ಇದು ಜಗತ್ತಿನ ದುಬಾರಿ ರೆಸಾರ್ಟ್... ಇದರ ಬಾಡಿಗೆ ಕೇಳಿಯೊಮ್ಮೆ!
ರೆಸಾರ್ಟ್‌ಗೆ ಹೋಗಿ ಎಂಜಾಯ್ ಮಾಡೋದು ಯಾರಿಗಿಷ್ಟವಿಲ್ಲ ಹೇಳಿ? ಸಮ್ಮರ್ ಹಾಲಿಡೇಸ್, ವೀಕೆಂಡ್ ಹಾಲಿಡೇಸ್ ಬಂದ್ರೆ ಸಾಕು ಫ್ರೆಂಡ್ಸ್, ಫ್ಯಾಮಿಲಿ ಜೊತೆ ರೆಸಾರ್ಟ್‌ಗೆ ಹೋಗುತ್ತೀರಿ. ರೆಸಾರ್ಟ್‌ಗೆ ನೀವೆಷ್ಟು ಬಾಡಿಗೆ ಕೊಡುತ್ತೀರಿ? ತುಂಬಾ ಶ್ರೀಮಂತರಾದರೆ 1 ಲಕ್ಷದವರೆಗೆ ಬಾಡಿಗೆ ನೀಡಬಹುದು ಆಲ್ವಾ? ಆದ್ರೆ ಈ ರೆಸಾರ್ಟ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಿ.
ದೂರದ ಫಿಲಿಪೈನ್ಸ್‌ನಲ್ಲೊಂದು ದ್ವೀಪವಿದೆ. ಅದು ಅಕ್ಷರಶಃ ಸಿನಿಮಾದಲ್ಲಿ ಕಾಣುವ ಆಗರ್ಭ ಶ್ರೀಮಂತರೇ ಹೋಗುವಂಥ, ಪ್ರಪಂಚದ ಅತ್ಯಂತ ದುಬಾರಿ ದ್ವೀಪ. ಅದರ ಬಾಡಿಗೆ ಬಗ್ಗೆ ನೀವು ಯೋಚಿಸಲು ಸಾಧ್ಯವಿಲ್ಲ. ಅಷ್ಟೊಂದು ದುಬಾರಿ ದ್ವೀಪವಿದು. ಬನ್ನಿ ಅದು ಯಾವ ದ್ವೀಪ, ಎಲ್ಲಿ ಇದೆ ಹಾಗೂ ಅದರ ಬೆಲೆ ಎಷ್ಟು ನೋಡೋಣ...
ಫಿಲಿಪೈನ್ಸ್ ನ ಬನ್ವಾ ಪ್ರೈವೆಟ್ ಐಲ್ಯಾಂಡ್ ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್. ಸುಮಾರು 15 ಎಕರೆ ಪ್ರದೇಶದಲ್ಲಿ ಹರಡಿರುವ ಈ ರೆಸಾರ್ಟಿನಲ್ಲಿ 6 ವಿಲ್ಲಾ ಮತ್ತು 12 ಗಾರ್ಡನ್ ಇವೆ. ಒಂದು ವಿಲ್ಲಾದಲ್ಲಿ 8 ಜನರು ನೆಲೆಸುವಂಥ ಎಲ್ಲಾ ವ್ಯವಸ್ಥೆ ಇದ್ದು, ಈ ವಿಲ್ಲಾದಲ್ಲಿ ಒಂದು ರಾತ್ರಿ ಕಳೆಯಲು ಎಷ್ಟು ಹಣ ಗೊತ್ತಾ?
ಭೂಮಿ ಮೇಲೆ ಈಕೆ ಕಾಲಿಡದ ದೇಶವಿಲ್ಲ!
ಕೇವಲ ಒಂದು ರಾತ್ರಿಗೆ ಈ ವಿಲ್ಲಾಗೆ ಒಂದು ಲಕ್ಷ ಡಾಲರ್! ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 70 ಲಕ್ಷ ರೂ. ಎಲ್ಲಾ ವಿಲ್ಲಾದ ಮಹಡಿ ಮೇಲೂ ಇನ್ಫಿನಿಟಿ ಪೂಲ್ ಇದೆ. ರೆಸಾರ್ಟ್ ಸುತ್ತಲೂ ನೀರಿನಿಂದ ತುಂಬಿರುತ್ತದೆ. ಆದುದರಿಂದ ಅಲ್ಲಿಗೆ ತಲುಪಬೇಕಾದರೆ ಹೆಲಿಕಾಪ್ಟರಿನಲ್ಲೇ ಹೋಗಬೇಕು. ಈ ರೆಸಾರ್ಟ್ ಹೆಸರು ಬನ್ವಾ ಪ್ರೈವೇಟ್ ಐಲ್ಯಾಂಡ್. ಈ ರೆಸಾರ್ಟಿನಲ್ಲಿ ಒಂದೇ ಸಮಯಕ್ಕೆ 48 ಜನ ಇರಬಹುದು.
ಈ ರೆಸಾರ್ಟ್‌ನ ವೆಬ್‌ಸೈಟ್ ಅನುಸಾರ ಇದೊಂದು ಪ್ರೈವೇಟ್ ವರ್ಲ್ಡ್. ಇಲ್ಲಿ ಸಮಯ ನಿಂತು ಬಿಡುತ್ತದೆ. ಇಲ್ಲಿನ ತಾಪಮಾನ ಮಾತ್ರ ಯಾವತ್ತೂ 30 ಡಿಗ್ರಿಗಿಂತ ಕಡಿಮೆ ಇರೋಲ್ಲ. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳು ಹಾಗೂ ಫ್ರೆಶ್ ಸೀ ಫುಡ್‌ಗಳನ್ನೇ ಬಳಸುತ್ತಾರೆ. ಇಲ್ಲಿ ಆ್ಯಕ್ಟಿವಿಟಿಗಾಗಿ ಸ್ಕೂಬಾ ಡೈವಿಂಗ್, ಸ್ನೋ ಕಿಲ್ಲಿಂಗ್, ಜೆಟ್ ಸ್ಕೈಯಿಂಗ್ ಮೊದಲಾದ ಸಾಹಸಮಯ ವ್ಯವಸ್ಥೆಗಳಿವೆ. ಇದರ ಜೊತೆಗೆ ಡೆಸರ್ಟ್ ಸ್ಟೈಲ್ ನ ಗಾಲ್ಫ್ ಕೂಡ ಆಡಬಹುದು.
ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ!