ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸೂಟ್ ಆಗೋ ಧಿರಿಸು ಜೀನ್ಸ್.  ಕಂಫರ್ಟಬೆಲ್ ಅನ್ನೋ ಕಾರಣಕ್ಕಲ್ಲದೇ, ಮೆಂಟೈನ್ ಮಾಡೋದೂ ಸುಲಭವೆಂಬ ಕಾರಣಕ್ಕೆ ಈ ತೊಡುಗೆಯನ್ನು ಪ್ರಿಫರ್ ಮಾಡೋ ಈ ಜೀನ್ಸಿನ ಸಂಶೋಧನೆಯೊಂದರ ಫಲಿತಾಂಶವಿದು. 

ಜೀನ್ಸ್ ಎಲ್ಲಿಗೆ ಬೇಕಾದರೂ ಧರಿಸ ಬಹುದಾದ ಬಟ್ಟೆ. ಕಂಫರ್ಟ್ ಒಂದೇ ಅಲ್ಲ, ಯಾವ ರೀತಿಯ ಟಾಪ್ ಬೇಕಾದರೊ ಮ್ಯಾಚ್ ಮಾಡಿಕೊಳ್ಳಬಹುದು ಎನ್ನುವುದು ಮತ್ತೊಂದು ಬೆನಫಿಟ್.

ಜೀನ್ಸ್ ಪ್ಯಾಂಟ್‌ನಲ್ಲಿ ಜೇಬೂ ಇದ್ದೇ ಇರುತ್ತೆ. ವಿಷಯವೆಂದರೆ ಮಹಿಳೆಯ ಪ್ಯಾಂಟ್ ಹಾಗೂ ಪುರುಷರ ಪ್ಯಾಂಟ್ ಜೇಬಿನ ಸೈಜ್ ವಿಭಿನ್ನವಾಗಿರುತ್ತದೆ. ಮಹಿಳೆಯರ ಪ್ಯಾಂಟಲ್ಲಿ ಜೇಬು ಚಿಕ್ಕದಿರುತ್ತೆ.

ಸಂಶೋಧನೆ ಪ್ರಕಾರ ಹೆಂಗಸರ ಜೇನ್ಸ್ ಜೇಬು ಶೇ.48ರಷ್ಟು ಗಂಡಸರಿಗಿಂತ ಚಿಕ್ಕದಾಗಿರುತ್ತದೆ ಮತ್ತು 6.5% ನೇರವಾಗಿರುತ್ತದೆ. ಗಂಡಸರ ಜೇಬು 9.1 ಇಂಚು ಉದ್ದ ಮತ್ತು 6.5 ಇಂಚು ಅಗಲವಿರುತ್ತದೆ, ಆದರೆ ಹೆಂಗಸರ ಜೇಬು 5.6 ಇಂಚು ಉದ್ದ ಮತ್ತು 6 ಅಗಲವಿರುತ್ತದೆ.