ಬೆಂಗಳೂರಿನ ಚಿಂದಿ ಆಯುವಾಕೆಯ ಇಂಗ್ಲೀಷ್‌ಗೆ ನೆಟ್ಟಿಗರು ಫಿದಾ, ವೈರಲ್ ಆಯ್ತು ವಿಡಿಯೋ!
* ಬೆಂಗಳೂರಿನ ಚಿಂದಿ ಆಯುವ ಮಹಿಳೆಯ ವಿಡಿಯೋ ವೈರಲ್
* ಚಿಂದಿ ಆಯುವ ಮಹಿಳೆಯ ಇಂಗ್ಲೀಷ್ ಕೇಳಿ ನೆಟ್ಟಿಗರಿಗೆ ಅಚ್ಚರಿ
* ವಿಡಿಯೋ ವೈರಲ್, ಮಹಿಳೆ ರಾತ್ರೋ ರಾತ್ರಿ ಫೇಮಸ್
ಬೆಂಗಳೂರು(ಆ,19): ಬೆಂಗಳೂರಿನ ಚಿಂದಿ ಆಯುವ ಮಹಿಳೆಯೊಬ್ಬರು ತಮ್ಮ ಇಂಗ್ಲೀಷ್ ಮಾತುಗಾರಿಕೆಯಿಂದ ರಾತ್ರೋ ರಾತ್ರಿ ಫೇಮಸ್ ಆಗಿದ್ದಾರೆ. ಹೌದು ಇಂಗ್ಲೀಷ್‌ನಲ್ಲಿ ಪಟ ಪಟನೇ ಮಾತನಾಡುವ ಈ ಮಹಿಳೆ ಕೇಳಿದ ಪ್ರಶ್ನೆಗೆಲ್ಲಾ ಅದೇ ಭಾಷೆಯಲ್ಲಿ ಉತ್ತರಿಸಿದ್ದಾರೆ. ಇವರು ಇಂಗ್ಲೀಷ್‌ನಲ್ಲಿ ಮಾತನಾಡಿದ ಶೈಲಿ ನೆಟ್ಟಿಗರಿಗೆ ಭಾರೀ ಹಿಡಿಸಿದ್ದು, ಸದ್ಯ ಸೋಧಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಸಿಸಿಲಿಯಾ ಮಾರ್ಗರೇಟ್ ಲಾರೆನ್ಸ್ ಎಂದು ಗುರುತಿಸಲಾಗಿದೆ.
ಶಚಿನಾ ಹೆಗ್ಗಾರ್ ಅವರ ಹೆಸರಿನ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಕೇಳಿದ ಪ್ರಶ್ನೆಗೆಲ್ಲಾ ಇಂಗ್ಲೀಚಷ್‌ನಲ್ಲೇ ಉತ್ತರಿಸಿದ್ದಾರೆ. ಸಿಸಿಲಿಯಾರವರು ತಾನು 2007-14ವರೆಗೆ, ಏಳು ವರ್ಷ ಜಪಾನ್‌ನಲ್ಲಿದ್ದೆ ಎಂದಿದ್ದಾರೆ. ಮಾತುಕತೆ ನಡುವೆ ಸಿಸಿಲಿಯಾ ಮಧುರವಾದ ಹಾಡೊಂದನ್ನೂ ಹಾಡಿದ್ದಾರೆ.
ಇನ್ನು ಈ ವಿಡಿಯೋ ಪೋಸ್ಟ್ ಮಾಡಿರುವ ಹೆಬ್ಬಾರ್ 'ಕಥೆಗಳು ಯಾವಾಗಲೂ ನಿಮ್ಮ ಸುತ್ತಮುತ್ತ ಇರುತ್ತವೆ. ಆದರೆ ಒಂದು ಕ್ಷಣ ನಿಂತು ಸುತ್ತಲೂ ನೋಡಬೇಕಾದ ಅಗತ್ಯವಿದೆ. ಕೆಲವೊಮ್ಮೆ ಸುಂದರ ಹಾಗೂ ಕೆಲವು ನೋವಿನ, ಆದರೆ ಹೂವುಗಳಿಲ್ಲದ ಜೀವನವಿಲ್ಲ' ಎಂದು ಬರೆದಿದ್ದಾರೆ.
ಚಿಂದಿ, ಪ್ಲಾಸ್ಟಿಕ್ ಆಯುತ್ತಿದ್ದ ಈ ಮಹಿಳೆಯನ್ನು ಮಾತನಾಡಿಸಿ, ಇಂತಹ ಅದ್ಭುತ ಪ್ರತಿಭೆಯನ್ನು ಪರಿಚಯಿಸಿದ ಹೆಬ್ಬಾರ್‌ರವರಿಗೆ ನೆಟ್ಟಿಗರು ಧನ್ಯವಾದ ಎಂದಿದ್ದಾರೆ.