Social Belief : ಅಂತ್ಯಸಂಸ್ಕಾರದ ವೇಳೆ ಬಿಳಿ ಬಟ್ಟೆ ಧರಿಸುವುದ್ಯಾಕೆ?
ಬಾಲಿವುಡ್ ನಲ್ಲಿ ಯಾವುದೇ ಸಾವಾದ್ರೂ ಅಂತಿಮ ದರ್ಶನಕ್ಕೆ ಬರುವ ಕಲಾವಿದರು ಬಿಳಿ ಬಟ್ಟೆ ಧರಿಸಿ ಬರ್ತಾರೆ. ಅಂತ್ಯಸಂಸ್ಕಾರದ ವೇಳೆ ಯಾಕೆ ಇದೇ ಬಣ್ಣದ ಬಟ್ಟೆ ಧರಿಸ್ಬೇಕು ಎಂಬ ಪ್ರಶ್ನೆ ಕಾಡೋದು ಸಹಜ. ಯಾಕೆ ಬಟ್ಟೆ ಇಂಪಾರ್ಟೆಂಟ್ ಅನ್ನೋದನ್ನು ನಾವು ಹೇಳ್ತೇವೆ.
ಮನೆಯಲ್ಲಿ ಸಾವಾದಾಗ ಇಡೀ ಕುಟುಂಬ ದುಃಖದಲ್ಲಿರುತ್ತದೆ. ಆಪ್ತರನ್ನು ಕಳೆದುಕೊಂಡ ನೋವು ಅವರನ್ನು ಕಾಡ್ತಿರುತ್ತದೆ. ಈ ಮಧ್ಯೆಯೇ ಅಂತಿಮ ದರ್ಶನ, ಅಂತ್ಯಕ್ರಿಯೆಯನ್ನು ನೆರವೇರಿಸಬೇಕಾಗುತ್ತದೆ. ಸಂಬಂಧಿಕರು, ಕುಟುಂಬಸ್ಥರು ಅಥವಾ ಸ್ನೇಹಿತರು ಸಾವನ್ನಪ್ಪಿದ ಸುದ್ದಿ ಕೇಳಿದಾಗ ಅಂತಿಮ ದರ್ಶನ ಪಡೆಯಲು ಮುಂದಾಗ್ತೇವೆ. ಅಂತಿಮ ದರ್ಶನಕ್ಕೆ ಹೋಗುವ ವೇಳೆ ಬಹುತೇಕರು ಬಿಳಿ ಬಣ್ಣದ ಬಟ್ಟೆ ಧರಿಸಿ ಹೋಗ್ತಾರೆ. ಅಂತಿಮ ದರ್ಶನಕ್ಕೆ ಬಿಳಿ ಬಟ್ಟೆ ಧರಿಸುವ ಪದ್ಧತಿ ಭಾರತದಲ್ಲಿ ಮಾತ್ರವಿದೆ. ವಿದೇಶಗಳಲ್ಲಿ ಕಪ್ಪು ಬಟ್ಟೆ ಧರಿಸಿ ಅಂತಿಮ ದರ್ಶನಕ್ಕೆ ತೆರಳ್ತಾರೆ. ನಿಜ ಹೇಳ್ಬೇಕೆಂದ್ರೆ ಈ ಬಣ್ಣಗಳು ಎಂದೂ ಸಾವಿನೊಂದಿಗೆ ಸಂಬಂಧ ಹೊಂದಿಲ್ಲ. ಆಪ್ತರ ಸಾವಾದಾಗ ಯಾವ ಬಣ್ಣದ ಬಟ್ಟೆ ಧರಿಸಬೇಕು ಅಥವಾ ಹೇಗೆ ದುಃಖ ವ್ಯಕ್ತಪಡಿಸಬೇಕು ಎಂಬುದರ ಬಗ್ಗೆ ಯಾವುದೇ ಲಿಖಿತ ನಿಯಮವಿಲ್ಲ. ಇಂದು ನಾವು ಸಾವಿನ ಮನೆಯಲ್ಲಿ ಬಿಳಿ ಅಥವಾ ಕಪ್ಪು ಬಣ್ಣದ ಬಟ್ಟೆ ಏಕೆ ಧರಿಸಲಾಗುತ್ತದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಅಂತ್ಯಕ್ರಿಯೆ (Funeral) ಯಲ್ಲಿ ಕಪ್ಪು (Black) ಬಟ್ಟೆ ಏಕೆ ಧರಿಸುತ್ತಾರೆ ? : ಬಿಳಿ (White) ಬಣ್ಣಕ್ಕೆ ಬರುವ ಮೊದಲು ನಾವು ಅಂತ್ಯಕ್ರಿಯೆಯ ವೇಳೆ ವಿದೇಶಗಳಲ್ಲಿ ಏಕೆ ಕಪ್ಪು ಬಟ್ಟೆ ಧರಿಸ್ತಾರೆ ಎಂಬುದನ್ನು ಹೇಳ್ತೇವೆ. ಜರ್ನಲ್ ಆಫ್ ಇಂಟರ್ನ್ಯಾಷನಲ್ ಕಲರ್ ಅಸೋಸಿಯೇಷನ್ ನಲ್ಲಿ ಈ ಬಗ್ಗೆ ವಿವರವಿದೆ. ಅದರ ಪ್ರಕಾರ, ಕಪ್ಪು ಬಣ್ಣ ನಕಾರಾತ್ಮಕ ಚಿಂತನೆಯೊಂದಿಗೆ ಸಂಪರ್ಕ ಹೊಂದಿದೆ. ಸಾವು (Death) , ಭಯ ಮತ್ತು ಸಂಕಟವನ್ನು ಕಪ್ಪು ಬಣ್ಣಕ್ಕೆ ಹೋಲಿಕೆ ಮಾಡಲಾಗುತ್ತದೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಸಾವನ್ನು ಕತ್ತಲೆಗೆ ಹೋಲಿಕೆ ಮಾಡುವ ಜನರು ಕಪ್ಪು ಬಣ್ಣದ ಬಟ್ಟೆಯನ್ನು ಅಂತ್ಯಸಂಸ್ಕಾರದ ವೇಳೆ ಧರಿಸ್ತಾರೆ.
