ಮನಿ ಪ್ಲಾಂಟ್ ಕದ್ದು ಹಚ್ಚಿದರೆ ಅದೃಷ್ಟ ಮತ್ತು ಧನಲಾಭ ಎಂಬ ಮಾತು ಜನಜನಿತವಾಗಿದೆ. ಅದರಲ್ಲೂ ಶ್ರೀಮಂತರ ಮನೆಯಿಂದ ಕದ್ದರೆ ಹೆಚ್ಚು ಶುಭ ಎಂದು ಅನೇಕರು ನಂಬುತ್ತಾರೆ.
ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ನಂಬಿಕೆ ಎಷ್ಟು ಸರಿ ಎಂಬ ಮಾಹಿತಿ ಇಲ್ಲಿ ನೋಡಿ.
ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮನಿ ಪ್ಲಾಂಟ್ ಎಂದಿಗೂ ಕದ್ದು ಹಚ್ಚಬಾರದು. ಕಳ್ಳತನವು ಒಂದು ತಪ್ಪು ಕೆಲಸವಾದ್ದರಿಂದ, ಹೀಗೆ ತಂದ ಗಿಡವು ಧನಾತ್ಮಕ ಶಕ್ತಿಯ ಬದಲು ಋಣಾತ್ಮಕ ಶಕ್ತಿ ಹರಡುತ್ತದೆ.
ಈ ಗಿಡವನ್ನು ಹಣ ನೀಡಿ ಖರೀದಿಸಿ ಹಚ್ಚುವುದು ಅತ್ಯಂತ ಶುಭ. ಇದರಿಂದ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ.
ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ಗಿಡವನ್ನು ಹಚ್ಚುವುದು ಉತ್ತಮ.
ಆರ್ಥಿಕ ಸಮೃದ್ಧಿಗಾಗಿ ಮನಿ ಪ್ಲಾಂಟ್ ಅನ್ನು ಶುಕ್ರವಾರದ ದಿನ ಹಚ್ಚುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಮನಿ ಪ್ಲಾಂಟ್ ಅನ್ನು ಮನೆಯ ಆಗ್ನೇಯ (South-East) ದಿಕ್ಕಿನಲ್ಲಿ ಇರಿಸುವುದು ವಾಸ್ತು ಪ್ರಕಾರ ಅತ್ಯಂತ ಲಾಭದಾಯಕ.
Meenakari Anklet: ಕಾಲಿಗೆ ಕಲರ್‌ಫುಲ್ ಶೈನ್ ನೀಡಿ, ಕಡಿಮೆ ದುಡ್ಡಲ್ಲಿ ರಾಯಲ್ ಲುಕ್ ಪಡೀರಿ
ಹೋಟೆಲ್‌ನಲ್ಲಿ ಅದೊಂದು ಸೀಕ್ರೇಟ್ ಪದಾರ್ಥ ಹಾಕೋದಕ್ಕೆ ಈರುಳ್ಳಿ ದೋಸೆ ರುಚಿಯಾಗೋದು
ಆ ನೀರು ಹಾಕಿ ಸಾಕು, ಎಲೆ ಕಾಣದಷ್ಟು ಪಾಟ್‌ನಲ್ಲೇ ವರ್ಷವಿಡೀ ಮಲ್ಲಿಗೆ ಬಿಡುತ್ತೆ!
ಕ್ರಿಯೇಟಿವಿಟಿ ಅಂದ್ರೆ ಇದು! ಹಳೆ, ಹರಿದ ಶೂ-ಬೂಟುಗಳಿಂದ 8 ಬಗೆಯ ಪ್ಲಾಂಟರ್ ಮಾಡಿ