ಯುದ್ಧವಿದು ಸನ್ಮಾನದಂತೆ ....ಇದರ ಮಾನ ಉಳಿಯಲಿ...
ನಮ್ಮೆಲ್ಲರ ನೆಮ್ಮದಿಗಾಗಿ ಯೋಧರು ಬಲಿದಾನಗೈದಿದ್ದಾರೆ. ಫುಲ್ವಾಮಾ ದಾಳಿಯಲ್ಲಿ ಅಸುನೀಗಿದ ವೀರ ಯೋಧರಿಗಾಗಿ ಎಲ್ಲೆಡೆ ಅಶ್ರುತರ್ಪಣ ಸಲ್ಲಿಸಲಾಗುತ್ತಿದೆ. ಹುತಾತ್ಮರ ಪಾರ್ಥಿವ ಶರೀರಗಳು ಅವರವರ ತವರಿಗೆ ತಲುಪುತ್ತಿದೆ. ಇಂಥ ಸಂದರ್ಭಕ್ಕೆ ಸರಿ ಹೊಂದುವ ಈ 'ಮಣಿಕರ್ಣಿಕಾ' ಚಿತ್ರದ ಭಾವಾನುವಾದ ಇಲ್ಲಿದೆ.....
ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥಿವ ಶರೀರಗಳು ಅವರವರ ತವರಿಗೆ ತಲುಪುತ್ತಿವೆ. ಎಲ್ಲೆಡೆ ಭಾರತೀಯರು ಭಾರವಾದ ಹೃದಯದಿಂದ ವೀರಮರಣವನ್ನಪ್ಪಿದ ಯೋಧರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನಲ್ಲಿಯೂ ಆಕ್ರೋಶ ಉಕ್ಕಿ ಹರಿಯುತ್ತಿದೆ. ಜತೆಗೆ ತಮ್ಮವರನ್ನು ಕಳೆದುಕೊಂಡ ದುಃಖ ಉಮ್ಮಳಿಸುತ್ತಿದೆ.
ಈ ಸಂದರ್ಭದಲ್ಲಿ ಇತ್ತೀಚೆಗೆ ತೆರೆ ಕಂಡ ಬಾಲಿವುಡ್ ಚಿತ್ರ 'ಮಣಿಕರ್ಣಿಕಾ' ಚಿತ್ರದ 'ದೇಶಸೆ ಹೈ ಪ್ಯಾರ್ ತೋ ಹರ್ ಪಲ್ ಏ ಕೆಹೆನಾ ಚಾಹಿಯೇ| ಮೇ ರಹೂ ಯಾ ನಾ ರಹೂ ಭಾರತ್ ಯೇ ರೆಹೆನಾ ಚಾಹಿಯೇ' ಗೀತೆ ಅತ್ಯಂತ ಸೂಕ್ತವೆನಿಸುತ್ತದೆ.
ಈ ಗೀತೆ ಎಲ್ಲದರಂತೆ ಇಲ್ಲ. ಒಮ್ಮೆ ಕೇಳಿದರೆ ಎಂಥವರಲ್ಲೂ ದೇಶಭಕ್ತಿ ಹುಟ್ಟಿಸುತ್ತದೆ. ಶಂಕರ್ ಮಹಾದೇವನ್ ಸಂಗೀತ -ಪ್ರಸೂನ್ ಜೋಷಿ ಸಾಹಿತ್ಯ ಅತ್ಯದ್ಭುತ. ಭಯೋತ್ಪಾದಕರ ದಾಳಿಗೆ ಭಾರತೀಯ ಯೋಧರು ಬಲಿದಾನಗೈದಿದ್ದು, ಈ ಹಾಡನ್ನು ಒಮ್ಮೆ ಕಣ್ಮುಚ್ಚಿ ಕೇಳಿದರೆ ದೇಶಭಕ್ತಿಯ ಭಾವ ಮತ್ತಷ್ಟು ಜಾಗೃತವಾಗಿ ಎದೆ ತುಂಬಿ, ಕಣ್ಣುಗಳಲ್ಲಿ ಹನಿಯಾಗಿ ಹೊರಹೊಮ್ಮುವುದು ಶತಸಿದ್ಧ!
ಈ ಗೀತೆಯನ್ನು ಶಿವಮೊಗ್ಗ ವಿನಯ್ ಅವರು ಕನ್ನಡಕ್ಕೆ ಅನುವಾದಿಸಿ, ಸಂಗೀತ ಸಂಯೋಜಿಸಿ ತಮ್ಮ ತಂಡದೊಂದಿಗೆ ಹಾಡಿದ್ದಾರೆ. ಇದರ ಭಾವನುವಾದವನ್ನು ಕೇಳಿ. ಸನ್ಮಾನವೆಂದು ಭಾವಿಸಿ, ಯುದ್ಧ ಮಾಡಿ ಹುತಾತ್ಮರಾದ ವೀರ ಯೋಧರಿಗೆ ಅಶ್ರುತರ್ಪಣ ಸಲ್ಲಿಸೋಣ. ದೇಶಭಕ್ತಿ ಶಕ್ತಿಯಾಗಲಿ, ಎತ್ತರೆತ್ತರ ಬೆಳೆಯುವಂತಾಗಲಿ....
ದೇಶವೆಂದು ಪ್ರೀತಿ ಇದ್ದರೆ ಪ್ರತಿ ಕ್ಷಣವೂ ಹೇಳು ನೀ......
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ......
ನನ್ನ ನಂತರ ಈ ಪರಂಪರೆ ಹೀಗೆ ಮುಂದೆ ಸಾಗಲಿ.....
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ......
ನನ್ನ ನರ ನರ ತಂತಿಯಾಗಲಿ ವೀಣೆ ಶೃತಿಯ ಮೀಟಲಿ.....
ರಾಗ ಭಾರತಿ ನಾನು ನುಡಿಯಲಿ ಮಧುರ ನಾದ ಮೊಳಗಲಿ....
ದೇಶಪ್ರೇಮದ ಈ ಭಾವ ನಮ್ಮ ಕಣ್ಣಲಿ ಬೆಳಗಲಿ........
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ......
ಶತ್ರುಗಳಿಗೆ ಹೇಳು ನೀ ಗಡಿಯ ಗೌರವ ಕಲಿಯಲಿ.....
ನನ್ನ ಭಾರತ ಅದು ಅಮರ ಈ ಸತ್ಯ ನಿರಂತರ.....
ದೇಶಭಕ್ತಿಯು ಶಕ್ತಿಯಾಗಲಿ ಎತ್ತರೆತ್ತರ ಬೆಳೆಯಲಿ......
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ......
ಹೇ ಭಾರತಿ ನಿನ್ನ ಆಣೆ......
ಒಂದೂ ಕ್ಷಣವೂ ಮರೆಯೆನೂ......
ರಕ್ತದ ಪ್ರತಿ ಹನಿಯೂ ನಿನ್ನದೇ ನಿನಗೇ ತಾಯಿ ಅರ್ಪಣೆ....
ಯುದ್ಧವಿದು ಸನ್ಮಾನದಂತೆ ....ಇದರ ಮಾನ ಉಳಿಯಲಿ...
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ......
ಅನುವಾದ- ವಿನಯ್ ಶಿವಮೊಗ್ಗ.