ವಿ. ಬಾಲಕೃಷ್ಣ ಶಿರ್ವ

ಮನೆಯ ಬಲಭಾಗದಲ್ಲಿ ವೈವಿಧ್ಯಮಯ ಹಲಸು, ಮಾವು, ಕಸಿಕಟ್ಟಿದ ಮಾವು ಬದಿಯಲ್ಲಿ ಅನೇಕ ಜಾತಿಯ ವಿದೇಶಿ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಮಧ್ಯದಲ್ಲಿ ಅನೇಕ ಗೇರುಹಣ್ಣಿನ ತಳಿಗಳಿವೆ. ಇವರ ತೋಟದಲ್ಲಿರುವ ಹಲವು ವೆರೈಟಿಗಳು ಹುಬ್ಬೇರಿಸುವಂತಿದೆ. ಸದಾನಂದ ಹಲಸು, ಥೈಲ್ಯಾಂಡ್‌ ಎಲ್ಲೊ, ಸಂಪಡಕ್‌ ರೆಡ್‌, ಸಂಪಿಗೆ ಬಕ್ಕೆ, ಥೈಲ್ಯಾಂಡ್‌ ರೆಡ್‌, ಇಡೀ ಸೊಳೆ ಕರಿಯ ಹಲಸು, ಕಸಿ ಕಟ್ಟಿಬೆಳೆದ ಹಿಂಡೂಮನೆ ಹಲಸು ಇತ್ಯಾದಿ ಹಲಸಿನ ತಳಿಗಳು. ಮಾವಿನಲ್ಲಿ ಟೀ ಮಲ್ಯ ಮಾವು, ಕಪ್ಪು ಮಾವು, ಬಳಂಜ ಮಾವು, ಗೋಲ್ಡನ್‌ ಮಾವು, ಮಲ್ಲಿಕಾ, ತೋತಾಪುರಿ, ನೀಲಮ್‌, ಬಾದಾಮ್‌, ಅಪ್ಪೆಮಿಡಿ ಮಾವು, ಪಲ್‌ಮಾರ್‌ ಮಾವು ಮಿಡಿಯಂಥ ಹಲವು ವೆರೈಟಿಗಳಿವೆ.

ಜೇನು ಕೃಷಿಯಲ್ಲಿ ಕೋಟ್ಯಂತರ ರುಪಾಯಿ ದುಡಿದ ಶಿರಸಿ ಮಧುಕೇಶ್ವರ ಹೆಗಡೆ!

ಹಣ್ಣಿನ ತೋಟಕ್ಕೆ ಪ್ರೇರಣೆ ಏನು?

ಐದು ವರ್ಷಗಳ ಹಿಂದೆ ರಾಜೇಂದ್ರ ಅವರು ವೇಣೂರಿನ ಹತ್ತಿರದ ಬಳಂಜದ ಅನಿಲ್‌ ಅವರ ಹಣ್ಣಿನ ತೋಟಕ್ಕೆ ಭೇಟಿ ನೀಡಿದರು. ಅಲ್ಲಿ ದೇಶ ವಿದೇಶದ ಹಣ್ಣಿನ ತಳಿಗಳಿದ್ದವು. ಅದರಿಂದ ಪ್ರೇರಿತರಾಗಿ ಇವರೂ ಹಲವು ದೇಶ ವಿದೇಶದ ಹಣ್ಣುಗಳ ಗಿಡ ನೆಡಲಾರಂಭಿಸಿದರು. ಪರಿಣಾಮ ಇಂದು ಇವರ ತೋಟ ನೂರಾರು ಬಗೆಯ ಹಣ್ಣುಗಳಿಂದ ತುಂಬಿವೆ.

ಕೆಲವು ಮಾರಾಟಗಾರರು ಅಪರೂಪದ ಹಣ್ಣಿನ ಗಿಡಗಳಿಗೆ 7000 ರು.ಗಳಷ್ಟುಬೆಲೆ ಹೇಳುತ್ತಾರಂತೆ. ಇದು ದುಬಾರಿ ಅನಿಸಿದರೂ ಹಣ್ಣಿನ ಗಿಡದ ಖರೀದಿಸುತ್ತಾರೆ. ಬಳಿಕ ತಾವೇ ಕಸಿಕಟ್ಟಿಗಿಡ ಮಾಡುತ್ತಾರೆ. ಆಸಕ್ತರಿಗೆ ನ್ಯಾಯಯುತ ದರದಲ್ಲಿ ಮಾರಾಟ ಮಾಡುತ್ತಾರೆ.

ನಿಮ್ಮ ಜಾನುವಾರುಗಳು ಆರೋಗ್ಯಕರವಾಗಿರಲು ಕೆಲವು ಸಲಹೆಗಳು!

