ನೀವು ಗಡ್ಡಧಾರಿಯೇ, ಹುಡುಗಿಯರಿಗೆ ಇಷ್ಟವಾಗೋಲ್ವಂತೆ?

Women dislike men with beard
Highlights

ಗಡ್ಡವಿದ್ದರೆ ತಾವು ಹ್ಯಾಂಡ್ಸಮ್ ಎಂದೇ ನಂಬಿರುತ್ತಾರೆ ಇಂದಿನ ಯುವಕರು. ಕುರುಚಲು ಗಡ್ಡವಿರುವ ಗಂಡು, ಹೆಣ್ಣಿನ ಹೃದಯದಲ್ಲಿ ಸ್ಥಾನ ಪಡೆಯುವುದು ಹೌದಾದರೂ, ವಿಪರೀತ ಗಡ್ಡ ಇರುವವರನ್ನು ಅವರು ಸಹಿಸಿಕೊಳ್ಳಲ್ವಂತೆ!

ಹೌದು, ಇದನ್ನು ಪುಷ್ಟೀಕರಿಸುವ ಸಮೀಕ್ಷೆಯೊಂದು ಹೊರಬಿದ್ದಿದೆ. ವಿಪರೀತ ಗಡ್ಡ ಇರುವವನೊಟ್ಟಿಗೆ ಹುಡುಗಿಯರಿಗೆ ರೊಮ್ಯಾನ್ಸ್ ಮಾಡಲು ಮನಸ್ಸು ಬರೋದಿಲ್ವಂತೆ.

ಕ್ಲೀನ್ ಶೇವನ್ ಫೇಸ್ ಹುಡಗರನ್ನು ಶೇ.93ರಷ್ಟು ಹುಡುಗಿಯರು ಇಷ್ಟಪಡುತ್ತಾರೆಂದು ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ. ಇದು ಬಹುತೇಕ ಭಾರತೀಯ ಮಹಿಳಾ ಮಣಿಗಳೂ ಹೌದೆನ್ನುವಂಥ ಸಮೀಕ್ಷೆ.

ಕಟ್ಟು ಮಸ್ತು ಮೈಕಟ್ಟಿರುವ, ಒರಟು ಮುಖದ ಗಂಡಸರೆಂದರೆ ಮಹಿಳೆಯರಿ ಅಚ್ಚುಮೆಚ್ಚಂತೆ. ಆದರೆ, ರೊಮ್ಯಾನ್ಸ್ ಮಾಡುವಾಗ ಮಾತ್ರ ಹೆಣ್ಣನ್ನು ಹೂವಿನಂತೆ ಹ್ಯಾಂಡಲ್ ಮಾಡೋ ಗಂಡಾಗಲಿ ಎಂಬುವುದು ಬಹುತೇಕ ಮಹಿಳೆಯರ ಆಶಯವಂತೆ. ಗಡ್ಡ ಚುಚ್ಚಿದರೆ ಹೆಣ್ಣುಮಕ್ಕಳಿಗೆ ಸಹಿಸಿಕೊಳ್ಳುವುದು ಕಷ್ಟವಂತೆ!

ನಿಮ್ಮ ಮುಖದಲ್ಲಿ ಗಡ್ಡ ಇರಬೇಕೋ ಬೇಡವೋ ಎಂಬುದನ್ನು ನೀವೇ ನಿರ್ಧರಿಸಿ.

loader