ಕುವೆಂಪು, ರಾಮಾಯಣ ದರ್ಶನಂ: ಕುಪ್ಪಳ್ಳಿಯಲ್ಲೊಂದು ಅದ್ಭುತ ಶಿಬಿರ
ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಸುವರ್ಣ ವರ್ಷವಿದು.
ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಸುವರ್ಣ ವರ್ಷವಿದು
ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಮತ್ತು ಅವಿರತ ಪ್ರತಿಷ್ಠಾನ ಬೆಂಗಳೂರು 'ಶ್ರೀ ರಾಮಾಯಣದ ದರ್ಶನಂ' ಕಾವ್ಯ ವಾಚನ, ವ್ಯಾಖ್ಯಾನ, ಉಪನ್ಯಾಸ ಹಮ್ಮಿಕೊಂಡಿತ್ತು.
ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ: ಎಚ್ಚೆಸ್ವಿ
ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ನಾವು ಪ್ರಾಯಶ್ಚಿತ್ತಕ್ಕೆ ಸಿದ್ಧರಾಗಿಲ್ಲವೆಂದರ್ಥ: ಡಾ. ಕೆ ವೈ ನಾರಾಯಣ ಸ್ವಾಮಿ

ಖ್ಯಾತ ಮನೋವೈದ್ಯೆ ಮತ್ತು ನೃತ್ಯ ಕಲಾವಿದೆ ಡಾ. ಪವಿತ್ರ ಅವರು ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ನೃತ್ಯಾನುಸಂಧಾನಕ್ಕೆ ಅಳವಡಿಸಿಕೊಳ್ಳುವ ಸಾಧ್ಯತೆ ಮತ್ತು ಸವಾಲು ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್
ಖ್ಯಾತ ಗಮಕಿಗಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಶ್ರೀ ಚಂದ್ರಶೇಖರ ಕೆದಿಲಾಯ ಶ್ರೀ ಗಣಪತಿ ಪದ್ಯಾಣ ಹಾಗೂ ರಂಗಕರ್ಮಿ ಗಣೇಶ್ ಅವರು ಈ ಮಹಾಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿ ಕಾವ್ಯದ ರಸಾಸ್ವಾದನೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದರು.
ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಹತ್ತು ಹಲವು ದೃಷ್ಟಿ ಕೋನಗಳಿಂದ ಕಲಿಯುವ, ತಿಳಿಯುವ, ಆನಂದಿಸುವ ಬಗೆ, ಸಂಗೀತ, ಗಮಕ, ನೃತ್ಯ ಪ್ರಾತ್ಯಕ್ಷಿಕೆ, ವ್ಯಾಖ್ಯಾನ, ಉಪನ್ಯಾಸದ ಮೂಲಕ ಸಾಹಿತ್ಯದ ಸ್ವಾದ ಸವಿಯುವ ಸದಾವಕಾಶ ಶಿಬಿರಾರ್ಥಿಗಳಿಗಿತ್ತು.
ಶ್ರೀ ತೋಳ್ಪಾಡಿಯವರು ಶ್ರೀ ವಾಲ್ಮೀಕಿ ಮತ್ತು ಶ್ರೀ ಕುವೆಂಪು “ಕಾಡಿನ ಕವಿಗಳು” ಎಂದು ಬಣ್ಣಿಸಿ ಇಬ್ಬರು ಶ್ರೇಷ್ಠ ಕವಿಗಳ ಕಾವ್ಯದ ಪ್ರೇರಣೆ, ಸೋಪಜ್ಞತೆ ಮತ್ತು ಸೃಷ್ಟಿಶೀಲತೆ ಕುರಿತು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.