ಕ್ಯಾನ್ಸರ್‌ಗೆ ಪರಿಣಾಮಕಾರಿ ಮದ್ದು ಎಂದು ಸಂಶೋಧಕರು ಸಾದರಪಡಿಸಿದ ಸೋರ್‌ಸೂಪ್‌, ಎಗ್‌ಫä›ಟ್‌ ಇತ್ಯಾದಿ ಹಣ್ಣುಗಳು ಬಾಯಲ್ಲಿ ನೀರೂರಿಸುವಂತಿವೆ. ಕೆಲವು ಆಕರ್ಷಣೀಯ ಹಣ್ಣುಗಳಾದ ಮೆಕೆಡೆಮಿಯಾ, ಲಾಂಗ್‌ ಸಾಟ್‌, ಅಭಿಯೂ, ಮಿರಾಕಲ್‌ ಫä›ಟ್‌, ಕಿವಿಫä›ಟ್‌, ಕೆಂಪಾದ ಗ್ಯಾಕ್‌ ಫä›ಟ್‌ ಗಳೆಲ್ಲ ನಾವು ಈವರೆಗೆ ನೋಡದ ಹಣ್ಣಿನ ಗಿಡಗಳು. ಡ್ರಾಗನ್‌ಫä›ಟ್‌, ಸೀಡ್‌ಲೆಸ್‌ ನೇರಳೆ ಕ್ಯಾಟ್‌ ಫä›ಟ್‌, ಬೃಹತ್ತಾದ ಮಿಲ್‌್ಕಫä›ಟ್‌, ಪ್ಲಮ್‌, ಅಕ್ರೂಟ್‌ ಆಫ್ರಿಕನ್‌ ಪಿಸ್ತಾ, ಚಿಂಗಾಮ್‌ ಹಣ್ಣು (ಚಿಂಗಾಮ್‌ನಂತೆ ಅಗಿದು ತಿನ್ನುವ ಹಣ್ಣು), ಬ್ಲಾಕ್‌ಬೆರ್ರಿ, ಸಿಹಿಕಂಚಿ, ಬೇರ್‌ ಆ್ಯಪಲ್‌ (ಕೆಂಪು), ಲಾಂಗ್‌ ಆನ್‌, ಪೆಪಿನೋ ಇತ್ಯಾದಿ ಹಣ್ಣಿನ ಗಿಡಗಳು ಬೆರಗುಗೊಳಿಸುತ್ತವೆ.

ಇವುಗಳಲ್ಲದೆ ಬಾಳೆಯಲ್ಲಿ ಬೃಹತ್ತಾದ ಗೊನೆ ಕೊಡುವ ಸಹಸ್ರಬಾಳೆ (ಒಂದು ಗೊನೆಯಲ್ಲಿ ಸಾವಿರ ಬಾಳೆ ಇರುತ್ತದೆ ಎಂಬುದು ಪ್ರತೀತಿ, ಒಂದು ಗೊನೆ 45ಕೆ.ಜಿ. ತೂಗುತ್ತೆ ಉತ್ತಮ ರುಚಿಕರದಾಯಕ), ಉದಯಂ (ಇದರ ಸಿಪ್ಪೆ ತೆಗೆದು ಒಣಸಲಿಕ್ಕೆ ಡ್ರೈಯರ್‌ನಲ್ಲಿ ಇರಿಸುತ್ತಾರೆ), ನೇಂದ್ರಬಾಳೆ, ವಾಜ್‌ ಬಾಳೆ, ಕೆಂಬಾಳೆ, ಕೆಂದಾಳಿ ತಳಿಗಳಿವೆ. ಎದುರುಗಡೆ ಇರುವ ಅಡಿಕೆ ತೋಟದಲ್ಲಿ ಕಾಳುಮೆಣಸು ಗೊಂಚಲುಗಳು ತೂಗಾಡುತ್ತವೆ. ಸ್ಟ್ರಾಬೆರಿ, ದಾಲ್ಚಿನಿ, ಲವಂಗ, ಜಾಯಿಕಾಯಿಗಳೂ ಜೊತೆಗಿವೆ.

ಇವರ ತೋಟದ ಪಕ್ಕದಲ್ಲಿ ಬೃಹತ್‌ ಕಾಡಿದೆ. ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಅದರ ಮುಂಭಾಗದಲ್ಲಿ ಹತ್ತು ಹಲವು ಬಿದಿರಿನ ಪ್ರಭೇದಗಳಿವೆ. ಬರ್ಮಾ, ಬಣ್ಣದ ಬಿದಿರು, ಮುಳ್ಳಿಲ್ಲದ ಬಿದಿರು, ಕ್ಷಮೆ ಇತ್ಯಾದಿ ಬಿದಿರುಗಳು. ಎಲೆ ಕಾಣದಂತೆ ತುಂಬಿಕೊಂಡಿರುವ ಚಟ್ನಿ ಲಿಂಬೆಯ ರುಚಿಯೂ ಸಾಟಿಯಿಲ್ಲದ್ದು.

35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್‌!

ಹಳದಿ ಟೊಮ್ಯಾಟೊ, ಕಾಟ್‌ ಪೀರೆ, ಅನೆಕೊಂಬಿನಂತಿರುವ ಬೆಂಡೆ, ಕಾನಕಲ್ಲಟ (ಇದು ವರ್ಷವಿಡೀ ಇಳುವರಿ ಕೊಡುತ್ತಲೇ ಇರುತ್ತದೆ) ಕಾಡುಪೀರೆ ಮಂಗಳೂರಿನಲ್ಲಿ ಕೆ.ಜಿ.ಗೆ 200/-ರೂ. ನಂತೆ ಮಾರಾಟ ಮಾಡುತ್ತಾರೆ. ಇದನ್ನು ಪಲ್ಯ, ಸಾಂಬಾರು, ಗೊಜ್ಜು ಮಾಡಬಹುದಾಗಿದೆ. ಅಂಗಳದ ಎದಿರು ಭಾಗದಲ್ಲಿರುವ ದ್ರಾಕ್ಷಿ ಗೊಂಚಲು, ಕೆಂಪಾದ ಬೃಹತ್ತಾದ ಮುಕ್ಕೋತದೇವ, ಸೋರ್‌ಸೂಪ್‌ ಇದೆ. ಹೆಚ್ಚಿನ ಮಾಹಿತಿಗೆ : 8722129090 ಗೆ ಕರೆ ಮಾಡಬಹುದು.