Asianet Suvarna News Asianet Suvarna News

ಅಮೇರಿಕಾದಲ್ಲಿ ಉಡುಪಿಕೃಷ್ಣ ಕಲರವ- ಪುತ್ತಿಗೆ ಶ್ರೀ ಚಾತುರ್ಮಾಸ್ಯ ವೃತಾರಂಭ

ಉಡುಪಿ‌ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಅಮೇರಿಕಾದಲ್ಲಿ ವೃತ ಆರಂಭಿಸಿದ್ದಾರೆ. ಅಮೆರಿಕದ ಸ್ಯಾನ್ ಹೋಸೆ ನಗರವು ಈ ಬಾರಿ ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ ವಿಶೇಷ ಮತ್ತು ಅನೇಕ ದೈವಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ

Udupi shrikrishna matt Puttige shree Chaturmasya in America rav
Author
Bangalore, First Published Aug 3, 2022, 4:27 PM IST

ಬೆಂಗಳೂರು (ಆ.3) : ಇದು ಮಠಾಧೀಶರ ಚಾತುರ್ಮಾಸ್ಯ ಕಾಲ. ಉಡುಪಿಯ ಅಷ್ಟ ಮಠಾಧೀಶರು ದೇಶದ ನಾನಾ ಭಾಗಗಳಲ್ಲಿ ವೃತ ಕೈಗೊಂಡಿದ್ದಾರೆ. ವಿದೇಶಯಾನ ಮತ್ತು ಧರ್ಮಪ್ರಚಾರದ ಮೂಲಕ ಧಾರ್ಮಿಕ ಕ್ರಾಂತಿ ಮಾಡಿರುವ ಉಡುಪಿ‌ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಅಮೇರಿಕಾದಲ್ಲಿ ವೃತ ಆರಂಭಿಸಿದ್ದಾರೆ. ಅಮೆರಿಕದ ಸ್ಯಾನ್ ಹೋಸೆ ನಗರವು ಈ ಬಾರಿ ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ ವಿಶೇಷ ಮತ್ತು ಅನೇಕ ದೈವಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಸಂಸ್ಥಾನವಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ   ಶ್ರೀ ಸುಗುಣೇದ್ರ ತೀರ್ಥ ಶ್ರೀಪಾದಂಗಳವರ  ಚಾತುರ್ಮಾಸ್ಯದ ವ್ರತ ಸಂಕಲ್ಪ ಅಮೇರಿಕಾದಲ್ಲಿನ ಕೃಷ್ಣ ಭಕ್ತರನ್ನು ರೋಮಾಂಚನಗೊಳಿಸಿದೆ. 

Udupi; ಅಮೇರಿಕಾದ ಆಸ್ಟಿನ್ ನಗರದಲ್ಲಿ ಪುತ್ತಿಗೆ ಶ್ರೀಗಳಿಂದ ಮುದ್ರಾಧಾರಣೆ

ಚಾತುರ್ಮಾಸ್ಯ ವೃತದ ಅಂಗವಾಗಿ ಆಸ್ತಿಕ ಭಕ್ತರರೆಲ್ಲರೂ ತಾಳ ತಾಂಬೂರಿಯೊಡನೆ, ಶ್ರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಅಲಮೇಡಾ ಮುಖ್ಯ ರಸ್ತೆಯಲ್ಲಿ ಸಾಗಿಬಂದರು.  ಶ್ರೀ ವಿಠಲನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಶ್ರೀ ಕೃಷ್ಣ ಬೃಂದಾವನ ಕ್ಷೇತ್ರಕ್ಕೆ ಈ ಧಾರ್ಮಿಕ ಮೆರವಣಿಗೆ ಸಾಗಿಬಂತು. ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನಿಗದಿತ ಸ್ಥಳಗಳಲ್ಲಿ ಮೆರವಣಿಗೆಯನ್ನು ಮಾಡುತ್ತ ಶ್ರೀ ಕ್ಷೇತ್ರವನ್ನು ತಲುಪಿದಾಗ,  ಅವರನ್ನು ಪೂರ್ಣ ಕುಂಭದಿಂದ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. 

