ಹೆಣ್ಣಿಗೆ ಕನ್ಯತ್ವ ಪೊರೆ ಹರಿಯುವಾಗ ಯೋನಿಯಲ್ಲಿ ಹೇಗೆ ರಕ್ತ ಸ್ರಾವವಾಗುತ್ತದೋ, ಹಾಗೆಯೇ ಪುರುಷರಿಗೂ ಲೈಂಗಿಕ ಕ್ರಿಯೆ ವೇಳೆ ರಕ್ತ ಸ್ರಾವವಾಗುವ ಸಾಧ್ಯತೆ ಇರುತ್ತದೆ. ಇದಕ್ಕೇನು ಕಾರಣ?

ಸಾಮಾನ್ಯವಾಗಿ ಮೊದಲ ಸಲ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವವರಲ್ಲಿ ಈ ಸಮಸ್ಯೆ ಕಾಡೋದು ಸಹಜ. ಅದರಲ್ಲಿಯೂ ಹದಿವಯಸ್ಸಿನಲ್ಲಿ ಇಂಥ ದುಸ್ಸಾಹಸಕ್ಕೆ ಕೈ ಹಾಕಿದರಂತೂ ಅಪಾಯ ಕಟ್ಟಿಟ್ಟ ಬುತ್ತಿ. 

ಅವಸರವಾಗಿಯೋ, ಏನು, ಎಂಥ ಅರಿವಿಲ್ಲದೇ ದುಸ್ಸಾಹಸಕ್ಕೆ ಕೈ ಹಾಕಿದರೆ ಶಿಶ್ನದಲ್ಲಿ ಬ್ಲೀಡ್ ಆಗುತ್ತದೆ.  ಪುರುಷರ ಶಿಶ್ನ ಮುಂದೊಲಗಿನ  ಚರ್ಮ ವೃಷಣ ಕೋಶದವರೆಗೂ ಹಬ್ಬಿರುತ್ತದೆ. ಯಾವಾಗ ಇದರ ಮೇಲೆ ಒತ್ತಡ ಹೆಚ್ಚಾಗುತ್ತದೋ, ಆಗ ಇದು ಹರಿಯುವ ಸಾಧ್ಯತೆ ಇರುತ್ತದೆ. ಇಲ್ಲವೇ ಮೂತ್ರ ಕೋಶ ಉರಿ ಅಥವಾ ಅಲರ್ಜಿಯಾದರೂ ಶಿಶ್ನದಲ್ಲಿ ರಕ್ತ ಒಸರುತ್ತದೆ. ಅತ್ಯಂತ ಸೂಕ್ಷ್ಮ ಚರ್ಮ ಹರಿದಾಗ ರಕ್ತ ಸ್ರಾವ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪುರುಷರು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದಕ್ಕೆ ತಜ್ಞರ ಸಲಹೆ ಪಡೆಯುವುದು ಸೂಕ್ತ. ಭಯ ಬೀಳುವಂಥ ಕಾರಣಗಳೇನೂ ಇರೋಲ್ಲ. 

  • 6 ವಾರಗಳ ಕಾಲ ಸೆಕ್ಸ್ ನಿಲ್ಲಿಸಬೇಕು.
  • ಲೈಂಗಿಕ ಕ್ರಿಯೆ ವೇಳೆ ಅವಸರ ಒಳ್ಳೆಯದಲ್ಲ. ಸಾವಧಾನವಾಗಿ ಮುಂದುವರಿದರೂ ಇಬ್ಬರಿಗೂ ಒಳಿತು.
  • ಶಿಶ್ನ ಅಥವಾ ಯೋನಿ ಒಣಗಿದ್ದರೆ ಲೂಬ್ರಿಕೆಂಟ್ ಬಳಸಬೇಕು.
  • ಕಾಂಡೋಮ್ ಬಳಸುವುದು ಸೂಕ್ತ.
  • ಸ್ವಚ್ಛತೆ ಕಾಪಾಡಿಕೊಳ್ಳುವುದು ಮೊದಲ ಆದ್ಯತೆ ಆಗಬೇಕು. 

ಹೇಳಿಕೊಳ್ಳಲಾಗದಂಥ ಹಲವಾರು ಲೈಂಗಿಕ ಸಮಸ್ಯೆಗಳಿಂದ ಬಳಲುವ ಬದಲು ಸೂಕ್ತ ವೈದ್ಯರಿಂದ ಸಲಹೆ, ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸುಖಾ ಸುಮ್ಮನೆ ಮನಸ್ಸಿಲ್ಲಿಯೇ ಮಂಡಿಗೆ ತಿನ್ನುವುದರಿಂದ, ಇಲ್ಲ ಸಲ್ಲದ ಮಾನಸಿಕ ಸಮಸ್ಯೆಗೂ ಕಾಡಬಹುದು. ನಕಲಿ ವೈದ್ಯರ ಬಳಿ ಹೋಗಿ ನೋವು ಹೇಳಿಕೊಂಡು, ಅವರು ಔಷಧಿ ತಿಂದು ಒಂದಕ್ಕೆ ಎರಡು ಮಾಡಿಕೊಳ್ಳುವ ಮೊದಲು, ಸೂಕ್ತ ತಜ್ಞರಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.