Hindu Culture : ಪೂಜಾರಿ ಜುಟ್ಟು ಬಿಡಲು ಕಾರಣವೇನು ಗೊತ್ತಾ?
ಕಪ್ಪು ಬಣ್ಣವನ್ನು ಆತ್ಮ ದೇಹವನ್ನು ತೊರೆಯುವು ಸೂಚನೆ ಎಂದೂ ಹೇಳಲಾಗುತ್ತದೆ. ಇದೇ ಕಾರಣಕ್ಕೂ ಅಂತ್ಯಕ್ರಿಯೆಯ ಸಮಯದಲ್ಲಿ ಕಪ್ಪು ಬಟ್ಟೆಯನ್ನು ಧರಿಸಬೇಕು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಕಣ್ಣು ಮುಚ್ಚಿದರೆ ಕಾಣೋದು ಬರೀ ಕತ್ತಲು. ಸಾವು ಅಂದ್ರೆ ಕಣ್ಣು ಮುಚ್ಚಿದಂತೆ. ಹಾಗಾಗಿ ಸಾವಿನ ಮನೆಯಲ್ಲಿ ಜನರು ಕಪ್ಪು ಬಟ್ಟೆ ಧರಿಸಲು ಆದ್ಯತೆ ನೀಡ್ತಾರೆ. ಭಾರತದಲ್ಲಿಯೂ ಅನೇಕ ಕಡೆ ಕಪ್ಪು ಬಣ್ಣವನ್ನು ದುಃಖವೆಂದೇ ನೋಡಲಾಗುತ್ತದೆ. ಯಾವುದೇ ಶುಭ ಸಂದರ್ಭವಿರಲಿ ಇಲ್ಲ ಹುಟ್ಟು ಹಬ್ಬದ ಸಮಾರಂಭವಿರಲಿ ಕಪ್ಪು ಬಣ್ಣ ಧರಿಸದಂತೆ ಸಲಹೆ ನೀಡಲಾಗುತ್ತದೆ. ಕಪ್ಪು, ನೋವಿನ, ಬೇಸರದ ಸೂಚಕವೆಂದು ಭಾರತದಲ್ಲೂ ನಂಬಲಾಗಿದೆ.
ಈ ಕೆಲಸ ಮಾಡಿದ್ರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ತುಂಬಾನೆ ಕೋಪ ಮಾಡ್ತಾಳೆ
ಭಾರತದಲ್ಲೇಕಿದೆ ಬಿಳಿ ಬಣ್ಣಕ್ಕೆ ಮಾನ್ಯತೆ ? : ವಿದೇಶಗಳಲ್ಲಿ ಕಪ್ಪು ಬಣ್ಣವನ್ನು ಅಂತ್ಯಕ್ರಿಯೆಯ ವಿಧಿಗಳಿಗೆ ಬಳಸಿದ್ರೆ ಭಾರತದಲ್ಲಿ ಬಿಳಿ ಬಣ್ಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಐತಿಹಾಸಿಕ ಘಟನೆಗಳನ್ನು ನೋಡಿದಾಗ, ಅಲ್ಲಿಯೂ ಹೆಚ್ಚಾಗಿ ಬಿಳಿ ಬಣ್ಣವನ್ನು ಶೋಕದ ಬಣ್ಣವೆಂದು ಪರಿಗಣಿಸಲಾಗಿತ್ತು. ಈ ಬಣ್ಣಕ್ಕೆ ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲ. ಯಾರು ಬೇಕಾದರೂ ಇದನ್ನು ಖರೀದಿಸಬಹುದು. ಅದಕ್ಕಾಗಿಯೇ ಇದನ್ನು ಅತ್ಯಂತ ಸಾಮಾನ್ಯ ಬಣ್ಣ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಬಿಳಿ ಬಣ್ಣವನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಶುದ್ಧತೆ ಮತ್ತು ಮುಗ್ಧತೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಬಣ್ಣವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಕೆಲ ರಾಷ್ಟ್ರಗಳಲ್ಲೂ ಅಂತಿಮ ಸಂಸ್ಕಾರಕ್ಕೆ ಬಿಳಿ ಬಣ್ಣಕ್ಕೆ ಮಹತ್ವ ನೀಡಲಾಗುತ್ತದೆ. ಹಿಂದೆ ಹೇಳಿದಂತೆ ಅಂತ್ಯಸಂಸ್ಕಾರದ ವೇಳೆ ಯಾವ ಬಟ್ಟೆ ಧರಿಸಬೇಕು ಎನ್ನುವ ಬಗ್ಗೆ ಎಲ್ಲಿಯೂ ಸ್ಪಷ್ಟ ಉಲ್ಲೇಖವಿಲ್ಲ. ಆದ್ರೆ ಯಾವುದೇ ದೇಶದಲ್ಲಿ ಕೂಡ ಅಂತಿಮ ಸಂಸ್ಕಾರದ ವೇಳೆ ಗಾಢ ಬಣ್ಣದ ಬಟ್ಟೆಯನ್ನು ಧರಿಸುವುದಿಲ್ಲ.