ಬೆಳಗಿನ ಹೊತ್ತು ನಮ್ಮ ಮನಸ್ಸು ಫ್ರೆಶ್ ಆಗಿರುತ್ತದೆ. ಆಯಾಸವೆಲ್ಲ ನಿದ್ದೆಯಲ್ಲಿ ಕಳೆದು ದೇಹ ನವ ಚೈತನ್ಯದಿಂದ ಕೂಡಿರುತ್ತದೆ. ಇನ್ನು ಬೆಳಗಿನ ಜಾವದಲ್ಲಿ ಮೆದುಳಿನ ನೆನಪಿನ ಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಎಂದು ವೈದ್ಯರು ಕೂಡ ಹೇಳುತ್ತಾರೆ.
ವಿದ್ಯಾರ್ಥಿಗಳು ಬೆಳಿಗ್ಗೆ ಬೇಗ ಎದ್ದು ಓದಬೇಕು ಎಂದು ಹಿರಿಯರು ಹೇಳುತ್ತಾರೆ. ಈ ಉಪದೇಶ ಬಂದಿದ್ದು ವೇದ ಕಾಲದಿಂದ. ಆಗೆಲ್ಲ ಋಷಿ-ಮುನಿಗಳು ತಮ್ಮ ಶಿಷ್ಯರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ವೇದಪಾಠ ಮನನ ಮಾಡಿಕೊಳ್ಳುವಂತೆ ಹೇಳುತ್ತಿದ್ದರು. ಬ್ರಾಹ್ಮಿ ಮುಹೂರ್ತ ಅಂದರೆ ಸೂರ್ಯೋದಯವಾಗುವುದಕ್ಕಿಂತ ಮುಂಚಿನ 48 ನಿಮಿಷಗಳು. ಆ ಕಾಲದಲ್ಲಿ ಗಡಿಯಾರ ಇಲ್ಲದ ಕಾರಣ ಸಮಯವನ್ನು ಮುಹೂರ್ತಗಳಲ್ಲಿ ಹೇಳುತ್ತಿದ್ದರು. ಒಟ್ಟಿನಲ್ಲಿ ಸೂರ್ಯೋದಯಕ್ಕೆ ಮುಂಚೆ ಎದ್ದು ಓದಲು ಶುರುಮಾಡಬೇಕು ಎಂಬ ಉಪದೇಶ ಶಾಸ್ತ್ರೀಯ ಭಾಷೆಯಲ್ಲಿ ‘ಬ್ರಾಹ್ಮಿ ಮುಹೂರ್ತ'ದಲ್ಲಿ ಓದಬೇಕು ಎಂದಾಯಿತು.
ಅದು ಸರಿ, ಏಕೆ ಈ ಸಮಯದಲ್ಲಿ ಎದ್ದು ಓದಬೇಕು? ಇದಕ್ಕೆ ಉತ್ತರ ನಮಗೇ ಗೊತ್ತು. ಬೆಳಗಿನ ಹೊತ್ತು ನಮ್ಮ ಮನಸ್ಸು ಫ್ರೆಶ್ ಆಗಿರುತ್ತದೆ. ಆಯಾಸವೆಲ್ಲ ನಿದ್ದೆಯಲ್ಲಿ ಕಳೆದು ದೇಹ ನವ ಚೈತನ್ಯದಿಂದ ಕೂಡಿರುತ್ತದೆ. ಇನ್ನು ಬೆಳಗಿನ ಜಾವದಲ್ಲಿ ಮೆದುಳಿನ ನೆನಪಿನ ಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಎಂದು ವೈದ್ಯರು ಕೂಡ ಹೇಳುತ್ತಾರೆ. ಓದುವುದರ ಮುಖ್ಯ ಉದ್ದೇಶವೇ ಅದನ್ನು ತಿಳಿದುಕೊಳ್ಳುವುದು ಹಾಗೂ ನೆನಪಿನಲ್ಲಿ ಇಟ್ಟುಕೊಳ್ಳುವುದಲ್ಲವೇ? ಹೀಗಾಗಿ ಈ ಸಮಯದಲ್ಲಿ ಓದಿದ್ದು ಚೆನ್ನಾಗಿ ನೆನಪಿರುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಬ್ರಾಹ್ಮಿ ಮುಹೂರ್ತದಲ್ಲಿ ಓದುವುದು ಒಳ್ಳೆಯದು ಎಂಬ ಸಂಪ್ರದಾಯ ಬಂತು. ಇನ್ನೊಂದು ಮುಖ್ಯ ಕಾರಣವೆಂದರೆ, ಈ ಸಮಯದಲ್ಲಿಗದ್ದಲ ಕಡಿಮೆ. ಹಾಗಾಗಿ ಓದುವವರ ಏಕಾಗ್ರತೆಗೆ ಭಂಗ ಬರುವುದಿಲ್ಲ. ಹಕ್ಕಿಯ ಚಿಲಿಪಿಲಿ, ತಂಪಾದ ಪ್ರಶಾಂತ ವಾತಾವರಣ, ಶುದ್ಧ ಗಾಳಿ ಹಾಗೂ ಶುದ್ಧ ಮನಸ್ಸು- ಇವುಗಳ ಕಾರಣದಿಂದ ಓದಿದ್ದು ಚೆನ್ನಾಗಿ ತಲೆಗೆ ಹತ್ತುತ್ತದೆ. ಇಲ್ಲಿ ಬ್ರಾಹ್ಮಿ ಮುಹೂರ್ತ ಅಥವಾ ಸೂರ್ಯೋದಯಕ್ಕೆ ಮುಂಚೆ ಎಂಬುದು ಬೆಳಗ್ಗೆ ಆರು ಗಂಟೆಗೂ ಮೊದಲು ಏಳಿ ಎಂಬುದರ ಸೂಚಕಗಳಷ್ಟೆ.
epaperkannadaprabha.com