ದಾರಿ ಉದ್ದಕ್ಕೂ ಹೆಣ್ಣು ಮಕ್ಕಳ ಕೋಲಾಟ,  ದಾಸರ ಪೋಷಕಗಳನ್ನು ಧರಿಸಿದ್ದ ಭಕ್ತಾದಿಗಳಿಂದ ಮಿನಿ ಭಾರತವೇ ಇಲ್ಲಿ ಸೃಷ್ಟಿಯಾಯ್ತು. ನೋಡುಗರಿಗೆ ಉಡುಪಿಯ ರಥಬೀದಿ ಮೆರವಣಿಗೆ ಯಂತೆ ಭಾಸವಾಯ್ತು. ದೀಪ ಪ್ರಜ್ವಲನೆಯಿಂದ  ಕಾರ್ಯಕ್ರಮ ಪ್ರಾರಂಭವಾಯ್ತು, ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಕೇಶವರಾವ್ ತಾಡಪತ್ರಿ ಹಾಗೂ  ವಿಜಯ ಪುಲ್ಲೂರ್ ಅವರು ಚಾತುರ್ಮಾಸ್ಯ ವೃತ ಕೈಗೊಂಡ ಶ್ರೀಗಳನ್ನು ಅಭಿನಂಧಿಸಿ ಮಾತನಾಡಿದರು. 

Puttige mutt in America | ಅಮೆರಿಕಾದಲ್ಲಿ ಸ್ಥಾಪನೆಯಾಯ್ತು ಪುತ್ತಿಗೆ ಶಾಖಾಮಠ

ನಂತರ ಅನುಗ್ರಹ ಸಂದೇಶವನ್ನು ನೀಡಿದ ಶ್ರಿ ಸುಗುಣೇಂದ್ರ ತೀರ್ಥರು , ಚಾತುರ್ಮಾಸ್ಯದ ಮಹತ್ವವನ್ನು ಜನರಿಗೆ ತಿಳಿಹೇಳಿ , ತಾವು ಸ್ಯಾನ್ ಹುಸೇ ನಗರಕ್ಕೆ ಬಂದಾಗೆಲ್ಲ ತವರು ಮನೆಗೆ ಬಂದಂತೆ ಆಗುತ್ತದೆ ಎಂಬ ಅನುಭವವನ್ನು ಹಂಚಿಕೊಂಡರು.  ಮತ್ತು ಮುಂದಿನ 45 ದಿನಗಳ ಕಾಲ ವೃತಾವಧಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಮತ್ತು ಯೋಜನೆಗಳ ರೂಪುರೇಷೆಗಳನ್ನು ತಿಳಿಸಿದರು.

ಪಂಚದಾದ್ಯಂತ 108 ಕೃಷ್ಣನ ದೇವಾಲಯಗಳನ್ನು ನಿರ್ಮಿಸಬೇಕೆಂಬ ತಮ್ನ ಇಚ್ಛೆಯನ್ನು ಭಕ್ತರೊಂದಿಗೆ ವ್ಯಕ್ತಪಡಿಸಿದರು. 
ವಾತಾವರಣ ದೈವಿಕವಾಗಿತ್ತು. ಕಾರ್ಯಕ್ರಮವು ಎಂದಿನಂತೆ ತೊಟ್ಟಿಲು ಪೂಜೆ ಇಂದ ಸಮಾಪ್ತಿಯಾಯಿತು. 

ಭಕ್ತಾದಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ  ಆನಂದವನ್ನು ಅನುಭವಿಸಿ,  ಭಕ್ತಿ ಸಾಗರದಲ್ಲಿ ಮಿಂದೆದ್ದರು.  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ಸ್ಯಾನ್ ಹೋಸೆಯ ಸಾರ್ಜೆಂಟ್ ಆಂಥೋನಿ ಕಿಲ್ಮರ್, ಲೆಫ್ಟಿನೆಂಟ್ ಪೌಲ್ ಹಾಂಬ್ಲಿನ್ ಹಾಗೂ ಸಮುದಾಯದ ಸೇವಾ ಆಫೀಸರ್ ಆದ ಕನಕ ಗುರುಪ್ರಸಾದ್ ಅವರನ್ನು ಪುತ್ತಿಗೆ ಮಠಾಧೀಶರು ಸನ್ಮಾನಿಸಿದರು.

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪುತ್ತಿಗೆ ಸ್ವಾಮೀಜಿ ಮುಂದಿನ ಪರ್ಯಾಯ ಸೇವೆಯನ್ನು ನಡೆಸಿಕೊಡಲಿದ್ದಾರೆ. ಈಗಾಗಲೇ ಪೂರ್ವಭಾವಿ ಮುಹೂರ್ತಗಳಿಗೆ ತಯಾರಿ ಆರಂಭವಾಗಿದೆ. ಪರ್ಯಾಯಕ್ಕೂ ಮುನ್ನ ನಡೆಯುವ ಈ ಚಾತುರ್ಮಾಸ್ಯ ವೃತ ಅತ್ಯಂತ ವೈಭವದಿಂದ ಜರುಗುತ್ತಿದೆ.

Follow Us:
Download App:
  • android
  • ios