ಸಿಂಡ್ರೆಲ್ಲಾ ಶೂಸ್ ಕಥೆ ಕೇಳಿ ಬೆಳೆದ ನಮಗೆ, ಆ ಶೂಸ್ ನೋಡದೇ ಹೋದರೂ, ಅದರ ಸೌಂದರ್ಯದ ಕಲ್ಪನೆಯೇ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಈಗೀಗ ಫ್ಯಾಷನ್ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಫ್ಯಾಷನ್ ಹೆಸರಲ್ಲಿ ಬೆಲೆಯೂ ದುಬಾರಿಯಾಗುತ್ತಿದೆ. ಗಾಗಲ್ಸ್, ಬಟ್ಟೆ, ಶೂಸ್...ಎಲ್ಲವೂ ವಿಭಿನ್ನ ಮಾದರಿಯಲ್ಲಿ, ವಿಭಿನ್ನ ದರದಲ್ಲಿ ಲಭ್ಯ. ಆದರೆ, ನಾವು ಹೇಳಲು ಹೊರಟ ದುಬಾರಿ ಶೂಸ್ ಬೆಲೆ ಎಷ್ಟು ಗೊತ್ತಾ?

ಕೇವಲ 17 ಮಿಲಿಯನ್ ಡಾಲರ್. ನಿಲ್ಲಿ... ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೀ 123 ಕೋಟಿ ರೂ! ಒಂದು ಜತೆ ಶೂಸ್‌ಗೆ 123 ಕೋಟಿ ರೂ. ಇದನ್ನು ಧರಿಸೋರು ಯಾರು? ಗೊತ್ತಿಲ್ಲ. ಸದ್ಯಕ್ಕೆ ದುಬೈ ಮಾರುಕಟ್ಟೆಯಲ್ಲಿ ಈ ಶೂಸ್ ಅನ್ನು ಮಾರಟಕ್ಕಿಡಲಾಗಿದೆ.

ಅಷ್ಟಕ್ಕೂ ಈ ಶೂಸ್‌ನಲ್ಲಿ ಏನಿದೆ?

ಚಿನ್ನ, ವಜ್ರದಲ್ಲಿ ಮಾಡಿರುವ ಈ ಶೂಸ್ ತಯಾರಿಸಲು ಒಂಬತ್ತು ತಿಂಗಳು ತೆಗೆದುಕೊಳ್ಳಲಾಗಿದೆಯಂತೆ. ಈ ದೂಬಾರಿ ಶೂಸ್ ಸೌಂದರ್ಯ ಕಣ್ತುಂಬಿಕೊಳ್ಳಬೇಕೆಂದರೆ ದುಬೈನ ಆಕರ್ಷಕ ಬಹು ಮಹಡಿ ಕಟ್ಟಡವಾದ ಬುರ್ಜ್ ಅರಬ್‌ಗೆ ಹೋಗಬೇಕು.

ಈ ಶೂಸ್ ಅನ್ನು ಕೊಳ್ಳಲಿಕ್ಕೆ ಆಗುತ್ತೋ, ಇಲ್ಲವೋ. ಆದರೆ, ನೋಡಿಯಾದ್ರೂ ಬರಬೇಕು ಅಲ್ಲವೇ ಈ ಶೂಸನ್ನು?