ಚಪ್ಪಲಿಯಿಂದಲೇ ಗೊತ್ತಾಗುತ್ತೆ ಮಹಿಳೆಯರ ವ್ಯಕ್ತಿತ್ವ....

life | Saturday, June 9th, 2018
Suvarna Web Desk
Highlights

ಮಹಿಳೆಯರು ತಾವು ಸುಂದರವಾಗಿ ಕಾಣುವುದಷ್ಟೆ ಅಲ್ಲದೆ ತಾವು ಧರಿಸುವ ಉಡುಪಿಗೂ ಮೆಚ್ಚುಗೆ ಸಿಗಬೇಕೆಂದು ಬಯಸುತ್ತಾರೆ.  ಧರಿಸುವ ಉಡುಪಿಗೆ ಮ್ಯಾಚ್ ಆಗೋ ಚಪ್ಪಲಿ, ಕಿವಿಯೋಲೆ, ಸರ....ಎಲ್ಲವನ್ನೂ ಜೋಡಿಸಿಕೊಳ್ಳುವುದರಲ್ಲಿಯೂ ಹೆಣ್ಣು ಜಾಣ್ಮೆ ತೋರುತ್ತಾಳೆ. ಅದಕ್ಕಾಗಿಯೇ ಚಪ್ಪಲಿ ಆ್ಯಡ್ಸ್ ಸಿಕ್ಕಾಪಟ್ಟೆ ಬರುತ್ತೆ. ಹೊಸ ಚಪ್ಪಲಿ ಕೊಂಡರೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ಎಂದರೆ ಚಪ್ಪಲಿಯ ಚಮಕ್ ಹೇಗಿರಬಹುದು, ನೀವೇ ಯೋಚಿಸಿ. 

ಮಹಿಳೆಯ ವ್ಯಕ್ತಿತ್ವ ಹೇಗೆಂಬದು ತಿಳಿದುಕೊಳ್ಳಲು ಆಕೆ ಕಾಲು ನೋಡಬೇಕಂತೆ! ಹೌದೂ, ಸ್ಲಿಪ್ಪರಿಗೂ, ಮಹಿಳೆಯ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂದು ಸಂಶೋಧನೆಯೊಂದು ಸಾಬೀತು ಮಾಡಿದೆ. ಹಾಗಾದರೆ ಎಂಥ ಚಪ್ಪಲಿ ಧರಿಸುವವರ ವ್ಯಕ್ತಿತ್ವ ಹೇಗಿರುತ್ತೆ?

ಮಹಿಳೆ ಹೈ ಹೀಲ್ಡ್ ಚಪ್ಪಲಿಗಳನ್ನು ತೊಡುತ್ತಾಳೆಂದಾದರೆ, ಆಕೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಹವಣಿಸುತ್ತಾಳೆಂದರ್ಥ. ಸಿರಿವಂತೆಯಾಗಿದ್ದರಂತೂ ಹೈ ಹೀಲ್ಡ್ ಚಪ್ಪಲಿ ತೊಡುವುದೇ ಹೆಚ್ಚು. ಆದರೆ ಆರ್ಥಿಕ ಪರಿಸ್ಥಿತಿ ಕುಂದಲು ಆರಂಭಿಸಿದರೆ ನಾವು ಆಕೆಯ ಚಪ್ಪಲಿಗಳಲ್ಲೂ ವ್ಯತ್ಯಾಸ ಕಾಣಬಹುದೆಂದು ಈ ಅಧ್ಯಯನದಿಂದ ತಿಳಿದು ಬಂದಿದೆ.

'ಬಹುತೇಕ ಮಹಿಳೆಯರ ಬಳಿ ಕೈಯಲ್ಲಿ ದುಡ್ಡಿಲ್ಲದಿದ್ದರೂ, ಸಿರಿವಂತರೆಂದು ತೋರಿಸಲು ಇಷ್ಟಪಡುತ್ತಾರೆ.  ಇದೇ ಕಾರಣದಿಂದ ಅವರು ಬಡವರಿಂದ ದೂರವುಳಿಯಲು ಪ್ರಯತ್ನಿಸುತ್ತಾರೆ. ಮಹಿಳೆಯರು ಶ್ರೀಮಂತರಿರುವ ಪ್ರದೇಶಕ್ಕೆ ತೆರಳುವ ವೇಳೆ ಅವರಿರುವಂತೆಯೇ ಕಾಣ ಬಯಸುತ್ತಾರೆ. ಅದಕ್ಕೆ ಹೈ ಹೀಲ್ಡ್ ಚಪ್ಪಲಿ ತೊಡುತ್ತಾರೆ. ಆದರೆ ಬಡವರು ಇರುವ ಪ್ರದೇಶಗಳಿಗೆ ತೆರಳುವಾಗ ಈ ಬಗ್ಗೆ ಯೋಚಿಸದೇ , ಹಳೆ ಚಪ್ಪಲಿಗಳನ್ನೇ ತೊಡುತ್ತಾರೆ,' ಎನ್ನುತ್ತಾರೆ ಅಮೆರಿಕದ ನಾರ್ಥ್ ಕ್ಯಾರೋಲಿನ್ ವಿಶ್ವವಿದ್ಯಾಲಯಯದ ಅಸಿಸ್ಟೆಂಟ್ ಪ್ರೊಫೆಸರ್ ಕುರ್ಟ್ ಗ್ರೋ.

'ಮನುಷ್ಯರಿಗೆ ಆರಂಭದಿಂದಲೂ ಸ್ಥಾನಮಾನ ಹಾಗೂ ಪ್ರತಿಷ್ಠೆ ಬಗ್ಗೆ ಹೆಚ್ಚು ಆಸಕ್ತಿ. ಇದೇ ಕಾರಣದಿಂದ ಅವರು ಸಮಾಜದಲ್ಲಿ ಶಕ್ತಿವಂತರೊಂದಿಗೆ ಕಾಣ ಬಯಸುತ್ತಾರೆ ಹಾಗೂ ಬಡವರನ್ನು ಕಡೆಗಣಿಸುತ್ತಾರೆ,' ಎಂಬುವುದು ಗ್ರೋ ಅಭಿಪ್ರಾಯ. 

ಇಂದಿನ ಈ ಫ್ಯಾಷನ್ ನಮ್ಮಲ್ಲಿರುವ ಆಕಾಂಕ್ಷೆಯನ್ನು ಹೊರ ಹಾಕುವುದರೊಂದಿಗೆ, ನಮ್ಮ ಸ್ಥಾನಮಾನದ ಕುರಿತು ಯೋಚಿಸಲು ಪ್ರೇರೇಪಿಸುತ್ತದೆ. ಆದರೆ ಮತ್ತೊಂದೆಡೆ ಇದು ಶ್ರೀಮಂತ ಹಾಗೂ ಬಡ ವರ್ಗದ ನಡುವೆ ಒಂದು ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ. ಪುರುಷರಲ್ಲೂ ಈ ರೀತಿಯ ಮನಸ್ಥಿತಿ ಇರುತ್ತದೆ. ಇದು ಅವರು ತೊಡುವ ಉಡುಪಿನಲ್ಲಿಯೇ ವ್ಯಕ್ತವಾಗುತ್ತದೆ.

Comments 0
Add Comment

    Related Posts

    Suicide High Drama In Mysuru

    video | Wednesday, March 21st, 2018
    Vaishnavi Chandrashekar