಾತ್ರಿ ನಿದ್ದೆನೇ ಬರೋದಿಲ್ಲ. ಕಾಡಿನಮಧ್ಯದ ಹೊಂಡದಲ್ಲಿ ನೀರಾಟ ಆಡಲು ಹೋಗಿ ಕೆಸರಲ್ಲಿ ಸಿಕ್ಕಾಕಿಕೊಳ್ಳೋದು, ಕಾಡಿನ ತುದಿಯಲ್ಲಿದ್ದ ಬೇಲಿಯನ್ನು ತುಳಿಯಲು ಹೋಗಿ ಮೈ ಪರಚಿಸಿಕೊಳ್ಳೋದು, ಸೊಂಡಿಲ ತುಂಬ ನೀರು ತುಂಬಿಸಿಕೊಂಡು ಎದುರು ಸಿಕ್ಕ ಪ್ರಾಣಿಗಳ ಮೇಲೆಲ್ಲ ಎರಚೋದು..
ಜೈಪುರ ಸಾಹಿತ್ಯ ಉತ್ಸವ ದಿನಾಂಕ ಘೋಷಣೆ ಜಗತ್ತಿನ ಖ್ಯಾತನಾಮ ಲೇಖಕರು, ಕವಿಗಳು, ಭಾಷಾಂತರಕಾರರು ಭಾಗಿ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ರಸದೌತಣ
ನಮಸ್ತೆ, ಧನ್ಯವಾದ, ಅಭಿನಂದನೆ, ಅಯ್ಯೋಪಾಪ, ನಕ್ಕೂ ನಕ್ಕೂ ಸಾಕಾಯ್ತು, ಒಳ್ಳೇ ಕೆಲಸ, ತುಂಬಾ ಬೇಜಾರಾಗ್ತಿದೆ- ಮುಂತಾದ ಪದಗಳನ್ನು ನೀವು ಟೈಪ್ ಮಾಡಿ ಯಾವ ಕಾಲವಾಯಿತು. ಈಗ ಅದರ ಬದಲಾಗಿ ಒಂದು ಇಮೋಜಿ ಹಾಕಿದರೆ ಕೆಲಸ ಮುಗೀತು. ಈ ಇಮೋಜಿಗಳ ಜಗತ್ತು ಭಾಷಿಕ ಜಗತ್ತನ್ನೇ ಬದಲಾಯಿಸುವಷ್ಟು
ದೀಪಾವಳಿ- ಇಲ್ಲಿ ದೀಪವಲ್ಲದ್ದು ಏನಿದೆ? ದೇವರಿಗೆ ಪೂಜೆಯಿದೆ. ಬದುಕಿಗೆ ಆಧಾರವಾದ ವಾಣಿಜ್ಯ ಮತ್ತು ಕೃಷಿಯ ಸಂಭ್ರಮವಿದೆ. ಆಟವಿದೆ, ನೋಟವಿದೆ, ಕೂಟವಿದೆ. ಗೆಲುವಿನ ಹೆಮ್ಮೆಯಿದೆ, ಸೋತರೂ ಖುಷಿಯಿದೆ. ಅಣ್ಣ-ತಂಗಿಯರ ಭಾವನಾತ್ಮಕ ಮಿಲನವಿದೆ.
ಖ್ಯಾತ ಬರಹಗಾರ ಜೋಗಿ ಅವರ 75ನೇ ಪುಸ್ತಕ 'ಸಾವು' ರಿಲೀಸ್ ಆಗಿದ್ದು, ಇದು ಸಾವಣ್ಣ ಪ್ರಕಾಶನದ 150 ನೇ ಪುಸ್ತಕವಾಗಿದೆ. ಈ ಪುಸ್ತಕ ಸಾವಿನ ಕುರಿತು 50 ಬರಹಗಳಿರುವ ಸಮಗ್ರ ಬರಹವಾಗಿದೆ. ಬಸವನಗುಡಿಯ ಸಭಾಂಗಣದಲ್ಲಿ ಪುಸ್ತಕ ಲೋಕಾರ್ಪಣೆಯಾಗಿದೆ.
ಬದುಕು ಹೀಗೆ ಬದಲಾಗುತ್ತಾ ಹೋಗುತ್ತದೆ. ಗೆಳೆತನ, ಸಹವಾಸ, ಅಕ್ಕರೆ ಮತ್ತು ಸಂಬಂಧ ತನ್ನ ನೆಲೆಯನ್ನೂ ನಿಲುವನ್ನೂ ಮತ್ತೆ ಮತ್ತೆ ಬದಲಾಯಿಸುತ್ತಾ ಹೋಗುತ್ತದೆ. ಕೆಲವರು ‘ನಾನು ಅಷ್ಟು ಬೇಗ ಸಾಯುವುದಿಲ್ಲ ತಿಳ್ಕೊ’ ಅಂತ ಹೇಳಿ ಹೆದರಿಸುವ ಹಾಗೇ ಮತ್ತೆ ಕೆಲವರು ‘ನಾನು ಸಾಯುತ್ತೇನೆ’ ಅಂತ ಹೇಳಿ ಹೆದರಿಸುತ್ತಾರೆ.
ಗಾಂಧೀಜಿಯವರು ಕೇವಲ ರಾಷ್ಟ್ರನಿರ್ಮಾಪಕರಾಗಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರು ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿದ್ದರು. ನಿರ್ಲಕ್ಷ್ಯ, ತಾತ್ಸಾರಗಳಿಗೆ ಪಾತ್ರವಾಗಿದ್ದ ಭಾರತೀಯ ಭಾಷೆಗಳಿಗೆ ಶಕ್ತಿಯನ್ನೂ, ಆತ್ಮ ಪ್ರತ್ಯಯವನ್ನೂ ತಂದು ಕೊಟ್ಟವರು ಗಾಂಧೀಜಿ ಎಂಬುದನ್ನು ನಾವು ಮರೆಯುವಂತಿಲ್ಲ. ರಾಷ್ಟ್ರದ ರಾಜಕೀಯ ಹಾಗೂ ಅರ್ಥಶಾಸ್ತ್ರಗಳ ಮೇಲೆ ಗಾಂಧೀಜಿಯವರ ಪ್ರಭಾವ ಗಾಢ.