ಜೈಪುರ (ಜ. 29): ಇಡೀ ಜೈಪುರ ಸಾಹಿತ್ಯೋತ್ಸವ ಅಕ್ಷರಗಳ ಮ್ಯಾಜಿಕ್ಕಿನಲ್ಲಿ ಮುಳುಗಿರುವ ಹೊತ್ತಿಗೆ, ಬೆಂಗಳೂರಿನ ಜಾದೂಗಾರ್ ಕೆ ಎಸ್ ರಮೇಶ್ ತಮ್ಮ ಜಾದೂವಿನಿಂದ ಮನಸೆಳೆದರು. ಕಿಕ್ಕಿರಿದ ಪ್ರೇಕ್ಷಕರ ಮುಂದೆ ಅವರು ಪೇಪರ್ ಹರಿದು, ಜೋಡಿಸಿ, ನೋಟು ಕತ್ತರಿಸಿ, ಪುಸ್ತಕದ ಹಾಳೆಯನ್ನು ಹರಿದು ಕೂಡಿಸಿ ಪ್ರೇಕ್ಷಕರ ಚಪ್ಪಾಳೆಭರಿತ ಮೆಚ್ಚುಗೆಗೆ ಪಾತ್ರರಾದರು.

ಜೈಪುರ ಸಾಹಿತ್ಯ ಸಮ್ಮೇಳನದ ವಿಶೇಷತೆಗಳಿವು

ಭಾರತೀಯ ಜಾದೂ ಕುರಿತು ಜಾನ್ ಜುಬೆರ್ಸ್ಕಿ ಬರೆದ ಜಾದೂವಾಲಾಸ್. ಜಗ್ಲರ್ಸ್ ಅಂಡ್ ಜಿನ್ಸ್- ಎ ಮ್ಯಾಜಿಕಲ್ ಹಿಸ್ಟರಿ ಆಫ್ ಇಂಡಿಯಾ ಕೃತಿಯ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ರಮೇಶ್ ತಮ್ಮ ಚುರುಕು ಮಾತು ಮತ್ತು ಪ್ರದರ್ಶನದಿಂದ ಗೋಷ್ಠಿ ಕಳೆಗಟ್ಟುವಂತೆ ಮಾಡಿದರು. ಮೊದಲ ಬಾರಿಗೆ ಈ ಗೋಷ್ಠಿ ನಡೆದ ಸಂವಾದ್ ವೇದಿಕೆ ತುಂಬಿ ತುಳುಕುವುದಕ್ಕೂ ರಮೇಶ್ ಕಾರಣವಾದರು.