ಈ ಸ್ಟೋರಿ ನೋಡಿದ ಯಾರಿಗಾದರೂ ಅಕ್ಷರಶಃ ಗಾಬರಿಯಾಗಬಹುದು. ನೀವು ವೆಜ್ ಅಂದುಕೊಂಡು ತಿನ್ನುವ ಹಲವು ಆಹಾರಗಳು ನಾನ್ ವೆಜ್ ಆಗಿರುತ್ತವೆ. ಇದಕ್ಕೆ ಪುಷ್ಠಿ ನೀಡುವ ವರದಿ ಇಲ್ಲಿದೆ ನೋಡಿ.

CLICK HERE.. ನಿತ್ಯ ಬೆಳಗ್ಗೆ ಎದ್ದ ಕೂಡಲೇ ಗುಹೆಗೆ ಹೋಗುತ್ತಿದ್ದ ಾವ್ಯಕ್ತಿ 25 ವರ್ಷದಲ್ಲಿ ಅದ್ಬುತ ಸೃಷ್ಟಿಸಿದ್ದ..!

ಸಕ್ಕರೆ: ಕಬ್ಬಿನಿಂದ ತಯಾರಾಗುವ ಸಕ್ಕರೆ ಅಪ್ಪಟ ವೆಜಿಟೇರಿಯನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದು ಸಕ್ಕರೆಯಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯಲ್ಲಿ ನಾನ್ ವೆಜ್ ಆಗುತ್ತದೆ. ಸಕ್ಕರೆಯನ್ನ ಕಾರ್ಖಾನೆಯಲ್ಲಿ ಕ್ಲೀನಿಂಗ್ ಪ್ರಕ್ರಿಯೆ ನಡೆಸುವಾಗ ಸ್ವಾಭಾವಿಕ ಕಾರ್ಬನ್ ಅನ್ನ ಬಳಸಲಾಗುತ್ತದೆ. ಈ ನೈಸರ್ಗಿಕ ಕಾರ್ಬನ್ ಸುಟ್ಟ ಪ್ರಾಣಿಗಳ ಮೂಳೆಯಿಂದ ತಯಾರಾಗುತ್ತದೆ.

ಫ್ರೆಂಚ್ ಫ್ರೈಸ್: ಬಾಯಿಗೆ ಹಿತವಾಗಿದೆ ಎಂದು ಮಾಡ್ರನ್ ಔಟ್‘ಲೆಟ್‘ಗಳಲ್ಲಿ ಸವಿಯುವ ಫ್ರೆಂಚ್ ಫ್ರೈಸ್‘ಗಳು ವೆಜ್ ಅಲ್ಲವಂತೆ. ಇವುಗಳನ್ನ ಫ್ರೈ ಮಾಡಲು ಫ್ಯಾಕ್ಟರಿಗಳಲ್ಲಿ ದನದ ಕೊಬ್ಬನ್ನ ಬಳಸಲಾಗುತ್ತಂತೆ.

ಚೀಸ್: ಪ್ರೋಟಿಣ್ ಮತ್ತು ವಿಟಮಿನ್ ಆಗರವಾದ ಚೀಸ್ ಅನ್ನ ಅತಿಹೆಚ್ಚು ಜನ ಸೇವಿಸುತ್ತಾರೆ. ಇದರಲ್ಲಿರುವ ರೆನೆಟ್ ಎಂಬ ಅಂಶ ಪ್ರಾಣಿಗಳ ಕರುಳಿನಿಂದ ಬಂದಿರುತ್ತಂತೆ.

ಬ್ರೆಡ್: ಹಾರ್ಟ್ ಹೆಲ್ದಿ ಎಂದೇ ಕರೆಯಲಾಗಿರುವ ಬ್ರೆಡ್ ತಯಾರಿಕೆಯಲ್ಲೂ ಮೀನಿನೆಣ್ಣೆ ಬಳಸಲಾಗುತ್ತಂತೆ.

ಕೃಪೆ: ಡೈಲಿ ಭಾಸ್ಕರ್